ತಣ್ಣೀರುಭಾವಿ: ಸರ್ಫಿಂಗ್ ಸ್ಪರ್ಧೆ ಸರ್ಫರ್‌ಗಳ ತೀವ್ರ ಹಣಾಹಣಿ; ‌ಕಮಲಿ ಮೂರ್ತಿ ಶುಭಾರಂಭದ ಮಿಂಚು

ಕ್ರೀಡೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ದೇಶ ವಿದೇಶ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ಇಲ್ಲಿನ ನಗರದ ತಣ್ಣೀರುಭಾವಿ ಬ್ಲೂ ಬೇ ಇಕೋ ಬೀಚ್‌ನಲ್ಲಿ ಶುಕ್ರವಾರ ಆರಂಭವಾದ ಏಳನೇ ಆವೃತ್ತಿಯ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026ರ ಮೊದಲ ದಿನವೇ ದೇಶದ ಪ್ರಮುಖ ಸರ್ಫರ್‌ಗಳು ಅಲೆಗಳ ನಡುವೆ ರೋಮಾಂಚಕ ಪ್ರದರ್ಶನ ನೀಡಿದರು.

ರಾಷ್ಟ್ರೀಯ ಚಾಂಪಿಯನ್‌ ಷಿಪ್ ಸರಣಿ ಪ್ರಮುಖ ಹಂತ ಆಗಿರುವ ಈ ಟೂರ್ನಿ, ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿಯೂ ಮಹತ್ವ ಪಡೆದಿದ್ದು, ಉತ್ತಮ ಹವಾಮಾನ ಹಾಗೂ ಅಬ್ಬರದ ಅಲೆಗಳ ನಡುವೆ ಸ್ಪರ್ಧೆಗಳು ಆರಂಭಗೊಂಡವು.

ಮಹಿಳೆಯರ ಮುಕ್ತ ವಿಭಾಗದಲ್ಲಿ ಕಮಲಿ ಮೂರ್ತಿ, ಶುಗರ್ ಶಾಂತಿ ಬನಾರ್ಸೆ, ಇಶಿತಾ ಮಲಾವಿಯಾ, ದೇವಿ ರಾಮನಾಥನ್, ಸಾನ್ವಿ ಹೆಗ್ಡೆ ಹಾಗೂ ಶ್ರೀಷ್ಟಿ ಸೆಲ್ವಂ ಸೆಮಿಫೈನಲ್ ಗೆ ಪ್ರವೇಶ ಪಡೆದುಕೊಂಡು, ಫೈನಲ್ ಹಣಾಹಣಿಯಲ್ಲಿ ಮುಖಾಮುಖಿ ಆಗಲಿವೆ.

ಮೊದಲ ದಿನ ನಡೆದ ಪುರುಷರ ಹಾಗೂ ಮಹಿಳೆಯರ ಮುಕ್ತ ವಿಭಾಗ, 18 ವರ್ಷ ವಯೋಮಿತಿಯೊಳಗಿನ ಬಾಲಕರ ಹಾಗೂ 14 ವರ್ಷದೊಳಗಿನ ಬಾಲಕರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಪುರುಷರ ವಿಭಾಗದಲ್ಲಿ 12 ಹೀಟ್‌ಗಳಲ್ಲಿ ಮೊದಲ ಸುತ್ತಿನ ಸ್ಪರ್ಧೆ ಪೂರ್ಣಗೊಂಡರೆ, ಮಹಿಳಾ ವಿಭಾಗ ಕ್ವಾರ್ಟರ್ ಫೈನಲ್ ಹಂತ ತಲುಪಿತು. ಕಿರಿಯರ ವಿಭಾಗದಲ್ಲೂ ತೀವ್ರ ಪೈಪೋಟಿ ನಡೆಯಿತು.

ಪುರುಷರ ಮುಕ್ತ ವಿಭಾಗದಲ್ಲಿ 45 ಸರ್ಫರ್‌ಗಳು ಸ್ಪರ್ಧಿಸಿದ್ದು, ಪ್ರತಿಯೊಂದು ಹೀಟ್‌ನಿಂದ ಮೊದಲ ಎರಡು ಸ್ಥಾನ ಪಡೆದವರು ಶನಿವಾರ ನಡೆವ ಎರಡನೇ ಸುತ್ತಿಗೆ ಅರ್ಹತೆ ಪಡೆಯಲಿದ್ದಾರೆ.

ಕಿಶೋರ್ ಕುಮಾರ್ , ರಮೇಶ್ ಬುಡಿಹಾಳ್ , ತಾಯಿನ್ ಅರುಣ್ , ಸಂಜಯ ಕುಮಾರ್ ಎಸ್ , ಅಜೀಶ್ ಅಲಿ , ಅಖಿಲನ್ ಎಸ್ , ಶಿವರಾಜ್ ಬಾಬು, ಸಂಜಯ್ ಸೆಲ್ವಮಣಿ , ಹರೀಶ್ ಎಂ , ಶ್ರೀಕಾಂತ್ ಡಿ , ರೂಬನ್ ವಿ ಹಾಗೂ ಸೋಮ್ ಸೇಥಿ ಉತ್ತಮ ಪ್ರದರ್ಶನ ನೀಡಿದರು.

ಮಹಿಳೆಯರ ಕ್ವಾರ್ಟರ್ ಫೈನಲ್‌ನಲ್ಲಿ ತಮಿಳುನಾಡಿನ ಕಮಲಿ ಮೂರ್ತಿ 13.83 ಅಂಕಗಳೊಂದಿಗೆ ದಿನದ ಗರಿಷ್ಠ ಸ್ಕೋರ್ ದಾಖಲಿಸಿದರು. ಗೋವಾದ ಶುಗರ್ ಶಾಂತಿ ಬನಾರ್ಸೆ 11 ಅಂಕಗಳೊಂದಿಗೆ ಗಮನ ಸೆಳೆದರು.

18 ವರ್ಷದೊಳಗಿ ಬಾಲಕರ ವಿಭಾಗದಲ್ಲಿ 19 ಸ್ಪರ್ಧಿಗಳು ಆರು ಹೀಟ್‌ಗಳಲ್ಲಿ ಸೆಣಸಿದರು. ಹರೀಶ್ ಪಿ (12.67 ಅಂಕ), ತಾಯಿನ್ ಅರುಣ್ (10.33), ಸೋಮ್ ಸೇಥಿ (9.93), ಪ್ರದೀಪ್ ಪೂಜಾರ್ (9.07), ಪ್ರಹ್ಲಾದ್ ಶ್ರೀರಾಮ್ (8.60), ಶೇಕ್ ದಾವೂದ್ ಎಸ್ (6.93), ಯೋಗೇಶ್ ಎ (6.33), ರಾಜು ಸುರೇಶ್ ಪೂಜಾರ್ (5.63), ಪ್ರವೀಣ್ ಪೂಜಾರ್ (4.40), ಹರೂಸ್ ಮೊಹೈದ್ದೀನ್ (3.63), ಸಂಕು ಕಾರ್ತೇಕ್ (3.07) ಹಾಗೂ ಆಕಾಶ್ ಪೂಜಾರ್ (2.57) ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

14 ವರ್ಷದೊಳಗಿನ ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಹರೀಶ್ ಪಿ (11.33), ಶೇಕ್ ದಾವೂದ್ ಎಸ್ (6.67), ಯೋಗೇಶ್ ಎ (6.50), ಪ್ರಹ್ಲಾದ್ ಶ್ರೀರಾಮ್ (5.43), ಪ್ರಶಾಂತ್ (4.53), ಮುಖೇಶ್ (3.70), ಲಿಖಿತ್ ಸಾಲ್ಯಾನ್ (2.67) ಹಾಗೂ ಇಶಾಂತ್ ಕೆ. ಸತೀಶ್ (2.07) ಸೆಮಿಫೈನಲ್ ಪ್ರವೇಶಿಸಿದರು.

Leave a Reply

Your email address will not be published. Required fields are marked *