ಸಂತ್ರಸ್ತೆ ಕಳುಹಿಸಿದ್ದ ಇ-ಮೇಲ್ ಎಲ್ಲಿ ಹೋಯಿತು? ಸಚಿವ್ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ

ಮಹಾನಗರ ರಾಜಕೀಯ ರಾಜ್ಯ

Spread the love

ಬೆಂಗಳೂರು: ಸ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ಕಳುಹಿಸಿದ್ದ ಇ-ಮೇಲ್ ಏನಾಯಿತು? ಅದನ್ನು ಸಂರಕ್ಷಿಸಲಾಗಿದೆಯೇ ಅಥವಾ ಅಳಿಸಿ ಹಾಕಲಾಗಿದೆಯೇ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.

ನಗರದ ಜೆಡಿಎಸ್ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೃಪಾ ಆಳ್ವ ಅವರು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಂತ್ರಸ್ತೆ ಇ-ಮೇಲ್ ಕಳುಹಿಸಿದ್ದರು. ಆ ಇ-ಮೇಲ್ ಈಗ ಎಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಸಂತ್ರಸ್ತೆ ಕಳುಹಿಸಿದ್ದ ಇ-ಮೇಲ್‌ಗೂ ತನಿಖೆಗೂ ಏನು ಸಂಬಂಧ ಎಂದು ಪ್ರಶ್ನಿಸುತ್ತಿರುವುದು ಸರಿಯಲ್ಲ. ಈ ಹಿಂದೆ ಪ್ರಿಯಾಂಕ್ ಖರ್ಗೆ ಅವರ ಬಳಿ ಬೇರೆ ಖಾತೆ ಇತ್ತು. ಈಗ ಅವರಿಗೆ ಗೃಹ ಖಾತೆ ನೀಡಲಾಗಿದೆ. ಈ ಹಿಂದೆ ಬಂದಿದ್ದ ಇ-ಮೇಲ್ ಪರಿಶೀಲಿಸಿದ್ದ ಅಧಿಕಾರಿಗಳನ್ನೇ ತನಿಖೆಗೆ ಒಳಪಡಿಸಲಿ. ಅದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದಾದರೆ, ಇನ್ನು ಯಾರ ವ್ಯಾಪ್ತಿಗೆ ಬರುತ್ತದೆ ಎಂದು ಪ್ರಶ್ನಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಕಳುಹಿಸಿದ್ದ ಇ-ಮೇಲ್‌ನ ಮಾಹಿತಿ ಮತ್ತು ಅದರ ಮುಂದಿನ ಕ್ರಮಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

Leave a Reply

Your email address will not be published. Required fields are marked *