ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಮಹತ್ವದ ಬೆಳವಣಿಗೆ ಆಗಿದ್ದು, ಸರ್ಕಾರ 15 ಮಂದಿ ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.
ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಪಿ. ಹರಿಶೇಖರನ್ ಅವರನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಬೆಳಗಾವಿ ನಗರ ಪೊಲೀಸ್ ಕಮಿಷನರ್ ಆಗಿದ್ದ ಭೂಷಣ್ ಬೊರಸೆ ಅವರನ್ನು ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಎನ್. ಶಶಿಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಐಪಿಎಸ್ ಅಧಿಕಾರಿ ಆರ್. ಚೇತನ್ ಅವರನ್ನು ಪಶ್ಚಿಮ ವಲಯದ ಐಜಿಪಿಯಾಗಿ ನೇಮಕ ಮಾಡಿದೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಡಿಸಿಪಿ ಆಗಿದ್ದ ಮಿಥುನ್ ಅವರನ್ನು ಗದಗ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಪಿ. ಹರಿಶೇಖರನ್– ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್)
ಎಂ. ನಂಜುಂಡಸ್ವಾಮಿ- ಎಡಿಜಿಪಿ, ಕುಂದುಕೊರತೆ, ಮಾನವ ಹಕ್ಕುಗಳು
ದೇವಜ್ಯೋತಿ ರಾಯ್– ಎಡಿಜಿಪಿ, ಅಪರಾಧ ಹಾಗೂ ತಾಂತ್ರಿಕ ಸೇವೆ
ಅಮಿತ್ ಸಿಂಗ್ – ಐಜಿಪಿ, ಕೆಎಸ್ಆರ್ಪಿ
ಭೂಷಣ್ ಬೊರಸೆ –ಪೊಲೀಸ್ ಕಮಿಷನರ್, ಹುಬ್ಬಳ್ಳಿ – ಧಾರವಾಡ
ಆರ್. ಚೇತನ್ – ಐಜಿಪಿ, ಪಶ್ಚಿಮ ವಲಯ, ಮಂಗಳೂರು
ಪ್ರಕಾಶ್ ನಿಕಮ್ ಅಮೃತ್- ಪೊಲೀಸ್ ಕಮಿಷನರ್, ಬೆಳಗಾವಿ ನಗರ
ಶಿವಪ್ರಕಾಶ್ ದೇವರಾಜು – ಎಸ್ಪಿ, ಎಎನ್ಟಿಎಫ್
ಪದ್ಮಿನಿ ಸಾಹೋ – ಎಸ್ಪಿ, ಚಿಕ್ಕಬಳ್ಳಾಪುರ
ಆರ್. ಶ್ರೀನಿವಾಸ್ ಗೌಡ – ಸಿಸಿಬಿ ಬ್ರಾಂಚ್– 1, ಅಪರಾಧ ವಿಭಾಗ, ಬೆಂಗಳೂರು
ಶಿವಕುಮಾರ್ – ಎಸ್ಪಿ, ಕರ್ನಾಟಕ ಲೋಕಾಯುಕ್ತ
ಕುಶಾಲ್ ಚೌಕ್ಸಿ – ಡಿಸಿಪಿ, ಆಡಳಿತ, ಬೆಂಗಳೂರು
ಸಾಹಿಲ್ ಬಾಗ್ಲಾ- ಎಸ್ಪಿ, ಕೊಪ್ಪಳ
ರೋಹನ್ ಜಗದೀಶ್ – ಎಸ್ಪಿ, ಬೆಂಗಳೂರು ದಕ್ಷಿಣ
ಮಿಥುನ್ ಎಚ್. ಎನ್ – ಎಸ್ಪಿ, ಗದಗ



