ಹೊರ ಜಿಲ್ಲೆಗಳಿಂದ ರೋಗಿಗಳ ಶಿಫಾರಸು ಮಾಡುವಾಗ ಹೆಲ್ಪ್ ಡೆಸ್ಕ್ ಸಂಪರ್ಕಿಸಿ, ನಂತರ ಪರದಾಟ ಬೇಡ, ದ.ಕ. ಜಿಲ್ಲೆಯ ರೋಗಿಗಳಿಗೂ ವೆನ್ಲಾಕ್ ಆಸ್ಪತ್ರೆ ಸೌಲಭ್ಯ ಸಿಗಲಿ: ಅಧೀಕ್ಷಕ ಡಾ. ಶಿವಪ್ರಕಾಶ್

ಮಂಗಳೂರು: ರಾಜ್ಯದ ಹೊರ ಜಿಲ್ಲೆಗಳಿಂದ ತುರ್ತು ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳನ್ನು ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಐಸಿಯು ಹಾಸಿಗೆ ಕೊರತೆ ಕಾಡುತ್ತಿದೆ. ಪರಿಣಾಮ ಒತ್ತಡ ಹೆಚ್ಚಿದ್ದು, ರೋಗಿಗಳನ್ನು ಶಿಫಾರಸು ಮಾಡುವ ಮೊದಲು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆ ಪರಿಶೀಲಿಸುವ ವ್ಯವಸ್ಥೆ ಕಡ್ಡಾಯಗೊಳಿಸಬೇಕು. ಇದಕ್ಕಾಗಿ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆಗಳ ರೋಗಿಗಳನ್ನು ಏಕಾಏಕಿ ಕರೆತರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಾಕಷ್ಟು ಅರ್ಹ ಬಡ ರೋಗಿಗಳಿಗೆ ವೆನ್ಲಾಕ್ ಆಸ್ಪತ್ರೆಯ ಲಾಭ ಸಿಗದೇ ಇರುವಂತಹ ಸ್ಥಿತಿ ನಿರ್ಮಾಣ ಆಗಿದೆ […]

Continue Reading

ಮಂಗಳೂರಿನಲ್ಲಿ ಅಗಸ್ಟ್ 2 ರಿಂದ ರಾಷ್ಟ್ರ ಮಟ್ಟದ ಚೆಸ್ ಚಾಂಪಿಯನ್‌ ಷಿಪ್ ಹಬ್ಬ: ಡಾ. ಅಮರಶ್ರೀ ಅಮರನಾಥ ಶೆಟ್ಟಿ

ಮಂಗಳೂರು: ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ವತಿಯಿಂದ 11 ವರ್ಷದೊಳಗಿನ ಮುಕ್ತ ಹಾಗೂ ಬಾಲಕಿಯರ ರಾಷ್ಟ್ರ ಮಟ್ಟದ ಚೆಸ್ ಚಾಂಪಿಯನ್‌ ಷಿಪ್- ಅ. 2 ರಿಂದ 8 ರವರೆಗೆ ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೇಶದ ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ 600 ಕ್ಕೂ ಹೆಚ್ಚು ಮಂದಿ ಆಟಗಾರರು, ತರಬೇತುದಾರರು ಮತ್ತು ಪೋಷಕರು ಭಾಗವಹಿಸುವ ನಿರೀಕ್ಷೆ ಇದ್ದು, […]

Continue Reading

ರಾಷ್ಟ್ರ ಮಟ್ಟಕ್ಕೆ ಮಂಗಳೂರಿನ ವೀವನ್ ಈಜು ಪಟುಗಳು, 18 ಪದಕಗಳ ಸಾಧನೆ

ಮಂಗಳೂರು: ಕರ್ನಾಟಕ ರಾಜ್ಯ ಈಜು ಸಂಸ್ಥೆ ಹಾಗೂ ವೀ ವನ್ ಅಕ್ವಾ ಸೆಂಟರ್ ಆಶ್ರಯದಲ್ಲಿ ಮಂಗಳೂರಿನ ಎಮ್ಮೆಕೆರೆ ಅಂತರ ರಾಷ್ಟ್ರೀಯ ಈಜುಕೊಳದಲ್ಲಿ ನಡೆದ ಎನ್‌ಆರ್‌ಜೆ ರಾಜ್ಯ ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ ವೀ ವನ್ ಅಕ್ವಾ ಸೆಂಟರ್‌ ಈಜುಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 18 ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ. ಮೂರು ಮಂದಿ ಈಜುಪಟುಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶ್ವಿತಿ ದಿವಾಕರ್, ಅಲಿಟಾ ಡಿಸೋಜಾ ಹಾಗೂ ಸಿದ್ಧಿ ಶೆಟ್ಟಿ ಅವರು ಆಗಸ್ಟ್ 6ರಿಂದ 9ರವರೆಗೆ ಜೈಪುರದಲ್ಲಿ […]

Continue Reading

ರಾಜ್ಯ ಮಟ್ಟದ ಟೇಬಲ್ ಟೆನಿಸ್: ಫೈನಲ್ , ಸೆಮಿಫೈನಲ್ ನಲ್ಲಿ ತೀವ್ರ ಹಣಾಹಣಿ

ಮಂಗಳೂರು: ರಾಜ್ಯ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ವಿವಿಧ ವಿಭಾಗಗಳ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳು ರೋಚಕ ಪೈಪೋಟಿಗೆ ಸಾಕ್ಷಿಯಾದವು. ಅಂಡರ್-17 ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಮಿಹಿಕಾ ಉಡುಪ ಅವರು ವಿಭಾ ತಾವಕರಿ ಅವರನ್ನು 11-9, 11-9, 11-6 ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಸೆಮಿಫೈನಲ್‌ನಲ್ಲಿ ಮಿಹಿಕಾ ಉಡುಪ ಅವರು ಐರಿನ್ ಅಣ್ಣಾ ಸುಭಾಷ್ ವಿರುದ್ಧ 11-5, 12-10, 6-11, 14-12 ಅಂತರದಲ್ಲಿ ಜಯ ಸಾಧಿಸಿದರು. ವಿಭಾ ತಾವಕರಿ ಅವರು ಹಿಯಾ ಸಿಂಗ್ ಅವರನ್ನು […]

Continue Reading

ಜೂನ್ 21ರಂದು 12 ನೇ ಅಂತರ ರಾಷ್ಟ್ರೀಯ ಯೋಗ ದಿನ: ಹೆಚ್ಚುವರಿ ಜಿಲ್ಲಾಧಿಕಾರಿ ರಾಜು

ಮಂಗಳೂರು: ಜೂನ್ 21ರಂದು ನಡೆವ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ಆಯೋಜಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಅವರು ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಯೋಗ ದಿನಾಚರಣೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗವು ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವ ಅತ್ಯುತ್ತಮ ಸಾಧನವಾಗಿದೆ. ಈ ಹಿನ್ನೆಲೆಯಲ್ಲಿ ಯೋಗದ ಮಹತ್ವವನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ನಿಟ್ಟಿನಲ್ಲಿ […]

Continue Reading

ಯೋಗ ಅಧಿವೇಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಅಗತ್ಯ: ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ

ಕಾರವಾರ: ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ, ಆಯುಷ್ ಸಚಿವಾಲಯವು ಇದೇ 14 ರಂದು ಗಿನ್ನೆಸ್ ವಿಶ್ವ ದಾಖಲೆಯ ಅತಿದೊಡ್ಡ ಆನ್‌ಲೈನ್ ಯೋಗ ಅಧಿವೇಶನವನ್ನು ಆಯೋಜಿಸುತ್ತಿದ್ದು, ಈ ಸಾಮೂಹಿಕ ಆಚರಣೆಗೆ ಜಿಲ್ಲೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀ ಪ್ರಿಯಾ ಅವರು ತಿಳಿಸಿದರು. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ಅಂತಾರಾಷ್ಟ್ರೀಯ ಯೋಗ ದಿಚಾರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯೋಗ ಅಧಿವೇಶನವು ದೇಶಾದ್ಯಂತ ಯೋಗ ಸಾಧಕರು ಮತ್ತು ನಾಗರಿಕರನ್ನು ಒಟ್ಟುಗೂಡಿಸುವ […]

Continue Reading

ಅಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಅಖಿಲ ಭಾರತ ಫುಟ್‌ಬಾಲ್ ಟೂರ್ನಿ

ಬೆಂಗಳೂರು: 15 ವರ್ಷ ವಯೋಮಿತಿಯೊಳಗಿನ ಬಾಲಕರಿಗಾಗಿ 14 ನೇ ಅಖಿಲ ಭಾರತ ಫುಟ್‌ಬಾಲ್ (5–ಎ–ಸೈಡ್) ಟೂರ್ನಿಯು ಆಗಸ್ಟ್ 23 ಮತ್ತು 24ರಂದು ಇಲ್ಲಿನ ಕುಕ್‌ಟೌನ್‌ ರಶ್ ಅರೆನಾ ಫುಟ್‌ಬಾಲ್ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರಾದ ಡೆಂಜಿಲ್ ಫರ್ನಾಂಡಿಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಾಲೆಗಳು, ಕ್ಲಬ್‌ಗಳು, ಕ್ರೀಡಾ ಅಕಾಡೆಮಿಗಳು, ಸಂಘಗಳು ಹಾಗೂ ವಿವಿಧ ಕ್ರೀಡಾ ಗುಂಪುಗಳಿಗೆ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 2011ರ ಜನವರಿ 1 ಅಥವಾ ನಂತರ ಜನಿಸಿದ ಆಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ. […]

Continue Reading

ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ಗೆ ತೆರೆ: ಸರ್ಫಿಂಗ್ ಓಪನ್‌ನಲ್ಲಿ ಕಮಲಿ ಮೂರ್ತಿಗೆ ಡಬಲ್ ಕಿರೀಟ

ಮಂಗಳೂರು: ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಅಂತಿಮ ದಿನ ತಮಿಳುನಾಡಿನ ಯುವ ಸರ್ಫರ್ ಕಮಲಿ ಮೂರ್ತಿ ಮಹಿಳೆಯರ ಓಪನ್ ಹಾಗೂ 18 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಡಬಲ್ ಸಾಧನೆ ಮಾಡಿದ್ದಾರೆ. ಪುರುಷರ ಓಪನ್ ವಿಭಾಗದಲ್ಲಿ ತಮಿಳುನಾಡಿನ ಕಿಶೋರ್ ಕುಮಾರ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, 18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಥ್ವೀಪ್ ಪೂಜಾರ್ ಗೆದ್ದು ಕರ್ನಾಟಕಕ್ಕೆ ಟೂರ್ನಿಯ ಏಕೈಕ ಪ್ರಶಸ್ತಿ ತಂದುಕೊಟ್ಟರು. 14 ವರ್ಷದೊಳಗಿನ (ಗ್ರೋಮ್ಸ್) ವಿಭಾಗದಲ್ಲಿ ಹರೀಶ್ ಪಿ ಮತ್ತು ಧಮಯಂತಿ […]

Continue Reading

ಬ್ಯಾಕ್ ಟು ಬ್ಯಾಕ್ ಆರ್ ಸಿಬಿ ಗೆಲುವಿನ ಪತಾಕೆ, ಐಪಿಎಲ್ ನಲ್ಲಿ ಮತ್ತೇ ಅಜೇಯ, ಕೊಹ್ಲಿ ಆಟಕ್ಕೆ ಪ್ರೇಕ್ಷಕರ ಪಿಧಾ

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳ ದಶಕಗಳ ಕನಸನ್ನು ನನಸು ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈಗ ಸತತ 2 ನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಅಹಮದಾಬಾದ್‌ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಆರ್​​ಸಿಬಿ, ಮತ್ತೊಮ್ಮೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಸಲವೂ ಕಪ್ ನಮ್ಮದೇ ಎಂದು ಸಾರಿದ್ದ ಅಭಿಮಾನಿಗಳ ಸಂಭ್ರಮವೀಗ ಮುಗಿಲು ಮುಟ್ಟಿದೆ. ಆರ್​​ಸಿಬಿ ಜಯಭೇರಿ […]

Continue Reading

ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ : ಅಲೆಗಳ ವಯ್ಯಾರ ಅಬ್ಬರದಲ್ಲಿ ಸರ್ಫರ್ ಗಳ ತೀವ್ರ ಹಣಾಹಣಿ

ಮಂಗಳೂರು: ಇಲ್ಲಿನ ತಣ್ಣೀರು ಭಾವಿಯಲ್ಲಿ ನಡೆಯುತ್ತಿರುವ 7 ನೇ ಆವೃತ್ತಿಯ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆಯ 2ನೇ ದಿನ ಪುರುಷರ ಓಪನ್ ವಿಭಾಗದ ಸೆಮಿಫೈನಲಿಸ್ಟ್‌ಗಳು ಭರ್ಜರಿ ಪ್ರದರ್ಶನ ನೀಡಿದರು. ಶನಿವಾರ ನಡೆದ ಐದು ವಿಭಾಗಗಳಲ್ಲಿ ಒಟ್ಟು ಆರು ಕ್ವಾರ್ಟರ್‌ಫೈನಲ್ ಹಾಗೂ ಆರು ಸೆಮಿಫೈನಲ್ ಪಂದ್ಯಗಳು ನಡೆದವು. ಪುರುಷರ ಮುಕ್ತ ವಿಭಾಗದ ಕ್ವಾರ್ಟರ್‌ ಫೈನಲ್‌ ನಲ್ಲಿ ಕೇರಳದ ರಮೇಶ್ ಬೂದಿಹಾಳ್ 14.83 ಅಂಕ ಗಳಿಸಿ ಅಗ್ರಸ್ಥಾನ ದಾಖಲಿಸಿದರು. ಶ್ರೀಕಾಂತ್ ಡಿ 13 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, […]

Continue Reading