ರಾಜ್ಯ ಮಟ್ಟದ ಟೇಬಲ್ ಟೆನಿಸ್: ಫೈನಲ್ , ಸೆಮಿಫೈನಲ್ ನಲ್ಲಿ ತೀವ್ರ ಹಣಾಹಣಿ

ಕ್ರೀಡೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ರಾಜ್ಯ ಮಟ್ಟದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ವಿವಿಧ ವಿಭಾಗಗಳ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳು ರೋಚಕ ಪೈಪೋಟಿಗೆ ಸಾಕ್ಷಿಯಾದವು.

<

ಅಂಡರ್-17 ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಮಿಹಿಕಾ ಉಡುಪ ಅವರು ವಿಭಾ ತಾವಕರಿ ಅವರನ್ನು 11-9, 11-9, 11-6 ನೇರ ಸೆಟ್‌ಗಳಿಂದ ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಮಿಹಿಕಾ ಉಡುಪ ಅವರು ಐರಿನ್ ಅಣ್ಣಾ ಸುಭಾಷ್ ವಿರುದ್ಧ 11-5, 12-10, 6-11, 14-12 ಅಂತರದಲ್ಲಿ ಜಯ ಸಾಧಿಸಿದರು. ವಿಭಾ ತಾವಕರಿ ಅವರು ಹಿಯಾ ಸಿಂಗ್ ಅವರನ್ನು 7-11, 11-6, 11-4, 11-8 ಸೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು.

ಅಂಡರ್-19 ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಹಿಮಾಂಶಿ ಚೌಧರಿ ಅವರು ರಾಶಿ ವಿ. ರಾವ್ ವಿರುದ್ಧ ಏಳು ಸೆಟ್‌ಗಳ ರೋಚಕ ಹೋರಾಟದಲ್ಲಿ 9-11, 11-6, 11-13, 12-10, 11-6, 4-11, 11-6 ಅಂತರದಲ್ಲಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರು.

ಈ ವಿಭಾಗದ ಸೆಮಿಫೈನಲ್‌ನಲ್ಲಿ ಹಿಮಾಂಶಿ ಚೌಧರಿ ಅವರು ಐರಿನ್ ಅಣ್ಣಾ ಸುಭಾಷ್ ಅವರನ್ನು 11-9, 7-11, 11-1, 11-9 ಅಂತರದಲ್ಲಿ ಮಣಿಸಿದರೆ, ರಾಶಿ ವಿ. ರಾವ್ ಅವರು ಹಿಯಾ ಸಿಂಗ್ ವಿರುದ್ಧ 11-4, 11-5, 9-11, 12-10 ಅಂತರದಲ್ಲಿ ಗೆದ್ದು ಫೈನಲ್‌ಗೆ ಪ್ರವೇಶಿಸಿದ್ದರು.

ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಆಕಾಶ್ ಕೆ.ಜೆ. ಅವರು ಸಂಜಯ್ ಮಾಧವನ್ ಕೆ. ಅವರನ್ನು 8-11, 11-5, 11-6, 7-11, 11-8, 16-14 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಆಕಾಶ್ ಕೆ.ಜೆ. ಅವರು ಯಶ್ವಂತ್ ಪಿ. ವಿರುದ್ಧ 3-11, 11-8, 11-7, 12-10, 10-12, 11-8 ಅಂತರದಲ್ಲಿ ಗೆಲುವು ದಾಖಲಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಸಂಜಯ್ ಮಾಧವನ್ ಕೆ. ಅವರು ಅಭಿನವ್ ಕೆ. ಮೂರ್ತಿ ಅವರನ್ನು 11-3, 11-7, 11-5, 11-4 ನೇರ ಸೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *