ಎನ್ಯುಮರೇಶನ್ ಅರ್ಜಿ ವಿಳಂಬ ಮಾಡದೇ ವಾಪಸ್ ಮಾಡಿ: ಡಿ.ಸಿ ದರ್ಶನ್ ಸೂಚನೆ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 18,03,766 ಮತದಾರರ ಪೈಕಿ 17,86,112 ಅಂದರೆ ಶೇ 99.02 ಮತದಾರರಿಗೆ ಎನ್ಯುಮರೇಶನ್ ಫಾರ್ಮ್‍ಗಳನ್ನು ತಲುಪಿಸಲಾಗಿದೆ. ಜುಲೈ 29 ಎನ್ಯುಮರೇಶನ್ ಫಾರ್ಮ್‍ಗಳ ಡಿಜಿಟೈಸೇಷನ್‍ಗೆ ಕೊನೆಯ ದಿನ ಆಗಿರುವುದರಿಂದ ಮತದಾರರು ಆದಷ್ಟು ಬೇಗ ಎನ್ಯುಮರೇಶನ್ ಫಾರ್ಮ್‍ಗಳನ್ನು ಭರ್ತಿ ಮಾಡಿ ಬಿ.ಎಲ್.ಒಗಳು ಮನೆಗೆ ಬಂದಾಗ ವಿಳಂಬ ಮಾಡದೇ ನೀಡಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ.

<

ಬಿ.ಎಲ್.ಒ ಗಳು ಮತದಾರರಿಂದ ಸ್ವೀಕೃತವಾಗುವ ಎನ್ಯುಮರೇಶನ್ ಫಾರ್ಮ್‍ಗಳನ್ನು ಬಿ.ಎಲ್.ಒ ಆ್ಯಪ್‍ನಲ್ಲಿ ಡಿಜಿಟೈಸೇಶನ್ ಮಾಡಲು ಕನಿಷ್ಠ 2 ರಿಂದ 4 ನಿಮಿಷಗಳ ಸಮಯ ತಗಲುತ್ತದೆ. ಕೊನೆಯ ಹಂತದಲ್ಲಿ ಅಂದರೆ ಜುಲೈ 25 ರ ನಂತರ ಹೆಚ್ಚಿನ ಎನ್ಯುಮರೇಶನ್ ಫಾರ್ಮ್‍ಗಳು ಸ್ವೀಕೃತವಾದರೆ ಡಿಜಿಟೈಸೇಶನ್ ಮಾಡುವುದು ಕಷ್ಟವಾಗಬಹುದು ಎಂದು ತಿಳಿಸಿದ್ದಾರೆ.

‌ಜಿಲ್ಲೆಯಲ್ಲಿ ಇದುವರೆಗೆ ಶೇ 19.92ರಷ್ಟು ಮತದಾರರ ಎನ್ಯುಮರೇಶನ್ ಫಾರ್ಮ್‍ಗಳನ್ನು ಡಿಜಿಟೈಸ್ ಮಾಡಲಾಗಿದೆ. ಡಿಜಿಟೈಸೇಶನ್ ಮಾಡಿದ ಎನ್ಯುಮರೇಶನ್ ಫಾರ್ಮ್‍ಗಳಲ್ಲಿರುವ ಮತದಾರರು ಮಾತ್ರ ಅಗಸ್ಟ್ 5 ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿರುತ್ತಾರೆ. ಆದುದರಿಂದ ಜಿಲ್ಲೆಯ ಎಲ್ಲಾ ಮತದಾರರು ಈ ಒಂದು ವಾರದಲ್ಲಿ ಎನ್ಯುಮರೇಶನ್ ಫಾರ್ಮ್‍ಗಳನ್ನು ಭರ್ತಿ ಮಾಡಿ ಬಿ.ಎಲ್.ಒ ರವರಿಗೆ ನೀಡಿ ಸಹಕರಿಸಲು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
3.80 ಲಕ್ಷ ಫಾರಂ ಡಿಜಿಟೈಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯು ಪ್ರಗತಿಯಲ್ಲಿದ್ದು, 18,03,766 ಮತದಾರರ ಪೈಕಿ ಜುಲೈ 14 ರವರೆಗೆ 17,86,883 ಎನ್ಯುಮರೇಶನ್ ಫಾರ್ಮ್ ಹಂಚಿಕೆ ಮಾಡಲಾಗಿದೆ. 3,80,568 ಫಾರ್ಮ್‍ಗಳನ್ನು ಡಿಜಿಟೈಸ್ ಮಾಡಲಾಗಿದೆ. ಬೆಳ್ತಂಗಡಿ-45153 ಮೂಡುಬಿದಿರೆ -41229, ಮಂಗಳೂರು ನಗರ ಉತ್ತರ-41055, ಮಂಗಳೂರು ನಗರ ದಕ್ಷಿಣ-49036, ಮಂಗಳೂರು-63549, ಬಂಟ್ವಾಳ-43966, ಪುತ್ತೂರು-38969, ಸುಳ್ಯ-57611 ಅರ್ಜಿಗಳನ್ನು ಡಿಜಿಟೈಸ್ ಮಾಡಲಾಗಿದೆ ಎಂದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *