ಕಾರವಾರ: ಮುಂಗಾರು ಮಳೆಯ ಆರಂಭದಲ್ಲೇ ಕಾರವಾರ ತಾಲ್ಲೂಕಿನ ಕಡವಾಡದಲ್ಲಿರುವ ಹಳೆಯ ಸೇತುವೆ ಮಂಗಳವಾರ ಏಕಾಏಕಿ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಸುಂಕೇರಿ ಮಾರ್ಗವಾಗಿ ಸಂಪರ್ಕ ಕಲ್ಪಿಸುವ ಈ ಸೇತುವೆ ಹಲವು ವರ್ಷಗಳಷ್ಟು ಹಳೆಯದಾಗಿದ್ದು, ಮಳೆಯಿಂದಾಗಿ ದುರ್ಬಲಗೊಂಡಿದ್ದ ಸೇತುವೆ ಎರಡು-ಮೂರು ತುಂಡುಗಳಾಗಿ ಕುಸಿದಿದೆ. ಸ್ಥಳೀಯರು ಹಾಗೂ ಮೀನುಗಾರರು ಈ ಪ್ರದೇಶದಲ್ಲಿ ಹೆಚ್ಚಾಗಿ ಓಡಾಡುತ್ತಿದ್ದು, ಘಟನೆ ವೇಳೆ ಯಾರೂ ಸೇತುವೆ ಮೇಲೆ ಇಲ್ಲದ ಕಾರಣ ಸಂಭವನೀಯ ದುರಂತ ತಪ್ಪಿದಂತಾಗಿದೆ.
ಕಡವಾಡ ಸೇತುವೆಯ ಪಕ್ಕದಲ್ಲೇ ಈಗಾಗಲೇ ಹೊಸ ಸೇತುವೆ ನಿರ್ಮಾಣಗೊಂಡಿರುವುದರಿಂದ ಸಾರ್ವಜನಿಕರು ಹೆಚ್ಚಾಗಿ ಅದನ್ನೇ ಬಳಸುತ್ತಿದ್ದರು. ಹೀಗಾಗಿ ಹಳೆಯ ಸೇತುವೆ ಕುಸಿದರೂ ಸಂಚಾರಕ್ಕೆ ಹೆಚ್ಚಿನ ತೊಂದರೆ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.
ಸೇತುವೆ ತುಂಬಾ ಹಳೆಯದಾಗಿದ್ದು, ಅದರ ಸ್ಥಿತಿ ಹದಗೆಟ್ಟಿದ್ದ ಕಾರಣ ಕುಸಿತ ಸಂಭವಿಸಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಹೈಲೈಟ್ಸ್
* ಕಾರವಾರ ತಾಲ್ಲೂಕಿನ ಕಡವಾಡದಲ್ಲಿ ಹಳೆಯ ಸೇತುವೆ ಕುಸಿತ
* ಮೊದಲ ಮಳೆಯಲ್ಲೇ ಎರಡು-ಮೂರು ತುಂಡಾಗಿ ಬಿದ್ದ ಸೇತುವೆ
* ಪಕ್ಕದಲ್ಲೇ ಹೊಸ ಸೇತುವೆ ಇದ್ದ ಕಾರಣ ಸಂಚಾರಕ್ಕೆ ತೊಂದರೆ ಇಲ್ಲ
* ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ
What do you feel about this post?
Like
Love
Happy
Haha
Sad
