ಧರ್ಮಶಾಲಾ: ಐಪಿಎಲ್–2026ರ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಬ್ಬರದ ಬ್ಯಾಟಿಂಗ್, ಸಂಘಟಿತ ಆಟಕ್ಕೆ ಅಕ್ರಮಣಕಾರಿ ಬೌಲಿಂಗ್ ದಾಳಿಗೆ ಗುಜರಾತ್ ಟೈಟಾನ್ಸ್ ತಂಡವು ಹೀನಾಯ ಸೋಲು ಕಂಡಿದೆ. ಆರ್ ಸಿಬಿ ತಂಡ ಸತತ ಎರಡನೇ ಬಾರಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ 255 ರನ್ ಗಳ ಬೃಹತ್ ಮೊತ್ತದ ದಾಖಲಿಸಿದ ಆರ್ ಸಿಬಿ ತಂಡದ ಬ್ಯಾಟಿಂಗ್ ಮುಂದೆ ಗುಜರಾತ ಟೈಟನ್ಸ ಬ್ಯಾಟಿಂಗ್ ಹಾಗೂ ಬೌಲರ್ ಗಳು ತತ್ತರಿಸಿದರು. 19.3 ಓವರ್ ಗಳಲ್ಲಿ 162 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡ ಫೆವೆಲಿಯನ್ ಪರೇಡ್ ನಡೆಸಿದರು.

ಮೊದಲು ಬ್ಯಾಟಿಂಗ್ ಬಂದ ಸಾಯಿ ಸುದರ್ಶನ್ ಹಿಟ್–ವಿಕೆಟ್ ಒಪ್ಪಿಸಿ ಪೆವೆಲಿಯನ್ ನಿಂದ ನಿರ್ಗಮಿಸಿದರೆ, ನಾಯಕ ಶುಭ್ಮನ್ ಗಿಲ್ ಕೂಡ ದೊಡ್ಡ ಮೊತ್ತ ಗಳಿಸಲು ವಿಫಲ ಕಂಡರಲು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾರಕ ದಾಳಿಗೆ ಗುಜರಾತ್ ಅಕ್ಷರಸಃ ಬೆಚ್ಚಿಬಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರ ಸಿಡಿಲಿನ ಬ್ಯಾಟಿಂಗ್ ಕೈಚೆಳಕದ 20 ಓವರ್ ಗೆ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆ ಹಾಕಿತು. ಪಾಟಿದಾರ್ 33 ಎಸೆತಗಳಲ್ಲಿ 93 ರನ್ ಬಾರಿಸಿದರು.
ವಿರಾಟ್ ಕೊಹ್ಲಿ ಅವರು 43 ರನ್ ಹಾಗೂ ಕೃನಾಲ್ ಪಾಂಡ್ಯ 43 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಬಲ ತುಂಬಿದರು. ಆರ್ ಸಿಬಿ ಐಪಿಎಲ್ ಪ್ಲೇ ಆಫ್ ಇತಿಹಾಸದಲ್ಲೇ ಅತ್ಯಧಿಕ ತಂಡದ ಮೊತ್ತ ದಾಖಲಿಸಿದ ಸಾಧನೆ ಮಾಡಿತು.
ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಸತತ ನಾಲ್ಕು ಋತುಗಳಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದರು.


