ಡಿಜಿ-ಐಜಿಪಿ ಶ್ಲಾಘನಾ ಪದಕಕ್ಕೆ ಪಿಎಸ್ಐ ನಾಗಪ್ಪ ಭಾಜನ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ
<

Spread the love

ಸಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿರಸಿ, ಕಾರವಾರ ಸೇರಿದಂತೆ ವಿವಿಧ ಕಡೆಗಳಲ್ಲಿ ತಮ್ಮದೇ ಕಾರ್ಯ ವೈಶಿಷ್ಟ್ಯದ ಮೂಲಕ ಜನಸ್ನೇಹಿ ಪೊಲೀಸ್ ಅಧಿಕಾರಿ ಆಗಿ ಗುರುತಿಸಿಕೊಂಡಿರುವ ಪಿಎಸ್ ಐ ನಾಗಪ್ಪ ಬಿ ಅವರಿಗೆ 2025-26ನೇ ಸಾಲಿನ ಪ್ರತಿಷ್ಠಿತ ಡಿಜಿ ಮತ್ತು ಐಜಿಪಿ ಶ್ಲಾಘನಾ ಪದಕಕ್ಕೆ ಭಾಜನ ಆಗಿದ್ದಾರೆ.

<

ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ನಾಗಪ್ಪ ಬಿ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕರ ಜತೆಗೆ ತಮ್ಮದೇ ವಿಶಿಷ್ಟ ಕಾರ್ಯ ಶೈಲಿಯ ಮೂಲಕ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅವರ ಕಾರ್ಯಕ್ಷಮತೆಗೆ ಹಾಗೂ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿ ಬಂಗಾರದ ಪದಕಕ್ಕೂ ಅವರು ಭಾಜನ ಆಗಿದ್ದರು.

ಸೇವಾ ಅವಧಿಯಲ್ಲಿ ಹಲವು ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿರುವ ಅವರು, ಅಪರಾಧ ನಿಯಂತ್ರಣ, ಸಾರ್ವಜನಿಕ ದೂರುಗಳ ತ್ವರಿತ ವಿಲೇವಾರಿ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ಕಾರ್ಯಕ್ಷಮತೆ, ಸೇವಾ ಸಾಧನೆ ಹಾಗೂ ಇಲಾಖೆಗೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಪೊಲೀಸ್ ಇಲಾಖೆಯು ಡಿಜಿ ಮತ್ತು ಐಜಿಪಿ ಶ್ಲಾಘನಾ ಪದಕ ನೀಡಿ ಗೌರವಿಸಿದೆ.

ಸದ್ಯ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ಕೆಲಸ ಮಾಡುತ್ತಿದ್ದಾರೆ.

ಮುಖ್ಯಾಂಶಗಳು

* ಪಿಎಸ್ಐ ನಾಗಪ್ಪ ಬಿ ಅವರಿಗೆ ಡಿಜಿ-ಐಜಿಪಿ ಶ್ಲಾಘನಾ ಪದಕ
* ಈ ಹಿಂದೆ ಮುಖ್ಯಮಂತ್ರಿ ಬಂಗಾರದ ಪದಕಕ್ಕೂ ಭಾಜನ
* ಅಪರಾಧ ನಿಯಂತ್ರಣ ಮತ್ತು ಜನಸ್ನೇಹಿ ಪೊಲೀಸ್ ಸೇವೆಗೆ ಗೌರವ
* ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಸುರಿಮಳೆ

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *