ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ಕಾಲೇಜ್ ಜತೆ ತುಂಬೆ ಗ್ರೂಪ್ ಮಹತ್ವದ ಒಪ್ಪಂದ, ಯುಎಇಯಲ್ಲಿ ಮೊದಲ ಬಾರಿಗೆ ದೀರ್ಘಾಯುಷ್ಯ ವೈದ್ಯಕೀಯ ಶಿಕ್ಷಣ

ಅಂತರ ಜಿಲ್ಲೆ ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ದೇಶ ವಿದೇಶ ಪುತ್ತೂರು ಮಂಗಳೂರು ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಮೊದಲ ಬಾರಿಗೆ ದೀರ್ಘಾಯುಷ್ಯ ವೈದ್ಯಕೀಯ (ಲಾಂಗ್‌ಜೆವಿಟಿ ಮೆಡಿಸಿನ್) ಕ್ಷೇತ್ರದಲ್ಲಿ ವ್ಯವಸ್ಥಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ತುಂಬೇ ಗ್ರೂಪ್ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್‌ಜೆವಿಟಿ ಸಾಯಿನ್ಸ್ (ಜಿಸಿಎಲ್‌ಎಸ್) ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ.

<

ಈ ಒಪ್ಪಂದದಡಿ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ ಅಡಿಯಲ್ಲಿ ‘ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಲಾಂಗ್‌ಜೆವಿಟಿ ಮೆಡಿಸಿನ್’ಸ್ಥಾಪನೆ ಆಗಲಿದ್ದು, ದೀರ್ಘಾಯುಷ್ಯ ವೈದ್ಯಕೀಯ, ಆರೋಗ್ಯಕರ ವಯೋವೃದ್ಧತೆ, ತಡೆಗಟ್ಟುವ ಆರೋಗ್ಯ ಸೇವೆ ಹಾಗೂ ನಿಖರ ಆರೋಗ್ಯ ಕ್ಷೇತ್ರಗಳಲ್ಲಿ ವೃತ್ತಿಪರ ಶಿಕ್ಷಣ ನೀಡಲಾಗುತ್ತದೆ. ಈ ಮೂಲಕ ಯುಎಇಯಲ್ಲಿ ಇಂತಹ ಶಿಕ್ಷಣ ನೀಡುವ ಮೊದಲ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯ ಪಾತ್ರ ಆಗಲಿದೆ.

ಜಿನೀವಾ ಕಾಲೇಜಿನ ಶೈಕ್ಷಣಿಕ ಪರಿಣತಿ ಹಾಗೂ ತುಂಬೆ ಹೆಲ್ತ್‌ಕೇರ್‌ ವೈದ್ಯಕೀಯ ಮೂಲಸೌಕರ್ಯವನ್ನು ಒಟ್ಟುಗೂಡಿಸುವ ಮೂಲಕ ಮಧ್ಯಪ್ರಾಚ್ಯದಲ್ಲಿ ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ನವೋದ್ಯಮಕ್ಕೆ ಹೊಸ ವೇದಿಕೆ ನಿರ್ಮಾಣವಾಗಲಿದೆ. ಇದು ಮುನ್ನೆಚ್ಚರಿಕಾ ಆರೋಗ್ಯ ಸೇವೆ ಹಾಗೂ ವೈದ್ಯಕೀಯ ನಾವೀನ್ಯತೆಯ ಜಾಗತಿಕ ಕೇಂದ್ರವಾಗಿ ಯುಎಇಯನ್ನು ಬೆಳೆಸುವ ಉದ್ದೇಶಕ್ಕೂ ಪೂರಕವಾಗಿದೆ.

ಒಪ್ಪಂದದ ಭಾಗವಾಗಿ ಮೂರು ತಿಂಗಳ ಹೈಬ್ರಿಡ್ ಮಾದರಿಯಲ್ಲಿ ಆರು ವೃತ್ತಿಪರ ಪ್ರಮಾಣಪತ್ರ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಕ್ಲಿನಿಕಲ್ ಲಾಂಗ್‌ಜೆವಿಟಿ ಮೆಡಿಸಿನ್, ಲಾಂಗ್‌ಜೆವಿಟಿ ಫಿಸಿಯೋಥೆರಪಿ, ಲಾಂಗ್‌ಜೆವಿಟಿ ಪೌಷ್ಟಿಕಾಹಾರ, ಲಾಂಗ್‌ಜೆವಿಟಿ ಫಿಟ್ನೆಸ್, ಪೆಪ್ಟೈಡ್ ಮೆಡಿಸಿನ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಕೃತಕ ಬುದ್ಧಿಮತ್ತೆ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಪ್ರತಿ ಕೋರ್ಸ್‌ಗೆ ಆರಂಭದಲ್ಲಿ ಸುಮಾರು 100 ಅಭ್ಯರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. 2026–27ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಸೆಪ್ಟೆಂಬರ್–ಅಕ್ಟೋಬರ್ ಅವಧಿಯ ಮೊದಲ ಬ್ಯಾಚ್‌ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ವಿವರಗಳು www.gmu.ac.ae ನಲ್ಲಿ ಲಭ್ಯವಿದೆ.

ವೈದ್ಯರು, ಔಷಧ ತಜ್ಞರು, ದಾದಿಯರು, ಫಿಸಿಯೋಥೆರಪಿಸ್ಟ್‌ಗಳು, ಪೌಷ್ಟಿಕ ತಜ್ಞರು ಹಾಗೂ ಇತರ ಆರೋಗ್ಯ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮ ರೂಪಿಸಲಾಗಿದೆ. ಜಾಗತಿಕ ಮಟ್ಟದ ಪಠ್ಯಕ್ರಮ, ಅಂತರರಾಷ್ಟ್ರೀಯ ಬೋಧಕ ವೃಂದ ಹಾಗೂ ಪ್ರಾದೇಶಿಕ ವೈದ್ಯಕೀಯ ತಜ್ಞರಿಂದ ತರಬೇತಿ ನೀಡಲಾಗುತ್ತದೆ.

ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಅವರು ಮಾತನಾಡಿ, ಸ್ವಿಸ್ ಶಿಕ್ಷಣದ ಗುಣಮಟ್ಟವನ್ನು ಗಲ್ಫ್ ರಾಷ್ಟ್ರಗಳ ಆರೋಗ್ಯ ವೃತ್ತಿಪರರಿಗೆ ತಲುಪಿಸುವುದು ನಮ್ಮ ಉದ್ದೇಶ. ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯವನ್ನು ವಿಶ್ವದ ಮುಂಚೂಣಿ ವೈದ್ಯಕೀಯ ವಿಶ್ವವಿದ್ಯಾಲಯವನ್ನಾಗಿ ರೂಪಿಸಲು ಈ ಸಹಭಾಗಿತ್ವ ನೆರವಾಗಲಿದೆ” ಎಂದು ತಿಳಿಸಿದ್ದಾರೆ.

ಜಿನೀವಾ ಕಾಲೇಜ್ ಆಫ್ ಲಾಂಗ್‌ಜೆವಿಟಿ ಸೈನ್ಸ್ ಅಧ್ಯಕ್ಷ ಡಾ. ಡೊಮಿನಿಕ್ ಥೋರ್, “ಆಧುನಿಕ ಆರೋಗ್ಯ ಸೇವೆಯಲ್ಲಿ ದೀರ್ಘಾಯುಷ್ಯ ವೈದ್ಯಕೀಯಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ. ಈ ಕ್ಷೇತ್ರಕ್ಕೆ ಗುಣಮಟ್ಟದ ಶಿಕ್ಷಣ ಹಾಗೂ ವೈಜ್ಞಾನಿಕ ಮಾನದಂಡಗಳ ಅಗತ್ಯವಿದ್ದು, ಮಧ್ಯಪ್ರಾಚ್ಯದಲ್ಲಿ ಅದಕ್ಕೆ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯ ಸೂಕ್ತ ಪಾಲುದಾರ” ಎಂದು ತಿಳಿಸಿದ್ದಾರೆ.

ಆರು ವಿಶೇಷ ಪ್ರಮಾಣಪತ್ರ ಕೋರ್ಸ್‌ಗಳು

* ಕ್ಲಿನಿಕಲ್ ದೀರ್ಘಾಯುಷ್ಯ ವೈದ್ಯಕೀಯ
* ದೀರ್ಘಾಯುಷ್ಯ ಫಿಸಿಯೋಥೆರಪಿ
* ದೀರ್ಘಾಯುಷ್ಯ ಪೌಷ್ಟಿಕಾಹಾರ
* ದೀರ್ಘಾಯುಷ್ಯ ಫಿಟ್ನೆಸ್
* ಪೆಪ್ಟೈಡ್ ವೈದ್ಯಕೀಯ
* ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ

 

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *