ಕಸ್ತೂರಿರಂಗನ್ ವರದಿ ಜಾರಿಗೆ ಮುನ್ನ ಜನರ ಅಹವಾಲು ಆಲಿಸಿ: ಅಮಿತ್ ಶಾಗೆ ಪೇಜಾವರ ಶ್ರೀಗಳ ಮನವಿ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಶಿರಸಿ

Spread the love

ಉಡುಪಿ: ಕಸ್ತೂರಿರಂಗನ್ ವರದಿ ಜಾರಿಗೂ ಮುನ್ನ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಜನರ ಅಹವಾಲುಗಳನ್ನು ಆಲಿಸುವಂತೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.

<

ನವದೆಹಲಿಯ ವಸಂತ್ ಕುಂಜ್‌ನಲ್ಲಿರುವ ಪೇಜಾವರ ಶಾಖಾಮಠ ವೇದವ್ಯಾಸ ಗುರುಕುಲದ ಶ್ರೀಕೃಷ್ಣಧಾಮದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಸೋಮವಾರ ಅಮಿತ್ ಶಾ ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ವೇಳೆ ಕಸ್ತೂರಿರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಪಶ್ಚಿಮ ಘಟ್ಟ ಪ್ರದೇಶದ ಜನರಲ್ಲಿ ಮೂಡಿರುವ ಆತಂಕ, ಭಯ ಹಾಗೂ ಗೊಂದಲಗಳನ್ನು ನಿವಾರಿಸಲು ಆದ್ಯತೆ ನೀಡಬೇಕು ಎಂದು ಶ್ರೀಪಾದರು ಶಾಗೆ ಲಿಖಿತ ಮನವಿ ಸಲ್ಲಿಸಿದರು. ಈ ಕುರಿತು ವಿಚಾರ ಮಾಡುವುದಾಗಿ ಅಮಿತ್ ಶಾ ಭರವಸೆ ನೀಡಿದರು.

ಶ್ರೀಕೃಷ್ಣಧಾಮದಲ್ಲಿ ಪೂಜೆ

ಶ್ರೀಕೃಷ್ಣಧಾಮಕ್ಕೆ ಆಗಮಿಸಿದ ಅಮಿತ್ ಶಾ ಅವರನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀಕೃಷ್ಣದೇವರ ದರ್ಶನ ಪಡೆದ ಅವರು ಪಂಚದೀಪಗಳನ್ನು ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ಸಂಸ್ಥಾನದ ಪಟ್ಟದೇವರ ದರ್ಶನ ಪಡೆದ ಅವರು, ವಿಶ್ವೇಶತೀರ್ಥ ಸಂಸ್ಮರಣ ಧ್ಯಾನ ಮಂದಿರಕ್ಕೆ ತೆರಳಿ ಪಾದುಕಾ ದರ್ಶನ ಮಾಡಿದರು.

ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಫಲಪುಷ್ಪ ಸಮರ್ಪಿಸಿದ ಅಮಿತ್ ಶಾ, ಕೆಲಹೊತ್ತು ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು. ಶ್ರೀಗಳು ಸಚಿವರನ್ನು ಗೌರವಿಸಿದರು.

ಗಣ್ಯರು ಭಾಗಿ

ಕಾರ್ಯಕ್ರಮದಲ್ಲಿ ಸಂಸದರಾದ ಬಾನ್ಸುರಿ ಸ್ವರಾಜ್ ಮತ್ತು ರಾಮವೀರ್ ಸಿಂಗ್ ಬಿದೂರಿ, ಶಾಸಕರಾದ ಅನಿಲ್ ಶರ್ಮಾ ಹಾಗೂ ಕೈಲಾಶ್ ಗೆಹ್ಲೋಟ್, ಡಿಡಿಎ ಸದಸ್ಯ ರಾಜೀವ್ ಬಬ್ಬರ್, ರಾಕೇಶ್ ಗೌರ್, ವಿದ್ವಾನ್ ಎನ್. ವಿಠಲ ಭಟ್, ಟಿ.ಪಿ. ಅನಂತ ಹಾಗೂ ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ಭಟ್ ಮತ್ತು ಅಶ್ವಿನ್ ಕುಮಾರ್ ಇದ್ದರು.

ಡಾ. ವರಖೇಡಿ ಶ್ರೀನಿವಾಸ ಆಚಾರ್ಯ, ಡಾ. ವಿಠೋಬಾಚಾರ್ಯ ಹಾಗೂ ವಾಸುದೇವ ಭಟ್ ಪೆರಂಪಳ್ಳಿ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh

Leave a Reply

Your email address will not be published. Required fields are marked *