ಬಿಜೈನ ಭಾರತ್ ಮಾಲ್‌ ಸ್ಮಾರ್ಟ್ ಬಜಾರ್‌ನಲ್ಲಿ ಶಿಕ್ಷಕರಿಗೆ ಗೌರವ, ಸರ್ಕಾರಿ ಶಾಲೆಗಳ ಶಿಕ್ಷಕರು, ವೈದ್ಯಕೀಯ ಪ್ರಾಧ್ಯಾಪಕರಿಗೆ ಸನ್ಮಾನ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಬಿಜೈನ ಭಾರತ್ ಮಾಲ್‌ನ ಸ್ಮಾರ್ಟ್ ಬಜಾರ್‌ನಲ್ಲಿ ಮಹಿಳಾ ಬುಧವಾರದ ಅಂಗವಾಗಿ ವಿಶೇಷ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ತೊಡಗಿಸಿಕೊಂಡಿರುವ ಪ್ರಾಧ್ಯಾಪಕರನ್ನು ಗೌರವಿಸಲಾಯಿತು.

<

ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಶಾಲೆಗಳ ಶಿಕ್ಷಕರು ಹಾಗೂ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ನೀಡುತ್ತಿರುವ ಪ್ರಾಧ್ಯಾಪಕರನ್ನು ಸನ್ಮಾನಿಸಲಾಯಿತು. ಶಿಕ್ಷಕರು ಸಮಾಜ ನಿರ್ಮಾಣದಲ್ಲಿ ವಹಿಸುತ್ತಿರುವ ಮಹತ್ವದ ಪಾತ್ರ ಹಾಗೂ ಅವರ ನಿರಂತರ ಸೇವೆಯನ್ನು ಗುರುತಿಸಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯೆನಪೋಯ ಆಸ್ಪತ್ರೆಯ ಪ್ರಾಧ್ಯಾಪಕಿ ಡಾ. ಪ್ರಭಾ ಅಧಿಕಾರಿ ಅವರು ಶಿಕ್ಷಕ ವೇಣುಗೋಪಾಲ್, ವಾಣಿ ಜಯರಾಮ್, ಸವಿತಾ ಐತಾಳ್, ವೈದ್ಯೆ ಡಾ. ಸರಿಟಾ ಲೋಬೊ ಹಾಗೂ ಶಿಕ್ಷಕಿ ಲಿಲ್ಲಿ ಕಾರ್ಮಿನ್ ವೇಗಸ್ ಅವರನ್ನು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ವಯೋವೃದ್ಧ ವೈದ್ಯಕೀಯ ಕ್ಷೇತ್ರದ ಡಾ. ಪ್ರಸತ್ತಾ ಅವರನ್ನು ಕುಸುಮ ನವೀನ್ ಅವರು ಗೌರವಿಸಿದರು.

ಸಂಸ್ಥೆಯ ವ್ಯವಸ್ಥಾಪಕ ಸಂದೇಶ್ ಕಿದಿಯೂರು ಹಾಗೂ ಪ್ರವೀಣ್ ಕುಮಾರ್ ಅವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿ ಆಗಿ ನಡೆಯಿತು.

What do you feel about this post?

0%
like

Like

100%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *