ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ಗೆ ತೆರೆ: ಸರ್ಫಿಂಗ್ ಓಪನ್‌ನಲ್ಲಿ ಕಮಲಿ ಮೂರ್ತಿಗೆ ಡಬಲ್ ಕಿರೀಟ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಕ್ರೀಡೆ ದೇಶ ವಿದೇಶ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ
<

Spread the love

ಮಂಗಳೂರು: ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಅಂತಿಮ ದಿನ ತಮಿಳುನಾಡಿನ ಯುವ ಸರ್ಫರ್ ಕಮಲಿ ಮೂರ್ತಿ ಮಹಿಳೆಯರ ಓಪನ್ ಹಾಗೂ 18 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಡಬಲ್ ಸಾಧನೆ ಮಾಡಿದ್ದಾರೆ.

<

ಪುರುಷರ ಓಪನ್ ವಿಭಾಗದಲ್ಲಿ ತಮಿಳುನಾಡಿನ ಕಿಶೋರ್ ಕುಮಾರ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, 18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಥ್ವೀಪ್ ಪೂಜಾರ್ ಗೆದ್ದು ಕರ್ನಾಟಕಕ್ಕೆ ಟೂರ್ನಿಯ ಏಕೈಕ ಪ್ರಶಸ್ತಿ ತಂದುಕೊಟ್ಟರು. 14 ವರ್ಷದೊಳಗಿನ (ಗ್ರೋಮ್ಸ್) ವಿಭಾಗದಲ್ಲಿ ಹರೀಶ್ ಪಿ ಮತ್ತು ಧಮಯಂತಿ ಶ್ರೀರಾಮ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಮಹಿಳೆಯರ ಓಪನ್ ವಿಭಾಗದಲ್ಲಿ ಕಮಲಿ ಮೂರ್ತಿ 13.17 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದರು. ಶುಗರ್ ಶಾಂತಿ ಬನರಸೆ (11.73) ದ್ವಿತೀಯ ಹಾಗೂ ಶೃಷ್ಟಿ ಸೆಲ್ವಂ (8.50) ತೃತೀಯ ಸ್ಥಾನ ಗಳಿಸಿದರು.

ಪುರುಷರ ಓಪನ್ ವಿಭಾಗದಲ್ಲಿ ಕಿಶೋರ್ ಕುಮಾರ್ 15.20 ಅಂಕಗಳೊಂದಿಗೆ ಚಾಂಪಿಯನ್ ಆದರು. ರಮೇಶ್ ಬುದಿಹಾಲ್ (12.87) ದ್ವಿತೀಯ, ಶಿವರಾಜ್ ಬಾಬು (11.90) ತೃತೀಯ ಸ್ಥಾನ ಪಡೆದರು.

ಸ್ಥಳೀಯ ಸರ್ಫರ್ ಪ್ರಥ್ವೀಪ್ ಪೂಜಾರ್ 12.17 ಅಂಕಗಳೊಂದಿಗೆ 18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಮನೆಮಾತಾದರು. ತಮಿಳುನಾಡಿನ ತಯಿನ್ ಅರುಣ್ (11.26) ಎರಡನೇ ಹಾಗೂ ಪ್ರಹ್ಲಾದ್ ಶ್ರೀರಾಮ್ (9.50) ಮೂರನೇ ಸ್ಥಾನ ಪಡೆದರು.

ಟೂರ್ನಿಯು 2026ರ ಐಚಿ–ನಾಗೋಯಾ ಏಷ್ಯನ್ ಗೇಮ್ಸ್‌ಗೆ ಭಾರತೀಯ ಸರ್ಫಿಂಗ್ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಮಂತ್ರ ಸರ್ಫ್ ಕ್ಲಬ್ ಹಾಗೂ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಶ್ರಯದಲ್ಲಿ ನಡೆದ ಸ್ಪರ್ಧೆಗೆ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಬೆಂಬಲ ನೀಡಿದ್ದವು. ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ ಸತತ 3ನೇ ವರ್ಷ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿತ್ತು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *