ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ : ಅಲೆಗಳ ವಯ್ಯಾರ ಅಬ್ಬರದಲ್ಲಿ ಸರ್ಫರ್ ಗಳ ತೀವ್ರ ಹಣಾಹಣಿ

ಕ್ರೀಡೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ
<

Spread the love

ಮಂಗಳೂರು: ಇಲ್ಲಿನ ತಣ್ಣೀರು ಭಾವಿಯಲ್ಲಿ ನಡೆಯುತ್ತಿರುವ 7 ನೇ ಆವೃತ್ತಿಯ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆಯ 2ನೇ ದಿನ ಪುರುಷರ ಓಪನ್ ವಿಭಾಗದ ಸೆಮಿಫೈನಲಿಸ್ಟ್‌ಗಳು ಭರ್ಜರಿ ಪ್ರದರ್ಶನ ನೀಡಿದರು.

<

ಶನಿವಾರ ನಡೆದ ಐದು ವಿಭಾಗಗಳಲ್ಲಿ ಒಟ್ಟು ಆರು ಕ್ವಾರ್ಟರ್‌ಫೈನಲ್ ಹಾಗೂ ಆರು ಸೆಮಿಫೈನಲ್ ಪಂದ್ಯಗಳು ನಡೆದವು. ಪುರುಷರ ಮುಕ್ತ ವಿಭಾಗದ ಕ್ವಾರ್ಟರ್‌ ಫೈನಲ್‌ ನಲ್ಲಿ ಕೇರಳದ ರಮೇಶ್ ಬೂದಿಹಾಳ್ 14.83 ಅಂಕ ಗಳಿಸಿ ಅಗ್ರಸ್ಥಾನ ದಾಖಲಿಸಿದರು. ಶ್ರೀಕಾಂತ್ ಡಿ 13 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಕಿಶೋರ್ ಕುಮಾರ್ (11.80), ಅಜೀಶ್ ಅಲಿ (9.93), ಸಂಜಯ್ ಸೆಲ್ವಮಣಿ (9.57) ಹಾಗೂ ಶಿವರಾಜ್ ಬಾಬು (8.76) ಸೆಮಿಫೈನಲ್‌ಗೆ ಪ್ರವೇಶ ಪಡೆದರು.

2ನೇ ಸುತ್ತಿನ ಸ್ಪರ್ಧೆಗಳಲ್ಲಿ 24 ಸರ್ಫರ್‌ಗಳು ಆರು ಹೀಟ್‌ಗಳಲ್ಲಿ ಸೆಣಸಿದರು. ಕಿಶೋರ್ ಕುಮಾರ್ 14.17 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಅಜೀಶ್ ಅಲಿ (13.33) ಹಾಗೂ ರಮೇಶ್ ಬೂದಿಹಾಳ್ 13.00 ನಂತರದ ಸ್ಥಾನಗಳನ್ನು ಪಡೆದರು. ಸಂಜಯ್ ಸೆಲ್ವಮಣಿ, ಶ್ರೀಕಾಂತ್ ಡಿ, ಶಿವರಾಜ್ ಬಾಬು, ತಾಯಿನ್ ಅರುಣ್, ನವೀನ್‌ಕುಮಾರ್ ಆರ್., ಹರೀಶ್ ಎಂ., ಸೋಮ್ ಸೇಥಿ, ರೂಬನ್ ವಿ. ಹಾಗೂ ಸಂಜೈಕುಮಾರ್ ಎಸ್. ಕೂಡ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದರು.

ಕಿರಿಯರ ವಿಭಾಗದಲ್ಲಿ ಪೈಪೋಟಿ

18 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ಗಳಲ್ಲಿ ಹರೀಶ್ ಪಿ. (13.60), ತಾಯಿನ್ ಅರುಣ್ (12.67), ಸೋಮ್ ಸೇಥಿ (12.00) ಹಾಗೂ ಯೋಗೇಶ್ ಎ. (11.34) ಸೆಮಿಫೈನಲ್‌ಗೆ ಅರ್ಹತೆ ಪಡೆದರು. ಪ್ರಹ್ಲಾದ್ ಶ್ರೀರಾಮ್ (9.40) ಹಾಗೂ ಪ್ರದೀಪ್ ಪುಜಾರ್ (6.56) ಕೂಡ ಮುಂದಿನ ಹಂತ ಪ್ರವೇಶಿಸಿದರು.

18 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಕಮಲಿ ಮೂರ್ತಿ 12.44 ಅಂಕಗಳನ್ನು ಗಳಿಸಿ ಗಮನ ಸೆಳೆದರು. ಆದ್ಯಾ ಸಿಂಗ್ (7.50), ಸಾನ್ವಿ ಹೆಗ್ಡೆ (5.30) ಹಾಗೂ ಧಮಯಂತಿ ಶ್ರೀರಾಮ್ (4.27) ಕೂಡ ಫೈನಲ್‌ಗೆ ಪ್ರವೇಶ ಪಡೆದರು.

ಗ್ರೋಮ್ಸ್ ವಿಭಾಗದಲ್ಲಿ ಕಿರಿಯರ ಪ್ರತಿಭೆ ಅನಾವರಣ

14 ವರ್ಷ ವಯೋಮಿತಿಯೊಳಗಿನ ಬಾಲಕರ ‘ಗ್ರೋಮ್ಸ್’ ವಿಭಾಗದಲ್ಲಿ ಹರೀಶ್ ಪಿ. 14.40 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಶೇಖ್ ದಾವೂದ್ ಎಸ್. (13.00), ಯೋಗೇಶ್ ಎ. (9.40) ಹಾಗೂ ಪ್ರಹ್ಲಾದ್ ಶ್ರೀರಾಮ್ (7.27) ಫೈನಲ್‌ಗೆ ಪ್ರವೇಶಿಸಿದರು.

ಬಾಲಕಿಯರ ವಿಭಾಗದಲ್ಲಿ ಧಮಯಂತಿ ಶ್ರೀರಾಮ್ (9.50) ಹಾಗೂ ಸನ್ವಿತಾ ಕುಂದರ್ (5.10) ಮೊದಲ ಎರಡು ಸ್ಥಾನಗಳನ್ನು ಪಡೆದರೆ, ಅರಬೋಲು ನೇತ್ರಾ (1.00) ಮತ್ತು ಗೌರಿ ಶ್ರೀಮುಷ್ಣಂ (0.50) ಕೂಡ ಫೈನಲ್‌ಗೆ ಅರ್ಹತೆ ಪಡೆದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *