ಮಂಗಳೂರು: ಶಾಸಕ ಯಶ್ ಪಾಲ್ ಸುವರ್ಣರದ್ದು ನಾಲಾಯಕ್ ಹೇಳಿಕೆ. ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿಲ್ಲ, ಯಾಕೆಂದರೆ ಅವರು ರಾಹುಲ್ ಗಾಂಧಿ ಕಾಲಿನ ಕಿರು ಬೆರಳಿಗೂ ಸಮವಲ್ಲ. ಅವರೆಲ್ಲಿ, ಇವರೆಲ್ಲಿ? ಇಂತಹ ಹೇಳಿಕೆಯಿಂದ ಏನು ಪ್ರಯೋಜನ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಕರಾವಳಿಗೆ ಎಲ್ಲ ವಿಚಾರದಲ್ಲೂ ಘನತೆ, ಗೌರವ ಇದೆ. ಎಲ್ಲ ಪಕ್ಷದ ಶಾಸಕರು ಕರಾವಳಿ ಗೌರವವನ್ನು ಉಳಿಸಿಕೊಂಡು ಬಂದಿದ್ದಾರೆ. ಯಶ್ ಪಾಲ್ ಅವರ ಹೇಳಿಕೆ ಕಪ್ಪು ಚುಕ್ಕೆ ಆಗಿದ್ದು ಅವರದ್ದೇ ಮನೆಯವರಾಗಲೀ, ಮಕ್ಕಳ ಸಹಿತ ಯಾರೂ ಒಪ್ಪಲು ಸಾಧ್ಯವೇ ಇಲ್ಲ. ಧ್ವಂಸ ಎನ್ನುವ ಮಾತು ತಾಲಿಬಾನ್ ನಿಂದ ಬರುವುದು. ಇವರ ಡಿಎನ್ ಎ ಅಲ್ಲಿಯದ್ದೇ ಇರಬೇಕು, ಈ ಹಿನ್ನೆಲೆಯಲ್ಲಿ ಡಿಎನ್ ಎ ಪರೀಕ್ಷಿಸಬೇಕು ಎಂದು ಖಾದರ್ ಟೀಕಿಸಿದರು.
ಈ ದೇಶದಲ್ಲಿ ಗಾಂಧಿ ಕುಟುಂಬವನ್ನು ನಾಶ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ರಕ್ತ ಬಿದ್ದಿದ್ದರಿಂದ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಶಾಂತಿ ನೆಲೆಸಿದೆ. ಅವರ ತ್ಯಾಗವನ್ನು ಯಾರೂ ಮರೆಯಲಾಗದು. ಹೀಗಿರುವಾಗ ಯಶ್ಪಾಲ್ ಅವರ ಹೇಳಿಕೆಯಿಂದ ಏನು ಪ್ರಯೋಜನ. ಅವರು ತಮ್ಮ ಅಸ್ತಿತ್ವ ಉಳಿಸಲು ಏನೇನೋ ಮಾತಾಡ್ತಾರೆ ಎಂದರು.
What do you feel about this post?
Like
Love
Happy
Haha
Sad





