ರಾಷ್ಟ್ರ ಮಟ್ಟಕ್ಕೆ ವೀ ವನ್ ಅಕ್ವಾ ಕೇಂದ್ರದ ಈಜುಪಟುಗಳ ಆಯ್ಕೆ

ಕ್ರೀಡೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದಲ್ಲಿ ಜುಲೈ 13ರಿಂದ 16ರವರೆಗೆ ಕರ್ನಾಟಕ ರಾಜ್ಯ ಈಜು ಸಂಸ್ಥೆ ಹಾಗೂ ಬಸವನಗುಡಿ ಈಜು ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಎನ್‌ಆರ್‌ಜೆ ರಾಜ್ಯ ಜೂನಿಯರ್ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ವೀ ವನ್ ಅಕ್ವಾ ಕೇಂದ್ರದ ಈಜುಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಹಲವು ಪದಕಗಳನ್ನು ಗೆದ್ದಿರುವ ಈಜುಪಟುಗಳು ಆಗಸ್ಟ್‌ನಲ್ಲಿ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

<

ಸ್ಪರ್ಧೆಯಲ್ಲಿ ಅಲಿಸಾ ಸ್ವೀಡೆಲ್ ರೇಗೊ ಆರು ಚಿನ್ನ ಹಾಗೂ ಕಂಚಿನ ಪದಕ ಗೆದ್ದು ಮಿಂಚಿದರು. ನೈತಿಕ ಎನ್ ಒಂದು ಚಿನ್ನದ ಪದಕ, ನವ್ಯ ಆಚಾರ್ ಒಂದು ಬೆಳ್ಳಿ ಪದಕ ಹಾಗೂ ಪ್ರಹ್ಲಾದ್ ಶೆಟ್ಟಿ ಒಂದು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಇದೇ ವೇಳೆ ನೀಲ್ ಎಂಜಿ, ಗ್ರಹಿತ್ ಜಿ ಪ್ರಭು, ಆರ್ಯ ಕೋಟಾಗರ್ ಮತ್ತು ದ್ವಿಶಾ ಎಂ. ಶೆಟ್ಟಿ ಫೈನಲ್ ಹಂತಕ್ಕೆ ತೇರ್ಗಡೆಯಾಗಿ ಉತ್ತಮ ಪ್ರದರ್ಶನ ನೀಡಿದರು.

ಸಾಧನೆ ಮಾಡಿದ ಈಜುಪಟುಗಳಿಗೆ ಮುಖ್ಯ ತರಬೇತಿದಾರ ಲೋಕರಾಜ್ ವಿಟ್ಲ ಅವರ ಮಾರ್ಗದರ್ಶನದಲ್ಲಿ ಅಭಿಲಾಶ್, ಗಗನ್ ಜಿ. ಪ್ರಭು, ಸ್ಕಂದ, ಆರೋಮಲ್ ಎ.ಎಸ್., ಸುಧೀನ್ ರಾಜ್, ಸಂಜಯ್ ಉಳ್ಳುವೇಕರ್ ಹಾಗೂ ಮಜು ಎಂ. ತರಬೇತಿ ನೀಡಿದ್ದಾರೆ.

ಈ ಸಾಧನೆಗೆ ವೀ ವನ್ ಅಕ್ವಾ ಕೇಂದ್ರದ ನಿರ್ದೇಶಕರಾದ ರೂಪ ಜಿ. ಪ್ರಭು ಹಾಗೂ ನವೀನ್ ಅಭಿನಂದನೆ ಸಲ್ಲಿಸಿ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *