ಮಂಗಳೂರು: ಮಂಗಳೂರಿನ ಎಕ್ಸ್ಪರ್ಟ್ ಕೋಚಿಂಗ್ ಕ್ಲಾಸ್ ನ ನೀಟ್ ದೀರ್ಘಾವಧಿ ತರಬೇತಿ (ಲಾಂಗ್ ಟರ್ಮ್ ಕೋಚಿಂಗ್) ಪಡೆದ ವಿದ್ಯಾರ್ಥಿಗಳು ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಶೇ 98ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ತಿಳಿಸಿದ್ದಾರೆ.
ಮೂರು ಮಂದಿ ವಿದ್ಯಾರ್ಥಿಗಳು 575 ಕ್ಕೂ ಅಧಿಕ ಅಂಕ ಗಳಿಸಿದ್ದು, 16 ವಿದ್ಯಾರ್ಥಿಗಳು 550 ಕ್ಕೂ ಹೆಚ್ಚು, 31 ವಿದ್ಯಾರ್ಥಿಗಳು 525ಕ್ಕೂ ಹೆಚ್ಚು, 55 ವಿದ್ಯಾರ್ಥಿಗಳು 500 ಕ್ಕೂ ಹೆಚ್ಚು, 80 ವಿದ್ಯಾರ್ಥಿಗಳು 475ಕ್ಕೂ ಹೆಚ್ಚು, 115 ವಿದ್ಯಾರ್ಥಿಗಳು 450ಕ್ಕೂ ಹೆಚ್ಚು, 150 ವಿದ್ಯಾರ್ಥಿಗಳು 425ಕ್ಕೂ ಹೆಚ್ಚು ಹಾಗೂ 181 ವಿದ್ಯಾರ್ಥಿಗಳು 400ಕ್ಕೂ ಅಧಿಕ ಅಂಕ ಗಳಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪೈಕಿ ಹಜರತ್‌ಮಾಜ್ ಬಾಬಾಜಾನ್ ಬವಾಖಾನ್ 589 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ನಿಶ್ಚಿತ್ ಎಚ್.ವಿ. 587, ಸಮರ್ಥ ಎನ್. ಹಲಸೂರು 578, ಯಶಸ್ ಟಿ. 573, ಹರ್ಷವರ್ಧನ ಎಸ್.ಜೆ. 572, ನಂದನ್ ಮೋಹಿತೆ 571, ದೇವಾಂಶ್ ಎಸ್.ಎಚ್. 568, ಆಯುಷ್ ಎಂ. ಗೌಡರ್ ಹಾಗೂ ದರ್ಶನ್ ಚಂದ್ರಕಾಂತ್ ಚೌಗಲಾ ತಲಾ 560 ಅಂಕ ಗಳಿಸಿ ಪ್ರಮುಖ ಸಾಧಕರಾಗಿದ್ದಾರೆ. ಇದಲ್ಲದೆ 500ಕ್ಕೂ ಅಧಿಕ ಅಂಕ ಗಳಿಸಿದ ಹಲವಾರು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶದ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮಾತನಾಡಿ, ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಪಡೆಯದ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದ ಅನೇಕ ವಿದ್ಯಾರ್ಥಿಗಳು ಎಕ್ಸ್ಪರ್ಟ್‌ನ ದೀರ್ಘಾವಧಿ ತರಬೇತಿ ಪಡೆದು ಈ ಬಾರಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದರು.
ಪದವಿಪೂರ್ವ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿಗಳಿಗೆ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಗದಿರುವುದನ್ನು ಮನಗಂಡು, ವೈದ್ಯಕೀಯ ಶಿಕ್ಷಣದ ಕನಸು ನನಸಾಗಿಸಲು ಎಕ್ಸ್ಪರ್ಟ್ ಸಂಸ್ಥೆ 2016ರಿಂದ ನೀಟ್ ದೀರ್ಘಾವಧಿ ತರಬೇತಿ ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷದ ಬ್ಯಾಚ್‌ನಲ್ಲಿ ಶೇ.90ರಷ್ಟು ವಿದ್ಯಾರ್ಥಿಗಳು ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದರು. ಈ ವರ್ಷವೂ ಅತ್ಯುತ್ತಮ ಫಲಿತಾಂಶ ದಾಖಲಾಗಿದ್ದು, ಬಹುತೇಕ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad







