ಮಂಗಳೂರಿನಲ್ಲಿ ಜೆಎಲ್‌ಆರ್ ಇಂಡಿಯಾ ನೂತನ ಮಳಿಗೆಗೆ ರಾಜನ್ ಅಂಬಾ ಚಾಲನೆ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ಐಷಾರಾಮಿ ಕಾರುಗಳ ವಿಭಾಗದಲ್ಲಿ ಮಂಗಳೂರು, ದಕ್ಷಿಣ ಭಾರತದ ಅತ್ಯಂತ ಪ್ರಮುಖ ಮಾರುಕಟ್ಟೆ ಆಗಿದೆ. ಇಲ್ಲಿ ನಮ್ಮ ನೂತನ ಘಟಕವನ್ನು ಆರಂಭಿಸಲು ನಮಗೆ ಸಂತೋಷ ಆಗಿದೆ. ಕರ್ನಾಟಕದಲ್ಲಿ ಮತ್ತು ಈ ಭಾಗದಲ್ಲಿ ನಮ್ಮ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಹೆಜ್ಜೆ ಇಟ್ಟಿದ್ದೇವೆ” ಎಂದು ಪ್ರತಿಷ್ಠಿತ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಜೆಎಲ್‌ಆರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಾಜನ್ ಅಂಬಾ ಅವರು ತಿಳಿಸಿದರು.

<

ಮಂಗಳೂರಿನ ಕೊಟ್ಟಾರದಲ್ಲಿ ಇರುವ ಜೆಎಲ್‌ಆರ್ ಇಂಡಿಯಾದ ಸೇವಾ ಮತ್ತು ಬಿಡಿಭಾಗಗಳ ಕೇಂದ್ರದ ಪಕ್ಕದಲ್ಲೇ ಸಂಸ್ಥೆಯು ತನ್ನ ಈ ನೂತನ ‘ಮಾಡರ್ನ್ ಲಕ್ಸುರಿ’ ಮಾರಾಟ ಕೇಂದ್ರವನ್ನು ಉದ್ಘಾಟಿಸಿದ್ದು, ಈ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಈ ಅತ್ಯಾಧುನಿಕ ಮಳಿಗೆಯ ಮೂಲಕ ಗ್ರಾಹಕರಿಗೆ ಮಾರಾಟ ಮತ್ತು ಸೇವೆ ಎರಡೂ ಒಂದೇ ಕಡೆ ಲಭ್ಯವಾಗಲಿದ್ದು, ಸಮಗ್ರ ಅನುಭವ ನೀಡಲಿದೆ. ಈ ಹೊಸ ಕೇಂದ್ರದೊಂದಿಗೆ ಜೆಎಲ್‌ಆರ್ ಇಂಡಿಯಾದ ವಿತರಣಾ ಜಾಲವು ಈಗ ದೇಶದ 22 ನಗರಗಳಲ್ಲಿ ಒಟ್ಟು 28 ಮಳಿಗೆಗಳಿಗೆ ಬೆಳೆದಂತಾಗಿದೆ ಎಂದರು.

ಪಾಪ್ಯುಲರ್ ಅಟೋವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ, ಮಾರ್ಕ್‌ಲ್ಯಾಂಡ್ ಅಡಿಯಲ್ಲಿ ಈ ಮಳಿಗೆ ಕಾರ್ಯಾಚರಿಸಲಿದೆ. ಇಲ್ಲಿ ರೇಂಜ್ ರೋವರ್, ಡಿಫೆಂಡರ್ ಮತ್ತು ಡಿಸ್ಕವರಿ ಬ್ರ್ಯಾಂಡ್‌ ಗಳ ಎಲ್ಲಾ ಮಾದರಿಯ ಕಾರುಗಳು ಪ್ರದರ್ಶನಕ್ಕಿರಲಿವೆ. ಇದರೊಂದಿಗೆ ಕಂಪನಿಯ ಬ್ರ್ಯಾಂಡೆಡ್ ಸರಕುಗಳು ಮತ್ತು ಪರಿಶೀಲಿಸಲ್ಪಟ್ಟ ಹಳೆಯ ಕಾರುಗಳ ಮಾರಾಟಕ್ಕೂ ಅವಕಾಶವಿದೆ. ನುರಿತ ತಂತ್ರಜ್ಞರನ್ನು ಒಳಗೊಂಡ ಸುಸಜ್ಜಿತ ಸರ್ವಿಸ್ ವರ್ಕ್‌ಶಾಪ್ ಈ ಕೇಂದ್ರದ ಪ್ರಮುಖ ಆಕರ್ಷಣೆ ಆಗಿದೆ ಎಂದರು.

ಮಾರ್ಕ್‌ಲ್ಯಾಂಡ್ ಸಮೂಹದ ಸಹಯೋಗದೊಂದಿಗೆ ಈ ಕೇಂದ್ರವು ಗ್ರಾಹಕರಿಗೆ ಜಾಗತಿಕ ಗುಣಮಟ್ಟದ ಸೇವೆಯನ್ನು ನೀಡಲಿದ್ದು, ಅತ್ಯಾಧುನಿಕ ಹಾಗೂ ಆಕರ್ಷಕ ಪರಿಸರದಲ್ಲಿ ಕಂಪನಿಯ ಸಂಪೂರ್ಣ ಉತ್ಪನ್ನ ಶ್ರೇಣಿಯನ್ನು ಪರಿಚಯಿಸಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *