ಎಕ್ಸ್ ಪರ್ಟ್ ಪಿಯು ಕಾಲೇಜು: ಜೆಇಇ ಅಡ್ವಾನ್ಸ್ಡ್‌ನಲ್ಲಿ ವಿದ್ಯಾರ್ಥಿಗಳ ಸಾಧನೆಯ ಗರಿ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ
<

Spread the love

ಮಂಗಳೂರು: ದೇಶದ ಪ್ರತಿಷ್ಠಿತ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳ (ಐಐಟಿ) ಪ್ರವೇಶಕ್ಕಾಗಿ ನಡೆದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

<

ಜನರಲ್ ಮೆರಿಟ್ ವಿಭಾಗದಲ್ಲಿ ಸುಹಾಸ್ ಬಸನಗೌಡ ಬಾಲನಗೌಡ್ರ 2,593ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅರಳೆ ವಿರೂಪಾಕ್ಷಿ 7,885 ನೇ ರ‍್ಯಾಂಕ್, ನಿಖಿಲ್ ಭೂಷಣ್ ಶ್ರೀನಿವಾಸ್ 9,150ನೇ ರ‍್ಯಾಂಕ್ ಹಾಗೂ ಪ್ರಖ್ಯಾತ್ ತಿರುಪತಿರಡ್ಡಿ ನೀಲಣ್ಣವರ್ 9,806 ನೇ ರ‍್ಯಾಂಕ್ ಗಳಿಸಿದ್ದಾರೆ.

ಕ್ಯಾಟಗರಿ ವಿಭಾಗದಲ್ಲಿ ಟಿ. ಶ್ರೀ ಸಾಯಿ ಕಾರ್ತಿಕ್ 318ನೇ ರ‍್ಯಾಂಕ್, ಗುರು ಸುಬ್ರಮಣ್ಯ ಪಿ. 323ನೇ ರ‍್ಯಾಂಕ್, ರಾಜೀವ್ ಲೋಚನ್ ರೆಡ್ಡಿ ಟಿ. 1,446 ನೇ ರ‍್ಯಾಂಕ್, ಸುಧನ್ವ 1,558ನೇ ರ‍್ಯಾಂಕ್, ಪ್ರಜ್ವಲ್ ಪ್ಯಾಟಿ 2,461ನೇ ರ‍್ಯಾಂಕ್, ಯಶಸ್ ಎನ್.ಎಂ. 2,747ನೇ ರ‍್ಯಾಂಕ್ ಹಾಗೂ ಹರ್ಷಿತ್ ಗೌಡ ಎಂ.ವೈ. 4,285ನೇ ರ‍್ಯಾಂಕ್ ಪಡೆದಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಖರಗ್‌ಪುರ, ಮುಂಬೈ, ಚೆನ್ನೈ, ಕಾನ್ಪುರ, ನವದೆಹಲಿ, ಗೌಹಾಟಿ, ರೂರ್ಕಿ, ರೋಪರ್, ಭುವನೇಶ್ವರ, ಗಾಂಧಿನಗರ, ಹೈದರಾಬಾದ್, ಜೋಧ್‌ಪುರ, ಪಾಟ್ನಾ, ಇಂದೋರ್, ಮಂಡಿ, ವಾರಣಾಸಿ, ಪಾಲಕ್ಕಾಡ್, ತಿರುಪತಿ, ಧನ್ಬಾದ್, ಭಿಲಾಯಿ, ಗೋವಾ, ಜಮ್ಮು ಹಾಗೂ ಧಾರವಾಡದ ಐಐಟಿಗಳಲ್ಲಿ ವ್ಯಾಸಂಗ ಮಾಡುವ ಅವಕಾಶ ಲಭಿಸಿದೆ.

ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಎಕ್ಸ್ ಪರ್ಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿ, ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *