ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿಗೆ ಮುರಳಿ ಹೊಸಮಜಲು ಪುನರಾಯ್ಕೆ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ
<

Spread the love

ಮಂಗಳೂರು: ಕರ್ನಾಟಕ ನಾಯರ್‌ ಸರ್ವೀಸ್‌ ಸೊಸೈಟಿ ಮಂಗಳೂರು ಘಟಕದ ಸಾಮಾನ್ಯ ಸಭೆ ನಗರದ ಕೆಪಿಟಿ ಸಮೀಪದ ಎಸ್‌ ಕ್ಯೂಬ್‌ ಸೆಂಟರ್‌ ಸಭಾಂಗಣದಲ್ಲಿ ನಡೆಯಿತು. ಸಭೆಯ ಬಳಿಕ ನಡೆದ ಚುನಾವಣೆಯಲ್ಲಿ 2026-28ನೇ ಅವಧಿಗೆ ಅಧ್ಯಕ್ಷರಾಗಿ ಮುರಳಿ ಹೊಸಮಜಲು ಪುನರಾಯ್ಕೆಯಾಗಿದ್ದಾರೆ.

<

ಕಾರ್ಯದರ್ಶಿಯಾಗಿ ವಿ.ಎಂ. ಸತೀಶನ್‌, ಖಜಾಂಚಿಯಾಗಿ ಅಜಯಕುಮಾರ್‌, ಉಪಾಧ್ಯಕ್ಷರಾಗಿ ವಾಸಂತಿ ನಾಯರ್‌, ಜತೆ ಕಾರ್ಯದರ್ಶಿಯಾಗಿ ಮಂಜು ಅಜಿತ್‌ ಹಾಗೂ ಜತೆ ಖಜಾಂಚಿಯಾಗಿ ರವೀಂದ್ರನಾಥ್‌ ಆಯ್ಕೆಯಾದರು. ಬೋರ್ಡ್‌ ಸದಸ್ಯರಾಗಿ ವಿಜಯಕುಮಾರ್‌, ಎಂ.ವಿ. ರಾಜನ್‌ ಮತ್ತು ಎ.ಎಸ್. ಮೋಹನ್‌ ಆಯ್ಕೆಯಾಗಿದ್ದಾರೆ.

ಸಮಿತಿಯ ಸದಸ್ಯರಾಗಿ ಜೋತಿಷ್‌ ಕುಮಾರ್‌, ಜಯಲಕ್ಷ್ಮೀ ಚಂದ್ರಮೋಹನ್‌, ಮಣಿಕಂಠನ್‌, ವಿನೋದ್‌ರಾಜ್‌, ಹರೀಶ್‌ ಗೋವಿಂದ್‌, ದೇವರಾಜ್‌ ಹಾಗೂ ವಿನಯನ್‌ ನಾಯರ್‌ ಆಯ್ಕೆಯಾಗಿದ್ದಾರೆ.

ಮಹಿಳಾ ವಿಭಾಗದ ಅಧ್ಯಕ್ಷರಾಗಿ ಸುಜಾತಾ ನಾಯರ್‌, ಕಾರ್ಯದರ್ಶಿಯಾಗಿ ಶ್ರೀಜಾ ನಂಬಿಯಾರ್‌ ಹಾಗೂ ಖಜಾಂಚಿಯಾಗಿ ಗೋಪಿಕಾ ರಾಣಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪ್ರಭಾ ವಿಜಯಕುಮಾರ್‌ ಮತ್ತು ಜತೆ ಕಾರ್ಯದರ್ಶಿಯಾಗಿ ಅನಿತಾ ಜಯಚಂದ್ರನ್‌ ಆಯ್ಕೆಯಾಗಿದ್ದಾರೆ.

ಚುನಾವಣಾ ಅಧಿಕಾರಿಯಾಗಿ ಉಡುಪಿ ಘಟಕದ ಸಜಿ ಪಿಳ್ಳೈ ಹಾಗೂ ವೀಕ್ಷಕರಾಗಿ ಮೋಹನ್‌ ದಾಸ್‌ ಭಾಗವಹಿಸಿದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *