ಸೀರೆಯ ಸೊಬಗಿನಲ್ಲಿ ಆರೋಗ್ಯದ ಹೆಜ್ಜೆ; ಮಂಗಳೂರು ರಸ್ತೆಯಲ್ಲಿ ಮಹಿಳೆಯರ ಸಂಭ್ರಮದ ಓಟ

ಮಂಗಳೂರು: ಮುಂಜಾನೆಯ ಮಂಗಳೂರು ಎಂದಿನಂತೆ ವಾಕಿಂಗ್, ಓಟದಲ್ಲಿ ತೊಡಗಿದ್ದ ನಗರದ ರಸ್ತೆಗಳು ಭಾನುವಾರ ಮಾತ್ರ ವಿಭಿನ್ನ ದೃಶ್ಯಕ್ಕೆ ಸಾಕ್ಷಿಯಾದವು. ಬಣ್ಣಬಣ್ಣದ ಸೀರೆ ತೊಟ್ಟ ನೂರಾರು ಮಹಿಳೆಯರು ಒಂದೇ ಉತ್ಸಾಹದಲ್ಲಿ ಹೆಜ್ಜೆ ಹಾಕಿದರು. ಕೆಲವರು ಓಡಿದರು, ಕೆಲವರು ನಡೆದರು. ಇನ್ನೂ ಕೆಲವರು ನಗು, ಸಂಭ್ರಮದೊಂದಿಗೆ ಹೆಜ್ಜೆ ಹಾಕುತ್ತಾ ಆರೋಗ್ಯದ ಸಂದೇಶದ ಜತೆಗೆ ಸೀರೆಯ ಸೊಬಗನ್ನೂ ಸಾರಿದರು. ಇದು ನಗರದ ನಾರಿ ಕ್ಲಬ್ ವತಿಯಿಂದ ಆಯೋಜಿಸಿದ್ದ 6ನೇ ಆವೃತ್ತಿಯ ‘ಸಾರಿ ನಡಿಗೆ ಮತ್ತು ಓಟ’ಕಾರ್ಯಕ್ರಮದ ದೃಶ್ಯ. ಸಾಂಪ್ರದಾಯಿಕ ಉಡುಗೆಯಾದ ಸೀರೆಯಲ್ಲೇ […]

Continue Reading

ಉತ್ತರ ಕನ್ನಡದ ಭತ್ತದ ಗದ್ದೆಗಳು ಈಗ ‘ICU’ನಲ್ಲಿ!ಗದ್ದೆಗೆ ನೀರು ಹುಡುಕುವ ಸ್ಥಿತಿ

⊃ ಡಾ. ರವಿಕಿರಣ ಪಟವರ್ಧನ ಸಿರಸಿ: ಒಂದು ಕಾಲದಲ್ಲಿ ಉತ್ತರ ಕನ್ನಡದ ಮಲೆನಾಡಿನಲ್ಲಿ ಅಕ್ಟೋಬರ್–ನವೆಂಬರ್ ತಿಂಗಳುಗಳು ಬಂದರೆ ಸಾಕು, ಭತ್ತದ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆಕಾಶದಲ್ಲಿ ಮೋಡ ಕಂಡರೆ ರೈತನ ಮುಖದಲ್ಲಿ ಭರವಸೆ ಮೂಡುತ್ತಿತ್ತು. ಮಳೆ ಬರುತ್ತಿತ್ತು, ಗದ್ದೆ ತುಂಬುತ್ತಿತ್ತು, ಭತ್ತ ಬೆಳೆಯುತ್ತಿತ್ತು. ಹೊಸ ಅಕ್ಕಿಯ ಸಂಭ್ರಮ ಮನೆ ಮಾಡುತ್ತಿತ್ತು. ಮಳೆ–ಮಣ್ಣು–ಗದ್ದೆ–ರೈತನ ನಡುವಿನ ಈ ಸಹಜ ಸಂಬಂಧ ಈಗ ಬದಲಾಗುತ್ತಿದೆ. ಮಳೆ ಬಂದರೂ ಬೆಳೆಗೆ ಅಗತ್ಯವಿರುವ ಸಮಯದಲ್ಲಿ ಮಳೆ ಕೈಕೊಡುತ್ತಿದೆ. ಬಳಿಕ ದೀರ್ಘ ವಿರಾಮ, ಮತ್ತೊಮ್ಮೆ ಅಕಾಲಿಕ ಅಥವಾ […]

Continue Reading

4 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ: ಸಲ್ಮಾ ಫಾಹೀಮ್ ಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹೊಣೆ

ಬೆಂಗಳೂರು: ರಾಜ್ಯ ಸರ್ಕಾರವು ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಾಗಿದ್ದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿಯಾಗಿದ್ದ ಪಂಕಜ್ ಕುಮಾರ್ ಪಾಂಡೆ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕಾರ್ಮಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಆಗಿದ್ದ ಸಲ್ಮಾ ಕೆ. ಫಾಹೀಮ್ ಅವರನ್ನು […]

Continue Reading

ಮಂಗಳೂರಿನಲ್ಲಿ ನಾಳೆ ‘ಸಾರಿ ವಾಕ್‌ ಅಂಡ್‌ ರನ್‌’ ಮಹಿಳೆಯರ ಪಾರುಪತ್ಯ

ಮಂಗಳೂರು: ಮಹಿಳೆಯರ ಆರೋಗ್ಯ, ದೈಹಿಕ ಕ್ಷಮತೆ ಹಾಗೂ ಫಿಟ್‌ನೆಸ್‌ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಾರಿ ಕ್ಲಬ್‌ ನೇತೃತ್ವದಲ್ಲಿ ‘ಸಾರಿ ವಾಕ್‌ ಅಂಡ್‌ ರನ್‌–2026’ ಕಾರ್ಯಕ್ರಮ ಭಾನುವಾರ( ಅ.4) ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಆಯೋಜಕರಾದ ರಾಜೇಶ್ ರಾಮಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. . ಸೀರೆಯಲ್ಲಿಯೇ ನಡೆದು, ಓಡುವ ಮೂಲಕ ಸಾಂಪ್ರದಾಯಿಕ ಉಡುಗೆ ದೈಹಿಕ ಚಟುವಟಿಕೆಗೆ ಅಡ್ಡಿಯಾಗುವುದಿಲ್ಲ ಎಂಬ ಸಂದೇಶ ಸಾರುವ ಕಾರ್ಯಕ್ರಮದ ಆರನೇ ಆವೃತ್ತಿಗೆ 350ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. ಗೋಕರ್ಣನಾಥೇಶ್ವರ […]

Continue Reading

ಅ.5ರಿಂದ 10 ರವರೆಗೆ ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ಹಿರಿಯರಿಗೆ ಉಚಿತ ಆರೋಗ್ಯ ಸಮಾಲೋಚನೆ

ಮಂಗಳೂರು: ಅಂತರ ರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯ ವೃದ್ಧಾಪ್ಯ ಚಿಕಿತ್ಸಾ ವಿಭಾಗದಿಂದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅ.5ರಿಂದ 10ರವರೆಗೆ ಒಂದು ವಾರ ಉಚಿತ ಆರೋಗ್ಯ ಸಮಾಲೋಚನಾ ಶಿಬಿರ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಹಿರಿಯರ ಸಪ್ತಾಹದ ಅಂಗವಾಗಿ ನಡೆಯುವ ಶಿಬಿರವು ಆರೋಗ್ಯಕರ ವೃದ್ಧಾಪ್ಯವನ್ನು ಉತ್ತೇಜಿಸುವುದು, ರೋಗಗಳ ತಡೆಗಟ್ಟುವಿಕೆ ಹಾಗೂ ಹಿರಿಯರ ಸಮಗ್ರ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಅ.5ರಿಂದ 10ರವರೆಗೆ ಪ್ರತಿದಿನ ಬೆಳಿಗ್ಗೆ […]

Continue Reading

ಜಿಲ್ಲಾಡಳಿತದಿಂದ ಗಾಂಧಿ ಜಯಂತಿ, ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ಡಾ. ಮಂಜುನಾಥ ಭಂಡಾರಿ

ಮಂಗಳೂರು: ಮಹಾತ್ಮ ಗಾಂಧೀಜಿ ಅವರ ಬದುಕು ಇತರರಿಗೆ ಮಾದರಿಯಾಗಿದೆ. ಅವರು ಮಾತನಾಡುವುದಕ್ಕಿಂತಲೂ ಇತರರ ಮಾತುಗಳನ್ನು ಗೌರವದಿಂದ ಆಲಿಸಿ, ಪ್ರತಿಯೊಬ್ಬ ವ್ಯಕ್ತಿಗೂ ಗೌರವ ನೀಡುತ್ತಿದ್ದರು. ಇದೇ ಗುಣಗಳು ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ನಾಯಕನನ್ನಾಗಿ ರೂಪಿಸಿದವು ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ನಗರದ ರಾಜಾಜಿ ಉದ್ಯಾನವನದಲ್ಲಿ ಶುಕ್ರವಾರ ಆಯೋಜಿಸಿದ್ದ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ […]

Continue Reading

ಮೂಡಾ ಅಧ್ಯಕ್ಷ ಸಂತೋಷ ಕುಮಾರ್ ಗೆ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಪತ್ರ, 50 ಎಕರೆ ಜಮೀನಿಗೆ ಮನವಿ

ಮಂಗಳೂರು: ನಗರದಲ್ಲಿ ಕ್ರಿಕೆಟ್ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ 50 ಎಕರೆ ಸರ್ಕಾರಿ ಜಮೀನನ್ನು ಖರೀದಿ ಅಥವಾ 50 ವರ್ಷಗಳ ದೀರ್ಘಾವಧಿ ಗುತ್ತಿಗೆ ಆಧಾರದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ನೀಡುವಂತೆ ಕೆಎಸ್‌ಸಿಎ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಸಾದ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರಿಗೆ ಅ.1 ರಂದು ಪತ್ರ ಬರೆದಿದ್ದಾರೆ. ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮೂಲಸೌಕರ್ಯ ಅಭಿವೃದ್ಧಿಪಡಿಸಲು […]

Continue Reading

ಚಿನ್ನದ ಪದಕ ಬಾಚಿದ ಅಥ್ಲೀಟ್ ಪೂವಮ್ಮಗೆ ಸೂಕ್ತ ಗೌರವಧನ ನೀಡಿ: ಅಕ್ಷಿತ್ ಸುವರ್ಣ

ಮಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಗಮನಾರ್ಹ ಸಾಧನೆ ಮಾಡಿರುವ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರಿಗೆ ರಾಜ್ಯ ಸರ್ಕಾರ ಸೂಕ್ತ ಗೌರವಧನ ಹಾಗೂ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ (ಜಾತ್ಯತೀತ) ಅಧ್ಯಕ್ಷ ಅಕ್ಷಿತ್ ಸುವರ್ಣ ಆಗ್ರಹಿಸಿದರು. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ಸಂಜೆ ಆಗಮಿಸಿದ ಎಂ.ಆರ್. ಪೂವಮ್ಮ ಅವರನ್ನು ಅಕ್ಷಿತ್ ಸುವರ್ಣ ಆತ್ಮೀಯವಾಗಿ ಸ್ವಾಗತಿಸಿ, ಪುಷ್ಪಗುಚ್ಛ ನೀಡಿ ಗೌರವಿಸಿದರು. ಈ ಸಂದರ್ಭ ಪೂವಮ್ಮ ಅವರ ಕ್ರೀಡಾ ಸಾಧನೆ, […]

Continue Reading

ಮಂಗಳೂರು: ಸಾರಿ ವಾಕ್ ಅಂಡ್ ರನ್ ಲೋಗೊ ಬಿಡುಗಡೆ

ಮಂಗಳೂರು: ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಹಾಗೂ ಸಾಂಪ್ರದಾಯಿಕ ಉಡುಗೆ ಸೀರೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಮಂಗಳೂರಿನಲ್ಲಿ ಇದೇ 4 ರಂದು ನಾರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಸಾರಿ ವಾಕ್ ಅಂಡ್ ರನ್ ಲೋಗೊ ಅನಾವರಣ ಕಾರ್ಯಕ್ರಮ ಶುಕ್ರವಾರ ಬಿಜೈ ಜಯಲಕ್ಷ್ಮಿ ಬಟ್ಟೆ ಮಳಿಗೆಯಲ್ಲಿ ನಡೆಯಿತು. ಮಂಗಳೂರಿನ ನಾರಿ ಕ್ಲಬ್ ತಂಡದ ನೇತೃತ್ವದಲ್ಲಿ ಮೈಸೂರು ಸಿಲ್ಕ್ ಕಾರ್ಪೊರೇಷನ್, ಫ್ರೀಡಂ ಆಯಿಲ್, ಮೈಸೂರು ಸ್ಯಾಂಡಲ್, ಜಯಲಕ್ಷ್ಮಿ ಬಿಜೈ, ಕೆನರಾ ಬ್ಯಾಂಕ್, ಆಭರಣ ಜ್ಯುವೆಲರ್ಸ್, ಎ.ಜೆ. ಆಸ್ಪತ್ರೆ, ಇನ್ನರ್‌ ವ್ಹೀಲ್ ಕ್ಲಬ್ […]

Continue Reading

ಸೇವೆ, ಶಿಸ್ತು, ನಾಯಕತ್ವಕ್ಕೆ ಸ್ಕೌಟಿಂಗ್ ಒತ್ತು: ಉಪ ಆಯುಕ್ತ ವಿವೇಕ ಆಳ್ವ

ಮೂಡುಬಿದಿರೆ: ಯುವಕರಲ್ಲಿರುವ ಶಕ್ತಿ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಸದುಪಯೋಗಪಡಿಸಿಕೊಳ್ಳುವಂತೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಸಾಂಸ್ಕೃತಿಕ ವಿನಿಮಯ ವಿಭಾಗದ ರಾಷ್ಟ್ರೀಯ ಉಪ ಆಯುಕ್ತ ವಿವೇಕ ಆಳ್ವ ಹೇಳಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಅ.2ರಿಂದ 6ರವರೆಗೆ ಆಯೋಜಿಸಿರುವ ಎರಡನೇ ವರ್ಷದ ರಾಷ್ಟ್ರೀಯ ಮಟ್ಟದ ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ (ಎಐ), ಯುವ […]

Continue Reading