ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 21 ಮಂದಿ ಆಯ್ಕೆ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ಶಿಕ್ಷಣ

Spread the love

ಮಂಗಳೂರು: ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ವಿವಿಧ ಶಾಲೆಗಳ 21 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

<

ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗಗಳಲ್ಲಿ ತಲಾ ಏಳು ಶಿಕ್ಷಕರಂತೆ ಒಟ್ಟು 21 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆ. 5ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ

ಬಂಟ್ವಾಳ ತಾಲ್ಲೂಕಿನ ಸೇರ್ಕಳ ಶಾಲೆಯ ಸಹಶಿಕ್ಷಕ ದಾಮೋದರ, ಬೆಳ್ತಂಗಡಿ ತಾಲ್ಲೂಕಿನ ಮುಂಡ್ರುಪಾಡಿ ಶಾಲೆಯ ಸಹಶಿಕ್ಷಕಿ ಚಿತ್ರಪ್ರಭಾ, ಮಂಗಳೂರು ಉತ್ತರ ವಲಯದ ಸ್ಯಾಂಡ್‌ಪೀಟ್ ಶಾಲೆಯ ಸಹಶಿಕ್ಷಕಿ ಉಮಾಲಕ್ಷ್ಮಿ, ಮಂಗಳೂರು ದಕ್ಷಿಣ ವಲಯದ ಬದ್ರಿಯಾನಗರ ಶಾಲೆಯ ಸಹಶಿಕ್ಷಕಿ ಪ್ಲೇವಿ ಜೆಸಿಂತ ಮಿರಾಂದ, ಮೂಡುಬಿದಿರೆ ತಾಲ್ಲೂಕಿನ ಪೆಂಜಾರು ಶಾಲೆಯ ಸಹಶಿಕ್ಷಕಿ ಶ್ರೀವಾಣಿ, ಪುತ್ತೂರು ತಾಲ್ಲೂಕಿನ ಹೊಸ್ತೋಟ ಶಾಲೆಯ ಸಹಶಿಕ್ಷಕಿ ಮಾಲತಿ ಹಾಗೂ ಸುಳ್ಯ ತಾಲ್ಲೂಕಿನ ಪಾಂಡಿಗದ್ದೆ ಶಾಲೆಯ ಸಹಶಿಕ್ಷಕ ಯಶೋಧರ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ

ಬಂಟ್ವಾಳ ತಾಲ್ಲೂಕಿನ ವಿಟ್ಲ ಪಿಎಂಶ್ರೀ ಶಾಲೆಯ ಸಹಶಿಕ್ಷಕ ವಿದ್ಯಾಶಂಕರ್ ಡಿ., ಬೆಳ್ತಂಗಡಿ ತಾಲ್ಲೂಕಿನ ಅಂಡೆತಡ್ಕ ಶಾಲೆಯ ಮುಖ್ಯಶಿಕ್ಷಕ ಕೃಷ್ಣಪ್ಪ ಪೂಜಾರಿ, ಮಂಗಳೂರು ಉತ್ತರ ವಲಯದ ಕಾಟಿಪಳ್ಳ ಶಾಲೆಯ ಸಹಶಿಕ್ಷಕಿ ಇಂದಿರಾ ಎಸ್., ಮಂಗಳೂರು ದಕ್ಷಿಣ ವಲಯದ ಉಚ್ಚಿಲಗುಡ್ಡೆ ಶಾಲೆಯ ಸಹಶಿಕ್ಷಕ ಹರೀಶ್ ಕುಮಾರ್ ಬಿ.ಎಂ. ಹಾಗೂ ಪುತ್ತೂರು ತಾಲ್ಲೂಕಿನ ಸಾಮೆತ್ತಡ್ಕ ಶಾಲೆಯ ಸಹಶಿಕ್ಷಕಿ ಭುವನೇಶ್ವರಿ ಕೆ. ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರೌಢಶಾಲಾ ವಿಭಾಗ

ಬಂಟ್ವಾಳ ತಾಲ್ಲೂಕಿನ ಮಂಚಿ–ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕಿ ವಿಜಯಲಕ್ಷ್ಮಿ, ಬೆಳ್ತಂಗಡಿ ತಾಲ್ಲೂಕಿನ ವೇಣೂರು ಪ್ರೌಢಶಾಲೆಯ ಸಹಶಿಕ್ಷಕ ರವೀಂದ್ರ ಕೆ., ಮಂಗಳೂರು ಉತ್ತರ ವಲಯದ ಸಂತ ಅಲೋಶಿಯಸ್ ಪ್ರೌಢಶಾಲಾ ವಿಭಾಗದ ಸಹಶಿಕ್ಷಕ ಪ್ರವೀಣ್ ಕುಟಿನ್ಹೋ, ಮಂಗಳೂರು ದಕ್ಷಿಣ ವಲಯದ ಮುಚ್ಚೂರು ಪ್ರೌಢಶಾಲೆಯ ದೈಹಿಕ ಶಿಕ್ಷಕ ಕಿಶೋರ್, ಮೂಡುಬಿದಿರೆ ತಾಲ್ಲೂಕಿನ ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಜಾನ್ ರೊನಾಲ್ಡ್ ಡಿಸೋಜ, ಪುತ್ತೂರು ತಾಲ್ಲೂಕಿನ ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯ ಸಹಶಿಕ್ಷಕ ಥಾಮಸ್ ಎಂ.ಐ. ಹಾಗೂ ಸುಳ್ಯ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಕಿಶೋರ್ ಕುಮಾರ್ ಅವರು ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *