ಬ್ಯಾಂಕ್ ಆಫ್ ಬರೋಡಾ ಹಣಕಾಸು ಸಾಧನೆ: ಜಾಗತಿಕ ವ್ಯವಹಾರ 30.50 ಲಕ್ಷ ಕೋಟಿಗೆ ಏರಿಕೆ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮುಂಬೈ: ಬ್ಯಾಂಕ್ ಆಫ್ ಬರೋಡಾ 2026ರ ಜೂನ್ 30ಕ್ಕೆ ಅಂತ್ಯಗೊಂಡ ತ್ರೈಮಾಸಿಕದ ಹಣಕಾಸು ಫಲಿತಾಂಶ ಪ್ರಕಟಿಸಿದ್ದು, ಬ್ಯಾಂಕ್‌ನ ಜಾಗತಿಕ ವ್ಯವಹಾರವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ15.4ರಷ್ಟು ಏರಿಕೆಯಾಗಿ 30,50,457 ಕೋಟಿಗೆ ತಲುಪಿದೆ.

<

ಬ್ಯಾಂಕ್‌ನ ಜಾಗತಿಕ ಸಾಲ ವಿತರಣೆ ಶೇ17.4 ಹಾಗೂ ದೇಶೀಯ ಸಾಲ ವಿತರಣೆ ಶೇ16.1ರಷ್ಟು ಹೆಚ್ಚಳ ಕಂಡಿದೆ. ವಾಹನ ಸಾಲ ಶೇ 25.3, ಅಡಮಾನ ಸಾಲ ಶೇ 27.4, ಗೃಹ ಸಾಲ ಶೇ14.7 ಮತ್ತು ಶಿಕ್ಷಣ ಸಾಲ ಶೇ10.8ರಷ್ಟು ಬೆಳವಣಿಗೆ ದಾಖಲಿಸಿದೆ. ಚಿಲ್ಲರೆ, ಕೃಷಿ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಿದ ಸಾಲಗಳು ಶೇ16.5ರಷ್ಟು ಏರಿಕೆಯಾಗಿದ್ದು, ಒಟ್ಟು ಸಾಲಗಳಲ್ಲಿ ಈ ವಿಭಾಗದ ಪಾಲು ಶೇ 62.9ರಷ್ಟಿದೆ.

ಜಾಗತಿಕ ಠೇವಣಿಗಳು ಶೇ.13.8 ಹಾಗೂ ದೇಶೀಯ ಠೇವಣಿಗಳು ಶೇ.14.7ರಷ್ಟು ಹೆಚ್ಚಳ ಕಂಡಿವೆ. ದೇಶೀಯ ಚಾಲ್ತಿ ಮತ್ತು ಉಳಿತಾಯ ಠೇವಣಿಗಳು ಶೇ.10 ಹಾಗೂ ಅಂತರರಾಷ್ಟ್ರೀಯ ಠೇವಣಿಗಳು ಶೇ.8.9ರಷ್ಟು ಏರಿಕೆಯಾಗಿದೆ.

ತ್ರೈಮಾಸಿಕದ ನಿವ್ವಳ ಬಡ್ಡಿ ಆದಾಯ ಶೇ.9.5ರಷ್ಟು ಏರಿಕೆಯಾಗಿ 12,524 ಕೋಟಿಗೆ ತಲುಪಿದೆ. ಕಾರ್ಯಾಚರಣಾ ವೆಚ್ಚ ಶೇ.0.1ರಷ್ಟು ಇಳಿಕೆಯಾಗಿದ್ದು, ಕಾರ್ಯಾಚರಣಾ ಲಾಭ 8,127 ಕೋಟಿಯಾಗಿದೆ. ವಿಶೇಷ ವೆಚ್ಚವನ್ನು ಒಳಗೊಂಡ ಬಳಿಕ ನಿವ್ವಳ ಲಾಭ 1,278 ಕೋಟಿಯಾಗಿದ್ದು, ಅದನ್ನು ಹೊರತುಪಡಿಸಿದರೆ 5,528 ಕೋಟಿ ಆಗುತ್ತಿತ್ತು.

ಬ್ಯಾಂಕ್‌ನ ಆಸ್ತಿ ಗುಣಮಟ್ಟವೂ ಮತ್ತಷ್ಟು ಸುಧಾರಿಸಿದ್ದು, ಒಟ್ಟು ಸುಸ್ತಿ ಸಾಲದ ಪ್ರಮಾಣ ಶೇ1.99ಕ್ಕೆ ಹಾಗೂ ನಿವ್ವಳ ಸುಸ್ತಿ ಸಾಲದ ಪ್ರಮಾಣ ಶೇ 0.50ಕ್ಕೆ ಇಳಿದಿದೆ. ಬಂಡವಾಳ ಸಮರ್ಪಕತೆ ಪ್ರಮಾಣ ಶೇ16.30ರಷ್ಟಿದ್ದು, ಬ್ಯಾಂಕ್‌ನ ಹಣಕಾಸು ಸ್ಥಿತಿ ಬಲಿಷ್ಠವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *