ಕರ್ನಾಟಕ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆ ಕೀ ಉತ್ತರ ಬಿಡುಗಡೆ: ಮಂಗಳೂರು ಐಎಎಸ್ ಸಂಸ್ಥೆಯ ಸಂತೋಷ್ ಕುಮಾರ್

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ಕರ್ನಾಟಕ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಯ ಲಿಖಿತ ಪರೀಕ್ಷೆ ಭಾನುವಾರ ನಡೆದ ಬೆನ್ನಲ್ಲೇ, ನಗರದ ಮಂಗಳೂರು ಐಎಎಸ್ ಸಂಸ್ಥೆಯು ಪರೀಕ್ಷೆಯ ಕೀ ಉತ್ತರಗಳನ್ನು ಬಿಡುಗಡೆ ಮಾಡಿದೆ. ಇದರಿಂದ ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪರಿಶೀಲಿಸಿಕೊಂಡು ಸಂಭವನೀಯ ಅಂಕಗಳನ್ನು ಅಂದಾಜಿಸಿಕೊಳ್ಳಲು ಅವಕಾಶ ಸಿಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

<

ಪರೀಕ್ಷೆ ಮುಗಿದ ಕೂಡಲೇ ಸಂಸ್ಥೆಯ ವಿಷಯ ತಜ್ಞರು ಪ್ರಶ್ನೆ ಪತ್ರಿಕೆಯನ್ನು ವಿಶ್ಲೇಷಿಸಿ ಉತ್ತರ ಕೀ ಸಿದ್ಧಪಡಿಸಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪರೀಕ್ಷಾರ್ಥಿಗಳು ಮಂಗಳೂರು ಐಎಎಸ್ ಕ್ಯಾಂಪಸ್‌ಗೆ ಭೇಟಿ ನೀಡಿ ಯಾವುದೇ ಶುಲ್ಕವಿಲ್ಲದೆ ಉತ್ತರಗಳನ್ನು ಪರಿಶೀಲಿಸಬಹುದಾಗಿದೆ. ಅಲ್ಲದೆ, ಸಂಸ್ಥೆಯ ಅಧ್ಯಾಪಕರು ಪ್ರಶ್ನೆಪತ್ರಿಕೆಗೆ ಸಂಬಂಧಿಸಿದ ಅಭ್ಯರ್ಥಿಗಳ ಸಂದೇಹಗಳಿಗೆ ಸ್ಪಷ್ಟ ಉತ್ತರ ನೀಡಲಿದ್ದಾರೆ.

ಮಂಗಳೂರು ಐಎಎಸ್ ಸಂಸ್ಥಾಪಕ ಸಂತೋಷ್ ಕುಮಾರ್ ಎಸ್. ಮಾತನಾಡಿ, ಪರೀಕ್ಷಾರ್ಥಿಗಳಿಗೆ ತ್ವರಿತ ಶೈಕ್ಷಣಿಕ ನೆರವು ನೀಡುವ ಉದ್ದೇಶದಿಂದ ಪರೀಕ್ಷೆ ಮುಗಿದ ಕೂಡಲೇ ಉತ್ತರ ಕೀ ಬಿಡುಗಡೆ ಮಾಡಲಾಗಿದೆ. ಇದರಿಂದ ಅಭ್ಯರ್ಥಿಗಳು ತಮ್ಮ ಸಾಧನೆಯನ್ನು ತಕ್ಷಣವೇ ಮೌಲ್ಯಮಾಪನ ಮಾಡಿಕೊಂಡು ನೇಮಕಾತಿಯ ಮುಂದಿನ ಹಂತಗಳಿಗೆ ಆತ್ಮವಿಶ್ವಾಸದಿಂದ ಸಿದ್ಧರಾಗಲು ಅನುಕೂಲವಾಗಲಿದೆ ಎಂದು ಹೇಳಿದರು.

ನಾಗರಿಕ ಸೇವೆಗಳು, ಪೊಲೀಸ್, ಬ್ಯಾಂಕಿಂಗ್ ಸೇರಿದಂತೆ ವಿವಿಧ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಮಂಗಳೂರು ಐಎಎಸ್ ಸಂಸ್ಥೆಯು ಗುಣಮಟ್ಟದ ಬೋಧನೆ, ಪರಿಣತ ಬೋಧಕ ವರ್ಗ ಹಾಗೂ ನಿಯಮಿತ ಮಾದರಿ ಪರೀಕ್ಷೆಗಳ ಮೂಲಕ ಸಾವಿರಾರು ಸ್ಪರ್ಧಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದೆ.

ಉತ್ತರ ಕೀ ಪರಿಶೀಲನೆಗೆ ಮಂಗಳೂರು ಐಎಎಸ್ – ಎ ಸ್ಕೂಲ್ ಫಾರ್ ಸಿವಿಲ್ ಸರ್ವೀಸಸ್ ಸಂದೇಶ ಫೌಂಡೇಶನ್, ಪ್ರೇಮನಗರ, ಬಜ್ಜೋಡಿ, ಮಂಗಳೂರು 575005, ಮೊಬೈಲ್ 70221 85544ಸಂಪರ್ಕ ಮಾಡುವಂತೆ ತಿಳಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *