ಮಂಗಳೂರು: ಕರಾವಳಿ ಬ್ರಿಡ್ಜ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಠಿತ ‘ಮ್ಯಾವರಿಕ್ಸ್ ಸಮರ್ ನ್ಯಾಷನಲ್ಸ್ 2026’ ಬ್ರಿಡ್ಜ್ ಪಂದ್ಯಾವಳಿ ಜೂನ್ 4 ರಿಂದ 13 ರವರೆಗೆ ನಗರದ ಸೆಂಟ್ ಸೆಬಾಸ್ಟಿಯನ್ ಸೆಂಟೆನರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷೆ ಮಾರ್ಜೊರಿ ಟೆಕ್ಸೇರಾ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾರತೀಯ ಬ್ರಿಡ್ಜ್ ಫೆಡರೇಷನ್ ಹಾಗೂ ಕರ್ನಾಟಕ ರಾಜ್ಯ ಬ್ರಿಡ್ಜ್ ಅಸೋಸಿಯೇಷನ್ ಆಶ್ರಯದಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ವಾರ್ಷಿಕ ರಾಷ್ಟ್ರೀಯ ಚಾಂಪಿಯನ್ ಷಿಪ್‌ನಲ್ಲಿ ದೇಶದ ವಿವಿಧ ಭಾಗಗಳಿಂದ ಹಾಗೂ ಪೋಲೆಂಡ್ ದೇಶದಿಂದ ವಿಶ್ವ ಚಾಂಪಿಯನ್ ಆಟಗಾರರಾದ ಬುರಾಸ್ ಕ್ರಿಸ್ಟೋಫ್ ಜರ್ಜಿ, ಡೊಮಿನಿಕ್ ಫಿಲೋಫೋವಿಚ್ ಜಾಕೋಬ್ ಪಾತೇಹುವಾ ಮತ್ತು ಪ್ಯಾಟ್ರಿಕ್ ಪಾತೇಹುವಾ ಸೇರಿದಂತೆ ಸುಮಾರು 450ಕ್ಕೂ ಅಧಿಕ ಖ್ಯಾತ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ಡೆರೆಕ್ ರೇಗೊ ಹಾಗೂ ಸದಸ್ಯ ವಿನ್ಸ್ಟನ್ ಡಿಸೋಜ ಇದ್ದರು.



