ಸುರತ್ಕಲ್‌: 7 ರಂದು ರಂಗ ಸಂಗಮ: ಕಟ್ಟೆ ಫ್ರೆಂಡ್ಸ್ ತುಳು ನಾಟಕ ಪ್ರದರ್ಶನ

ಮಂಗಳೂರು ಜಿಲ್ಲಾ ಸುದ್ದಿ ಪುತ್ತೂರು ಮಹಾನಗರ

Spread the love

ಸುರತ್ಕಲ್: ಪೆರ್ಮೆದ ಕಲಾವಿದೆರ್ ಚೇಳ್ಯಾರು ವತಿಯಿಂದ ದ್ವಿತೀಯ ವರ್ಷದ ‘ರಂಗ ಸಂಗಮ-2026’ ಕಾರ್ಯಕ್ರಮ ನವೆಂಬರ್ 7ರಂದು ಸಂಜೆ 6.30ಕ್ಕೆ ಸುರತ್ಕಲ್ ಬಂಟರ ಭವನದ ಆವರಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ‘ಕಟ್ಟೆ ಫ್ರೆಂಡ್ಸ್’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಪೆರ್ಮುದೆ ಶ್ರೀ ಶಾರದ ಯಕ್ಷಗಾನ ಮಂಡಳಿಯ ಅಧ್ಯಕ್ಷ ಉಲ್ಲಾಸ್ ಆರ್. ಶೆಟ್ಟಿ ಪೆರ್ಮುದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಚೇಳ್ಯಾರಿನ ಪುರೋಹಿತ ಎನ್. ರಾಘವೇಂದ್ರ ಕಾರಂತ್ ದೀಪ ಪ್ರಜ್ವಲನೆ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜನನಿ ಕನ್‌ಸ್ಟ್ರಕ್ಷನ್‌ನ ಸುಧಾಕರ್ ಎಸ್. ಪೂಂಜ, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ ಅಮೀನ್, ಸುರತ್ಕಲ್ ಬಂಟರ ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಉದ್ಯಮಿ ಸತೀಶ್ ಮುಂಚೂರು, ಅಶ್ವಿನ್ ಶೇಖ ಕುಡುಂಬೂರು, ದಕ್ಷಿಣ ಕನ್ನಡ ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ವಸಂತ ಸುವರ್ಣ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿಲೀಪ್ ಮುಂಚೂರು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಖಂಡಿಗೆ, ವಕೀಲೆ ಸರಿತಾ ರವೀಂದ್ರ ಶೆಟ್ಟಿ, ವಿಷಯ ಸೃಷ್ಟಿಕರ್ತ ಶರಣ್ ಚಿಲಿಂಬಿ ಮತ್ತಿತರರು ಭಾಗವಹಿಸಲಿದ್ದಾರೆ.

ಸಂಜೆ 7.30ಕ್ಕೆ ಪೆರ್ಮೆದ ಕಲಾವಿದೆರ್ ಚೇಳ್ಯಾರು ತಂಡದ ಕಲಾವಿದರು ರಾಮಚಂದ್ರ ಶೆಟ್ಟಿ ತಡಂಬೈಲ್ ರಚನೆಯ ‘ಕಟ್ಟೆ ಫ್ರೆಂಡ್ಸ್’ ತುಳು ನಾಟಕವನ್ನು ಪ್ರಸ್ತುತಪಡಿಸಲಿದ್ದಾರೆ. ವೈಶಾಕ್ ಕುಲಾಲ್ ಸೂರಿಂಜೆ ನಿರ್ದೇಶನ ಮಾಡಲಿದ್ದಾರೆ. ಚಂದ್ರಕಲಾ ಸದಾನಂದ ರೈ ಸಾರಥ್ಯ ವಹಿಸಿದ್ದು, ಸುಕೇಶ್ ಶೆಟ್ಟಿ ಖಂಡಿಗೆ ಸಮಗ್ರ ನಿರ್ವಹಣೆ ಮಾಡಲಿದ್ದಾರೆ. ದೀಪಕ್ ಎಸ್. ಕೋಟ್ಯಾನ್ ಸಾಹಿತ್ಯ ಹಾಗೂ ಕಾರ್ತಿಕ್ ಕುಲಾಲ್ ಕುಳಾಯಿ ಸಹ ನಿರ್ದೇಶನದ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ‘ರಂಗ ಸಂಗಮ-2026’ರ ಕಲಾಗೌರವ ಪುರಸ್ಕಾರವನ್ನು ಚಲನಚಿತ್ರ ನಿರ್ದೇಶಕ, ಸಾಹಿತಿ ಹಾಗೂ ನಾಟಕಕಾರ ಕೀರ್ತನ್ ಭಂಡಾರಿ ಕುಳಾಯಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಂತರರಾಷ್ಟ್ರೀಯ ಚಿತ್ರಕಲಾವಿದ ದೇವಿಕಿರಣ್ ಗಣೇಶಪುರ ಅವರಿಗೆ ಪ್ರದಾನ ಮಾಡಲಾಗುವುದು.

 

Leave a Reply

Your email address will not be published. Required fields are marked *