ಜೆಇಇ ಅಡ್ವಾನ್ಸ್ : ಮೂಡುಬಿದಿರೆ ಆಳ್ವಾಸ್ ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆ, ಡಾ. ಮೋಹನ್ ಆಳ್ವ ಶ್ಲಾಘನೆ

ಶಿರಸಿ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ
<

Spread the love

ಮೂಡುಬಿದಿರೆ: ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಎಂಜಿನಿಯರಿAಗ್ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ಅಖಿಲ ಭಾರತ ಮಟ್ಟದ ಜೆಇಇ ಅಡ್ವಾನ್ಸ್ 2026 ಪರೀಕ್ಷೆಯ ಫಲಿತಾಂಶದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 17 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ಶ್ರೇಷ್ಠ ಸಾಧನೆ ಮೆರೆದು ಗಮನ ಸೆಳೆದಿದ್ದಾರೆ.

<

ಜನರಲ್ ಹಾಗೂ ಕೆಟಗರಿ ವಿಭಾಗದ ಅಖಿಲ ಭಾರತ ಮಟ್ಟದಲ್ಲಿ ಸ್ವಾತಿ ತಲವಾರ್ (1513 ರ‍್ಯಾಂಕ್) ಹರ್ಷವರ್ಧನ್ ಕೆಪಿ(1698 ರ‍್ಯಾಂಕ್), ಮೆಲ್ರೋಯ್ ಕ್ಯಾಸ್ಟಲಿನೋ(1733 ರ‍್ಯಾಂಕ್), ಕೃತಿಕ್ ಬಿ(1795 ರ‍್ಯಾಂಕ್), ನೀಲಾಂಬಿಕ(2223 ರ‍್ಯಾಂಕ್), ಮಾನಸ ಕೆಎಸ್(2935 ರ‍್ಯಾಂಕ್), ಪಿಯೂಷ್ ಎಚ್(3131 ರ‍್ಯಾಂಕ್), ಸುಪ್ರಜ್ ಶೆಟ್ಟಿ (3216 ರ‍್ಯಾಂಕ್), ಪ್ರಥಮ್(3523 ರ‍್ಯಾಂಕ್), ಹರ್ಷಿತಾ ಬಂಡಿಗೇರಿ(4119 ರ‍್ಯಾಂಕ್), ಪ್ರಣವ್(4580 ರ‍್ಯಾಂಕ್), ವಿಜಯ್ ಕುಮಾರ್(5134 ರ‍್ಯಾಂಕ್)ಹರ್ಷಿತಾ ಎನ್ ಆರ್(5191 ರ‍್ಯಾಂಕ್), ರಾಹುಲ್(5512 ರ‍್ಯಾಂಕ್), ಶರತ್ಚಂದ್ರ (6457 ರ‍್ಯಾಂಕ್), ಶಶಾಂಕ್ (6392 ರ‍್ಯಾಂಕ್), ಈಶಾನ್ (25722 ರ‍್ಯಾಂಕ್) ಗಳಿಸಿದ್ದಾರೆ.
ಜೆಇಇ ಮೆನ್ಸ್ ಹಾಗೂ ಅಡ್ವಾನ್ಸ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಆಳ್ವಾಸ್ ಪದವಿಪೂರ್ವ ಕಾಲೇಜು ಅನುಭವಿ ಬೋಧಕರ ಮಾರ್ಗದರ್ಶನ, ನಿಯಮಿತ ಪರೀಕ್ಷೆಗಳು, ವೈಯಕ್ತಿಕ ಶೈಕ್ಷಣಿಕ ಸಲಹೆ ಹಾಗೂ ಸ್ಪರ್ಧಾತ್ಮಕ ತರಬೇತಿಯನ್ನು ಒದಗಿಸುತ್ತಿದ್ದು, ಇದರ ಫಲವಾಗಿ ಪ್ರತಿವರ್ಷ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಒಟ್ಟು ಸಂಸ್ಥೆಯ 17 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *