ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಗರದ ಬಿಜೈ ಭಾರತ್ ಮಾಲ್‌ನಲ್ಲಿರುವ ಸ್ಮಾರ್ಟ್ ಬಜಾರ್ ವತಿಯಿಂದ ಶನಿವಾರ ‘ಮುದ್ದು ಕೃಷ್ಣ’ ಸ್ಪರ್ಧೆಯನ್ನು ಸಂಭ್ರಮದಿಂದ ಆಯೋಜಿಸಲಾಯಿತು.

ಮಂಗಳೂರಿನ ವಿವಿಧ ಶಾಲೆಗಳ ಮಕ್ಕಳು ಹಾಗೂ ಪುಟ್ಟ ಕಂದಮ್ಮಗಳು ಶ್ರೀಕೃಷ್ಣನ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದರು. ಮುದ್ದಾದ ನಟನೆ, ವೈವಿಧ್ಯಮಯ ವೇಷಭೂಷಣ ಹಾಗೂ ಪ್ರತಿಭೆಯ ಮೂಲಕ ಮಕ್ಕಳು ನೆರೆದಿದ್ದವರ ಗಮನ ಸೆಳೆದರು. ಮಕ್ಕಳ ಉತ್ಸಾಹ ಮತ್ತು ಸಂಭ್ರಮದಿಂದ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.
ಕದ್ರಿಯ ಯಕ್ಷ ಮಂಜುಳಾ ಮಹಿಳಾ ತಾಳಮದ್ದಳೆ ಅರ್ಥಧಾರಿ ಶೋಭಾ ಸುಧಾಕರ್ ಪೇಜಾವರ, ಮಂಗಳೂರಿನ ನಟಿ ನಿಜರೂಪ ಡಿ. ಶೆಟ್ಟಿ ಹಾಗೂ ಮೂವಿ ಮಾರ್ಕೆಟರ್ ಮತ್ತು ಯೂಟ್ಯೂಬರ್ ಸೂರಜ್ ಶೆಟ್ಟಿ ಅವರು ತೀರ್ಪುಗಾರರಾಗಿ ಪಾಲ್ಗೊಂಡು ಮಕ್ಕಳ ಪ್ರತಿಭೆಯನ್ನು ಮೌಲ್ಯಮಾಪನ ಮಾಡಿದರು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಗುವಿಗೂ ಪ್ರೋತ್ಸಾಹದ ಸಂಕೇತವಾಗಿ ಪ್ರಮಾಣಪತ್ರ ನೀಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೇಯ ಶೆಟ್ಟಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಸ್ಮಾರ್ಟ್ ಬಜಾರ್ ಸಂಸ್ಥಾಪಕ ಸಂದೇಶ್ ಕಿಡಿಯೂರು ಹಾಗೂ ಪ್ರವೀಣ್ ಕುಮಾರ್ ಅವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಪುಟ್ಟ ಮಕ್ಕಳಲ್ಲಿ ಶ್ರೀಕೃಷ್ಣನ ಸಂಸ್ಕೃತಿ, ಪರಂಪರೆ ಹಾಗೂ ಭಕ್ತಿಭಾವವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ‘ಮುದ್ದು ಕೃಷ್ಣ’ ಸ್ಪರ್ಧೆ ಮೆಚ್ಚುಗೆಗೆ ಪಾತ್ರವಾಯಿತು.
‘Muddu Krishna’ Competition Held at Smart Bazaar in Mangaluru
Mangaluru: To mark Sri Krishna Janmashtami, Smart Bazaar at Bharat Mall in Bejai, Mangaluru, organised a ‘Muddu Krishna’ competition on Saturday with great enthusiasm.
Children from various schools in Mangaluru, along with toddlers, participated in the competition dressed as Lord Krishna. Their adorable performances, colourful costumes and talent captivated the audience. The event was marked by the enthusiastic participation and excitement of the children.
Shobha Sudhakar Pejawar, Yakshagana Talamaddale artiste associated with Kadri’s Yaksha Manjula Women’s Talamaddale, Mangaluru actress Nijaroopa D. Shetty, and movie marketer and YouTuber Suraj Shetty served as judges and evaluated the performances of the young participants.
Prizes were distributed to the winners of the competition. Certificates were also presented to every child who participated as a token of encouragement.
Shreya Shetty compered the programme. The event was successfully conducted with the support and cooperation of Smart Bazaar founder Sandesh Kidiyoor and Praveen Kumar.
The ‘Muddu Krishna’ competition, organised with the objective of nurturing awareness of Lord Krishna’s culture, tradition and devotional spirit among young children, received appreciation from the participants and audience.
What do you feel about this post?
Like
Love
Happy
Haha
Sad






