ಬ್ಯಾಕ್ ಟು ಬ್ಯಾಕ್ ಆರ್ ಸಿಬಿ ಗೆಲುವಿನ ಪತಾಕೆ, ಐಪಿಎಲ್ ನಲ್ಲಿ ಮತ್ತೇ ಅಜೇಯ, ಕೊಹ್ಲಿ ಆಟಕ್ಕೆ ಪ್ರೇಕ್ಷಕರ ಪಿಧಾ

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳ ದಶಕಗಳ ಕನಸನ್ನು ನನಸು ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈಗ ಸತತ 2 ನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಅಹಮದಾಬಾದ್‌ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಆರ್​​ಸಿಬಿ, ಮತ್ತೊಮ್ಮೆ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದೆ. ಈ ಸಲವೂ ಕಪ್ ನಮ್ಮದೇ ಎಂದು ಸಾರಿದ್ದ ಅಭಿಮಾನಿಗಳ ಸಂಭ್ರಮವೀಗ ಮುಗಿಲು ಮುಟ್ಟಿದೆ. ಆರ್​​ಸಿಬಿ ಜಯಭೇರಿ […]

Continue Reading

ಧರ್ಮಸ್ಥಳದಲ್ಲಿ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್

 ಉಜಿರೆ: ಗ್ರಾಮೀಣ ಮಹಿಳೆಯರ ಸಂಕಷ್ಟದ ಬದುಕನ್ನು ಕಣ್ಣಾರೆ ಕಂಡ ಬಳಿಕ ಅವರಿಗೆ ಶಾಶ್ವತ ಜೀವನೋಪಾಯ ಕಲ್ಪಿಸುವ ಉದ್ದೇಶದಿಂದ ಆರಂಭವಾದ ಪ್ರಯತ್ನವೇ ‘ಸಿರಿ’ ಎಂಬ ಮಹಿಳಾ ಆರ್ಥಿಕ ಸಬಲೀಕರಣದ ಚಳವಳಿಯಾಗಿ ಬೆಳೆದು ಬರುತ್ತಿದೆ ಎಂದು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಹೇಳಿದರು. ಬೆಳ್ತಂಗಡಿಯ ಮಾತೃಶ್ರೀ ಸಿರಿ ಇಂಡಸ್ಟ್ರಿಯಲ್ ಪಾರ್ಕ್ ಉದ್ಘಾಟನೆ ಮಾಡಿ ಭಾನುವಾರ ಧರ್ಮಸ್ಥಳದಲ್ಲಿ ಅವರು ಮಾತನಾಡಿ, ಸರ್ವಧರ್ಮೀಯರನ್ನೂ, ಎಲ್ಲ ಜಾತಿಯವರನ್ನೂ ಸಮಾನತೆ ಮತ್ತು ಗೌರವಭಾವದಿಂದ ಪರಿಗಣಿಸಿ ಸಾಮಾಜಿಕ ಸಾಮರಸ್ಯದ ಜತೆಗೆ ಅವರು ಮಾಡುತ್ತಿರುವ ಸೇವೆ ಆದರ್ಶ […]

Continue Reading

ಮೂಡುಬಿದಿರೆ ಆಳ್ವಾಸ್ ಪದವಿ ಪ್ರದಾನ ಸಮಾರಂಭ, ಪದವಿ ಪ್ರಮಾಣ ಪತ್ರಕ್ಕಿಂತ ಮೌಲ್ಯಗಳೇ ಶ್ರೇಷ್ಠ ಎಂದ ಡಾ. ಚಿನ್ನಪ್ಪ ಗೌಡ

ಮೂಡುಬಿದಿರೆ : ಶಿಕ್ಷಣದ ನಿಜವಾದ ಉದ್ದೇಶವು ಕೇವಲ ಪದವಿ ಪಡೆಯುವುದಲ್ಲ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಾಗಿದೆ. ಪದವಿ ಪ್ರಮಾಣಪತ್ರವು ಕೇವಲ ಒಂದು ಕಾಗದದ ತುಣುಕಾಗಿದ್ದು, ಅದಕ್ಕೆ ನಿಜವಾದ ಮೌಲ್ಯ ದೊರೆಯುವುದು ವ್ಯಕ್ತಿಯ ಜ್ಞಾನ, ಸಾಮರ್ಥ್ಯ, ಪ್ರಾಮಾಣಿಕತೆ ಹಾಗೂ ಜೀವನ ಮೌಲ್ಯಗಳಿಂದ ಮಾತ್ರ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶನಿವಾರ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಆಯೋಜಿಸಲಾದ ಪದವಿ ಪ್ರದಾನ ಸಮಾರಂಭದಲ್ಲಿ ಆಳ್ವಾಸ್‌ನ ವಿವಿಧ ಶಿಕ್ಷಣ ಸಂಸ್ಥೆಗಳ […]

Continue Reading

ಕೈ ಹೈಕಮಾಂಡ್ ಚಾಣಾಕ್ಷ ನಡೆ, ಸಿದ್ದು ಬಾಯಿಂದಲೇ ಡಿಕೆಶಿ ಹೆಸರು ಪ್ರಸ್ತಾಪ, ಡಿಕೆಶಿ ಸಿಎಲ್ ಪಿಗೆ ಅವಿರೋಧ ಆಯ್ಕೆ

ಬೆಂಗಳೂರು: ಕೈ ಹೈಕಮಾಂಡ್ ಕೊನೆಗೂ ತನ್ನ ಚಾಣಾಕ್ಷ ನಡೆಯಿಂದ ಅಧಿಕಾರ ಹಂಚಿಕೆಯ ಬಿಕ್ಕಟ್ಟನ್ನು ಪರಿಹಾರ ಮಾಡುವಲ್ಲಿ ಯಶಸ್ಸು ಕಂಡಿದೆ. ಸಿದ್ದರಾಮಯ್ಯ ಅವರಿಂದಲೇ ಡಿಕೆಶಿ ಹೆಸರನ್ನು ಸಿಎಂ ಪಟ್ಟಕ್ಕೆ ಹೇಳಿಸಿದ್ದು ಅಚ್ಚರಿಯ ನಡೆಗೆ ಕಾರಣ ಆಗಿದೆ. ಎಲ್ಲ ಶಾಸಕರು ಕೈ ಎತ್ತುವ ಮೂಲಕ ಡಿಕೆಶಿಗೆ ಬೆಂಬಲ ಸೂಚನೆ ಮಾಡಿದರು. ಡಿಕೆಶಿ ಅವರು ಸರಕಾರ ರಚನೆಗೆ ಹಕ್ಕು ಮಂಡಿಸುವುದಕ್ಕೆ ರಾಜ್ಯಪಾಲರನ್ನು ಭೇಟಿ ಮಾಡಿದರು. ಬುಧವಾರ ಸಿಎಂ ಆಗಿ ಡಿಕೆಶಿ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ವೇಳೆ ಮಾತನಾಡಿದ ಕೆಸಿ […]

Continue Reading

ಮಂಗಳೂರಿಗೆ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಆಗಮನ, ಸ್ವಾಗತಿಸಿದ ಜಿಲ್ಲಾಡಳಿತ

ಮಂಗಳೂರು: ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶನಿವಾರ ಮಂಗಳೂರಿಗೆ ಆಗಮಿಸಿದರು. ವಾಯುಪಡೆ ವಿಶೇಷ ವಿಮಾನದಲ್ಲಿ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಪ ರಾಷ್ಟ್ರಪತಿ ಅವರನ್ನು ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರು ಕರಾವಳಿಯ ಮಲ್ಲಿಗೆ ಹಾರವನ್ನು ಹಾಕಿ ಸ್ವಾಗತಿಸಿದರು. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಅವರು ಉಪರಾಷ್ಟ್ರಪತಿಗಳನ್ನು ಸ್ವಾಗತಿಸಿದರು. ಬಳಿಕ ಅವರು ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ತೆರಳಿ, ಧರ್ಮಸ್ಥಳ ಅಥಿತಿಗೃಹದಲ್ಲಿ ವಾಸ್ತವ್ಯ ಹೂಡಿದರು. ಭಾನುವಾರ […]

Continue Reading

ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ : ಅಲೆಗಳ ವಯ್ಯಾರ ಅಬ್ಬರದಲ್ಲಿ ಸರ್ಫರ್ ಗಳ ತೀವ್ರ ಹಣಾಹಣಿ

ಮಂಗಳೂರು: ಇಲ್ಲಿನ ತಣ್ಣೀರು ಭಾವಿಯಲ್ಲಿ ನಡೆಯುತ್ತಿರುವ 7 ನೇ ಆವೃತ್ತಿಯ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆಯ 2ನೇ ದಿನ ಪುರುಷರ ಓಪನ್ ವಿಭಾಗದ ಸೆಮಿಫೈನಲಿಸ್ಟ್‌ಗಳು ಭರ್ಜರಿ ಪ್ರದರ್ಶನ ನೀಡಿದರು. ಶನಿವಾರ ನಡೆದ ಐದು ವಿಭಾಗಗಳಲ್ಲಿ ಒಟ್ಟು ಆರು ಕ್ವಾರ್ಟರ್‌ಫೈನಲ್ ಹಾಗೂ ಆರು ಸೆಮಿಫೈನಲ್ ಪಂದ್ಯಗಳು ನಡೆದವು. ಪುರುಷರ ಮುಕ್ತ ವಿಭಾಗದ ಕ್ವಾರ್ಟರ್‌ ಫೈನಲ್‌ ನಲ್ಲಿ ಕೇರಳದ ರಮೇಶ್ ಬೂದಿಹಾಳ್ 14.83 ಅಂಕ ಗಳಿಸಿ ಅಗ್ರಸ್ಥಾನ ದಾಖಲಿಸಿದರು. ಶ್ರೀಕಾಂತ್ ಡಿ 13 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, […]

Continue Reading

ಮ್ಯಾವರಿಕ್ಸ್ ಸಮರ್ ನ್ಯಾಷನಲ್ಸ್ ಬ್ರಿಡ್ಜ್ ಪಂದ್ಯಾವಳಿ: ಮಾರ್ಜೊರಿ ಟೆಕ್ಸೇರಾ

ಮಂಗಳೂರು: ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ‘ಮ್ಯಾವರಿಕ್ಸ್ ಸಮರ್ ನ್ಯಾಷನಲ್ಸ್ 2026’ ಬ್ರಿಡ್ಜ್ ಪಂದ್ಯಾವಳಿ ಜೂನ್ 4 ರಿಂದ 13 ರವರೆಗೆ ನಗರದ ಸೆಂಟ್ ಸೆಬಾಸ್ಟಿಯನ್ ಸೆಂಟೆನರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷೆ ಮಾರ್ಜೊರಿ ಟೆಕ್ಸೇರಾ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತೀಯ ಬ್ರಿಡ್ಜ್ ಫೆಡರೇಷನ್ ಹಾಗೂ ಕರ್ನಾಟಕ ರಾಜ್ಯ ಬ್ರಿಡ್ಜ್ ಅಸೋಸಿಯೇಷನ್ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಚಾಂಪಿಯನ್‌ ಷಿಪ್‌ನಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ […]

Continue Reading

ಮಂಗಳೂರಿಗೆ ಸಿಟಿ ಬಸ್ ಮಾರ್ಗಗಳ ವಿಸ್ತರಣೆಗೆ ಪತ್ರ, ಆರ್ ಟಿಎ ಮುಂದಿನ ಸಭೆಯಲ್ಲಿ ಸೂಕ್ತ ಕ್ರಮಕ್ಕೆ ಸೂಚನೆ: ಸಂಸದ ಕ್ಯಾ. ಚೌಟ

ಮಂಗಳೂರು: ನಗರದ ಕೆಲ ಪ್ರಮುಖ ಸಿಟಿ ಬಸ್ ಮಾರ್ಗಗಳ ಬದಲಾವಣೆ ಮತ್ತು ವಿಸ್ತರಣೆ ಅಗತ್ಯತೆ ಕುರಿತು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬರೆದಿರುವ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಮುಂಬರುವ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ತುರ್ತಾಗಿ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೋರಿ ಹೆಚ್ಚುವರಿ ಜಿಲ್ಲಾಧಿಕಾರಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮಂಗಳೂರು ನಗರ ಭೌಗೋಳಿಕ ಮತ್ತು ಜನಸಂಖ್ಯಾ ಬೆಳವಣಿಗೆಗೆ ಪೂರಕವಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು […]

Continue Reading

ಭಟ್ಕಳ ಶಿರಾಲಿ ಸಮೀಪದ ಚಿಪ್ಪೆಕಲ್ಲು ದುರಂತ, 11 ಮಂದಿ ಮೃತ ಕುಟುಂಬದ ಸಂತ್ರಸ್ತರಿಗೆ ತಲಾ ₹16.50 ಲಕ್ಷ ಪರಿಹಾರ: ಮಾನವೀಯತೆ ಮೆರೆದ ಜಿಲ್ಲಾಡಳಿತ, ಮಾಜಿ ಸಚಿವ ಮಂಕಾಳ  ವೈದ್ಯ

ಕಾರವಾರ: ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪ ನದಿಯಲ್ಲಿ ಚಿಪ್ಪೆಕಲ್ಲು ತೆಗೆಯಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ ಮಾಜಿ ಸಚಿವ ಮಂಕಾಳ ಎಸ್ ವೈದ್ಯ ಅವರು ಶುಕ್ರವಾರ ಪರಿಹಾರದ ಚೆಕ್ ವಿತರಿಸಿದರು. ಮೃತರ ವಾರಸುದಾರರ ಮನೆಗಳಿಗೆ ಭೇಟಿ ನೀಡಿ ತಲಾ ₹16.50 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದರು. https://www.karavalidailynews.com/wp-content/uploads/2026/05/1-1.mp4 ಬಳಿಕ ಮಾತನಾಡಿದ ಅವರು, ಕಪ್ಪೆಚಿಪ್ಪು ದುರಂತದಲ್ಲಿ ಮೃತಪಟ್ಟ 11 ಮಂದಿಯ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ ₹5 ಲಕ್ಷದಂತೆ ಒಟ್ಟು ₹55 […]

Continue Reading

ತಣ್ಣೀರುಭಾವಿ: ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್‌ಗೆ ಭರ್ಜರಿ ಚಾಲನೆ, ಜಿಲ್ಲಾಧಿಕಾರಿ ದರ್ಶನ್ ಚಾಲನೆ

ಮಂಗಳೂರು: ಇಲ್ಲಿನ ನಗರದ ತಣ್ಣೀರುಭಾವಿ ಬ್ಲೂ ಬೇ ಇಕೋ ಬೀಚ್‌ನಲ್ಲಿ ಶುಕ್ರವಾರ ಆರಂಭವಾದ 7 ನೇ ಆವೃತ್ತಿಯ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಗೆ ಅದ್ದೂರಿ ಚಾಲನೆ ಸಿಕ್ಕಿದೆ. ರಾಷ್ಟ್ರೀಯ ಚಾಂಪಿಯನ್‌ ಷಿಪ್ ಸರಣಿ ಪ್ರಮುಖ ಹಂತ ಆಗಿರುವ ಈ ಟೂರ್ನಿ, ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿಯೂ ಮಹತ್ವ ಪಡೆದಿದ್ದು, ಉತ್ತಮ ಹವಾಮಾನ ಹಾಗೂ ಅಬ್ಬರದ ಅಲೆಗಳ ನಡುವೆ ಸ್ಪರ್ಧೆಗಳು ಆರಂಭಗೊಂಡವು. ಇದಕ್ಕೂ ಮೊದಲು ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ […]

Continue Reading