ಬೆಂಗಳೂರು: ಇಂಧನ ಬಿಕ್ಕಟ್ಟಿನ ನಡುವೆ ದೇಶದಲ್ಲಿ ಮತ್ತೆ ಜನರಿಗೆ ಬೆಲೆ ಏರಿಕೆ ಬಿಸಿ ಮುಟ್ಟಲಿದೆ. 19 ಕೆಜಿಯ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ 42 ರೂಪಾಯಿಗಳು ಹೆಚ್ಚಳ ಆಗಿದೆ.
ಪರಿಷ್ಕೃತ ದರ ಜೂನ್ 1 ರಿಂದಲೇ ಅಸ್ತಿತ್ವಕ್ಕೆ ಬಂದಿದೆ. ಈ ಪರಿಷ್ಕರಣೆಯೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ರಿಟೇಲ್ ದರ 3,113.50 ರೂಪಾಯಿಗೆ ಏರಿಕೆ ಆಗಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಉದ್ಯಮಗಳಿಗೆ ಈ ದರ ಏರಿಕೆ ಇನ್ನಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಲಿದೆ.
ಬೆಂಗಳೂರಿನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ 46 ರೂಪಾಯಿ ಏರಿಕೆ ಆಗಿದೆ. 3,198 ರೂಪಾಯಿಗೆ ತಲುಪಿದೆ. ಕಳೆದ ತಿಂಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರ 991 ರೂಪಾಯಿ ಏರಿಕೆ ಆಗಿ 3,152 ರೂಪಾಯಿ ಆಗಿತ್ತು. ಬೆಂಗಳೂರಿನಲ್ಲಿ ಗೃಹ ಬಳಕೆ ಸಿಲಿಂಡರ್ ಬೆಲೆ 915. 50 ರೂಪಾಯಿ ಇದೆ. ಮೇ 1 ರಂದು ಸಹ ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಅತ್ಯಂತ ಹೆಚ್ಚು, ಅಂದರೆ ಬರೋಬ್ಬರಿ 993 ರೂ.ನಷ್ಟು ದರ ಹೆಚ್ಚಳ ಮಾಡಿದ್ದವು. ಆ ನಂತರ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 3,152 ರೂ.ಗೆ ತಲುಪಿತ್ತು.
ಇದರ ಪರಿಣಾಮ ಹೊಟೇಲ್ ಗಳಲ್ಲಿ ತಿಂಡಿ, ಉಪಹಾರ, ಊಟದ ದರದಲ್ಲಿ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಗ್ಯಾಸ್ ದರ ಸೇರಿದಂತೆ ಎಲ್ಲ ಸಾಮಗ್ರಿಗಳ ಬೆಲೆಯ ಹೆಚ್ಚಳ ಆಗಿರುವುದರಿಂದ ಹೊಟೇಲ್ ಮಾಲೀಕರು ಸಂಕಷ್ಟದಲ್ಲಿ ಇರುವುದರಿಂದ ಮೆನುವಿನ ದರ ಹೆಚ್ಚಳಕ್ಕೆ ಚಿಂತನೆ ಸಡೆಸಿದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
What do you feel about this post?
Like
Love
Happy
Haha
Sad
