ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು. ದಿಲೀಪ್ ರಾಜ್ ಅವರ ಈ ಅಕಾಲಿಕ ನಿಧನದಿಂದಾಗಿ ಚಿತ್ರರಂಗದಲ್ಲಿ ನೀರವ ಮೌನ ಉಂಟಾಗಿದೆ.
ಕರುನಾಡಿನಲ್ಲಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಬುಧಾವರ ಮುಂಜಾನೆ ಹೃದಯಾಘಾತ ಹಿನ್ನೆಲೆ, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ನಿಧನರಾಗಿದ್ದಾರೆ.
ಕುಟುಂಬಸ್ಥರು ಹಾಗೂ ಪತ್ನಿ ವಿದ್ಯಾ ಅವರು ದುಃಖವು ಮುಗಿಲು ಮುಟ್ಟಿದೆ. ಕನ್ನಡ ಸಿನಿಮಾಗಳಲ್ಲಿ ನಾಯಕ ನಟ, ಖಳ ನಟ, ಪೋಷಕ ಪಾತ್ರಗಳಲ್ಲಿ ಉತ್ತಮ ನಟನೆ ಜತೆಗೆ ಕಂಠದಾನ ಕಲಾವಿದರೂ ಆಗಿದ್ದರು. 2007ರಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಮಿಲನ ಚಿತ್ರದಲ್ಲಿ ಕೆಲಸ ಮಾಡಿ ಜನಪ್ರಿಯತೆ ಹೆಚ್ಚಿಸಿಕೊಂಡರು. ನಂತರ ನಿರ್ಮಾಪಕರಾಗಿ ತಮ್ಮ ಬ್ಯಾನರ್ ಅಡಿ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದರು.
ಮಿಲನ, ಯೂ ಟರ್ನ್, ಗಾನ ಬಜಾನ, ಅಂಬಿ ನಿಂಗ್ ವಯಸ್ಸಾಯ್ತೋ, ಇತ್ತೀಚಿಗೆ ತೆರೆಕಂಡ ಲವ್ ಮಾಕ್ಟೇಲ್ 3 ಸೇರಿದಂತೆ 25 ಸಿನಿಮಾಗಳಲ್ಲಿ ದಿಲೀಪ್ ರಾಜ್ ನಟಿಸಿದ್ದಾರೆ. ದಿಲೀಪ್ ರಾಜ್ ಅವರ ಪತ್ನಿ ಸೀರಿಯಲ್ ನಿರ್ದೇಶಕಿ ಆಗಿದ್ದು, ಕೆಲ ಸೀರಿಯಲ್ ನಿರ್ಮಾಣದಲ್ಲಿ ದಿಲೀಪ್ ರಾಜ್ ತೊಡಗಿಸಿಕೊಂಡಿದ್ದರು. ಆದರೆ ಈಗ ಅವರ ಹಠಾತ್ ನಿಧನದಿಂದ ಕನ್ನಡ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ.
What do you feel about this post?
Like
Love
Happy
Haha
Sad
