ಮಂಗಳೂರು: ಮಾತಾ ಅಮೃತಾನಂದಮಯಿ ಮಠಕ್ಕೆ ಮೇ 28 ರಂದು ಆಗಮಿಸುವ ಸದ್ಗುರು ಮಾತಾ ಅಮೃತಾನಂದಮಯಿ ದೇವಿ ಅವರ ಕಾರ್ಯಕ್ರಮ” ಬ್ರಹ್ಮಸ್ಥಾನಂ ಮಹೋತ್ಸವ ಮತ್ತು ಅಮೃತಸಂಗಮ ಅಂಗವಾಗಿ ಚಪ್ಪರ ಮುಹೂರ್ತ ನಡೆಯಿತು.

ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ, ಮಾನವ ಮಹಾದೇವತ್ವಕ್ಕೆ ಏರುವ ಪುಣ್ಯಭೂಮಿ ಭಾರತ. ನಡೆದಾಡುವ , ಮಾತನಾಡುವ ದೇವರು ಮಾತಾ ಅಮೃತಾನಂದಮಯಿ ದೇವಿ, ಅವರು ಜಗತ್ತಿಗೆ ಪ್ರೇಮದ ಸಂದೇಶ ಸಾರುತ್ತಿದ್ದಾರೆ. ಪ್ರೀತಿ ಮತ್ತು ವಾತ್ಸಲ್ಯ ತಾಯಿಯ ಸಹಜ ಗುಣ. ಅಮ್ಮ ಅವರು ಶ್ರೇಷ್ಠವಾದ ಶಿಕ್ಷಣ ಯಜ್ಞ , ಆರೋಗ್ಯ ಯಜ್ಞ ಮೊದಲಾದ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.ಇಲ್ಲಿನ ಸೇವಾ ಸಮಿತಿಯು ಅತ್ಯುತ್ತಮ ಕಾರ್ಯಕ್ರಮಗಳನ್ನು ಕಳೆದ ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗೌರವಾಧ್ಯಕ್ಷ ಡಾ.ಜೀವರಾಜ್ ಸೊರಕೆ ಅವರು ಮಾತನಾಡಿ, ಅಮ್ಮನವರು ಈ ಬಾರಿ ರಾಜ್ಯದಲ್ಲಿ ಏಕೈಕ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಅದರಲ್ಲಿ ಮಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಸುವ ಸೌಭಾಗ್ಯ ಇಲ್ಲಿನ ಭಕ್ತರ ಪಾಲಿಗೆ ಲಭಿಸಿದೆ. ಮಂಗಳೂರಿನ ಕಾರ್ಯಕ್ರಮ ಎಂದರೆ ಅದು ಶ್ರೇಷ್ಠ ಮಟ್ಟದ ಕಾರ್ಯಕ್ರಮ ಆಗಿರುತ್ತದೆ ಎಂಬ ಅನುಭವ ಅಸಂಖ್ಯಾತ ಭಕ್ತರದು. ಅವರೆಲ್ಲರೂ ಅಮ್ಮನವರ ದರ್ಶನಕ್ಕೆ ಮಂಗಳೂರನ್ನು ಆಯ್ಕೆ ಮಾಡುತ್ತಿರುವ ಕಾರಣ ನಮ್ಮ ಜವಾಬ್ದಾರಿ ಬಹಳ ಮಹತ್ವದ್ದು ಆಗಿದೆ ಎಂದರು.
ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಆಶೀರ್ವಚನವಿತ್ತು, ಅಮ್ಮನವರ ಭೇಟಿಯ ಬಗ್ಗೆ ಏಳು ವರ್ಷಗಳಿಂದ ಕಾತರದಿಂದ ಕಾದು ಕುಳಿತ ಭಕ್ತರಿಗೆ ಇದೊಂದು ಉತ್ತಮ ಅವಕಾಶ ಆಗಿದ್ದು ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.
ಗೌರವಾಧ್ಯಕ್ಷ ಡಾ. ವಸಂತ ಕುಮಾರ್ ಪೆರ್ಲ ನಿರೂಪಣೆ ಮಾಡಿ ಕಾರ್ಯಕ್ರಮದ ಸ್ವರೂಪ ತಿಳಿಸಿದರು.
ಗುತ್ತಿಗೆದಾರ ಭಾಸ್ಕರ್ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಗೌರವ ಅಧ್ಯಕ್ಷ ಸಿ ಎ. ವಾಮನ್ ಕಾಮತ್, ಮುರಳೀಧರ್ ಶೆಟ್ಟಿ, ವಾಮನ್ ಮೈಂದನ್, ಚಂದ್ರಹಾಸ್ ಸುವರ್ಣ,ಗಣೇಶ್ ಕೆ,ಕೃಷ್ಣಶೆಟ್ಟಿ,ಅಡ್ವೊಕೇಟ್ ಪುಷ್ಪಲತಾ, ಅಮೃತ ವಿದ್ಯಾಲಯಂ ಪ್ರಾಂಶುಪಾಲೆ ಮಧುಲಿಖಾ ರಾವ್ ಸೇವಾ ಸಮಿತಿಯ ಪದಾಧಿಕಾರಿಗಳು ಇದ್ದರು.
What do you feel about this post?
Like
Love
Happy
Haha
Sad
