ಎಂಐಒ ಆಸ್ಪತ್ರೆಯ ಡಾ. ವಿಶ್ವಪ್ರಿಯಾ ಗೋದ್ಖಿಂಡಿಗೆ ಪ್ರತಿಷ್ಠಿತ ಯುರೋಪಿಯನ್ ಪೆಥಾಲಜಿ ಗೌರವ

ಮಂಗಳೂರು: ಇಲ್ಲಿನ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ಪೆಥಾಲಜಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ವಿಶ್ವಪ್ರಿಯಾ ಗೋದ್ಖಿಂಡಿ ಅವರು ಯುರೋಪಿಯನ್ ಸೊಸೈಟಿ ಆಫ್ ಪೆಥಾಲಜಿ ಅಕಾಡೆಮಿ–2026 ರ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಎಂಐಒ ಆಸ್ಪತ್ರೆಯ ನಿರ್ದೇಶಕ ಡಾ. ಸುರೇಶ್ ರಾವ್ ಅವರು ತಿಳಿಸಿದ್ದಾರೆ. ಪೆಥಾಲಜಿ ಕ್ಷೇತ್ರದಲ್ಲಿ ಅವರ ಶೈಕ್ಷಣಿಕ ಹಾಗೂ ವೃತ್ತಿಪರ ಸಾಧನೆ ಗುರುತಿಸಿ ಈ ಗೌರವ ಲಭಿಸಿದೆ. 2026ನೇ ಸಾಲಿನಲ್ಲಿ ಯೂರೋಪಿಯನ್ ಸೊಸೈಟಿ ಆಫ್ ಪಥಾಲಜಿ ವತಿಯಿಂದ ಆಯ್ಕೆಯಾದ ಏಕೈಕ ಭಾರತೀಯ ಪ್ರಶಸ್ತಿ […]

Continue Reading

ಮಂಗಳೂರಿನಲ್ಲಿ ಜೆಎಲ್‌ಆರ್ ಇಂಡಿಯಾ ನೂತನ ಮಳಿಗೆಗೆ ರಾಜನ್ ಅಂಬಾ ಚಾಲನೆ

ಮಂಗಳೂರು: ಐಷಾರಾಮಿ ಕಾರುಗಳ ವಿಭಾಗದಲ್ಲಿ ಮಂಗಳೂರು, ದಕ್ಷಿಣ ಭಾರತದ ಅತ್ಯಂತ ಪ್ರಮುಖ ಮಾರುಕಟ್ಟೆ ಆಗಿದೆ. ಇಲ್ಲಿ ನಮ್ಮ ನೂತನ ಘಟಕವನ್ನು ಆರಂಭಿಸಲು ನಮಗೆ ಸಂತೋಷ ಆಗಿದೆ. ಕರ್ನಾಟಕದಲ್ಲಿ ಮತ್ತು ಈ ಭಾಗದಲ್ಲಿ ನಮ್ಮ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಹೆಜ್ಜೆ ಇಟ್ಟಿದ್ದೇವೆ” ಎಂದು ಪ್ರತಿಷ್ಠಿತ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಜೆಎಲ್‌ಆರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಾಜನ್ ಅಂಬಾ ಅವರು ತಿಳಿಸಿದರು. ಮಂಗಳೂರಿನ ಕೊಟ್ಟಾರದಲ್ಲಿ ಇರುವ ಜೆಎಲ್‌ಆರ್ ಇಂಡಿಯಾದ ಸೇವಾ ಮತ್ತು ಬಿಡಿಭಾಗಗಳ ಕೇಂದ್ರದ ಪಕ್ಕದಲ್ಲೇ ಸಂಸ್ಥೆಯು […]

Continue Reading

ಪಂಚರಾಜ್ಯ ಚುನಾವಣೆ ಫಲಿತಾಂಶ, ಸಂಘಟನಾ ಶಕ್ತಿಗೆ ಸಾಕ್ಷಿ ಪಶ್ಚಿಮ ಬಂಗಾಳ, ಬಿಜೆಪಿ ಚಾರಿತ್ರಿಕ ಗೆಲುವು: ಸಂಸದ ಚೌಟ

ಮಂಗಳೂರು: ಪಂಚರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವುದು ಹಾಗೂ ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿರುವುದು ಹಾಗೂ ಕೇರಳದಲ್ಲಿ ಉತ್ತಮ ಸಾಧನೆ ಮಾಡಿರುವುದು ಪ್ರಧಾನಮಂತ್ರಿ ಮೋದಿ ಅವರ ಸರ್ಕಾರದ ಮೇಲಿರುವ ಜನರ ವಿಶ್ವಾಸಕ್ಕೆ ಹಾಗೂ ‘ವಿಕಸಿತ ಭಾರತ’ದ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಿದೆ ಎಂದು ಸಂಸದ ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ಇನ್ನೊಂದೆಡೆ, ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯ ಗೆಲುವು ಇಡೀ ದೇಶದಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಸಂದ ಗೆಲುವು. […]

Continue Reading

ನಗರದಲ್ಲಿ ಇಬ್ಬರು ಶಾಸಕರಿದ್ದರು ಮಾಹಿತಿ ನೀಡದೇ ನೀರಿನ ರೇಷನಿಂಗ್ ನಿರ್ಧಾರ   ಎಎಂಆರ್‌ ಡ್ಯಾಂ ನಿಂದ ತುಂಬೆಗೆ ನೀರು ಹರಿಸಿ: ಶಾಸಕ ಕಾಮತ್  

ಮಂಗಳೂರು: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟವು ಕನಿಷ್ಠ ಮಟ್ಟಕ್ಕೆ ಕುಸಿದು ಅಣೆಕಟ್ಟಿನಲ್ಲಿ ಕೇವಲ 4 ಮೀಟರ್‌ಗೆ ಇಳಿಕೆ ಆಗುವ ಮೂಲಕ ನಗರದಲ್ಲಿ ಕೃತಕ ಜಲಕ್ಷಾಮ ಸೃಷ್ಟಿಸಲಾಗಿದೆ. ಕೂಡಲೇ ಎಎಂಆರ್‌ ಡ್ಯಾಂ ನಿಂದ ತುಂಬೆ ಡ್ಯಾಂ ಗೆ ನೀರು ಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು. ತುಂಬೆ ಡ್ಯಾಂ ಗೆ ಅವರು ಖುದ್ದು ಭೇಟಿ ನೀಡಿ ವೀಕ್ಷಣೆ ನಡೆಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಇಬ್ಬರು ಶಾಸಕರುಗಳು ಇದ್ದರೂ ಯಾವುದೇ ಮಾಹಿತಿ ನೀಡದೇ ಜಿಲ್ಲಾಡಳಿತ […]

Continue Reading

ಇಂಧನ ಸಚಿವ ಕೆ.ಜೆ. ಜಾರ್ಜ್ ನಿರ್ದೇಶನ: ಕೆಪಿಟಿಸಿಎಲ್ ಎಂಡಿ ಡಾ. ರಾಮ್ ಪ್ರಸಾತ್ ಮನೋಹರ್-ಜುಲೈ 𝟭𝟱ರೊಳಗೆ ಕಡಂದಲೆ 400 ಕೆ.ವಿ ಉಪಕೇಂದ್ರ ಕಾಮಗಾರಿ ಪೂರ್ಣ ಗುರಿ

ಮಂಗಳೂರು: ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ, ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿ ಭಾಗದ ಜಿಲ್ಲೆಗಳಿಗೆ ತಡೆರಹಿತ, ಉತ್ತಮ ಗುಣಮಟ್ಟದ ವಿದ್ಯುತ್ ಸೌಲಭ್ಯ ಒದಗಿಸುವ ‘ಕಡಂದಲೆ 400 ಕೆವಿ ವಿದ್ಯುತ್ ಉಪಕೇಂದ್ರ’ ಕಾಮಗಾರಿ ಜುಲೈ 15 ರ ಒಳಗಾಗಿ ಪೂರ್ಣಗೊಳಿಸಲಾಗುವುದು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಬುಧವಾರ ತಿಳಿಸಿದ್ದಾರೆ. ಭೂವ್ಯಾಜ್ಯದ ಕಾರಣದಿಂದಾಗಿ ಮೂರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲ್ಲೂಕಿನ ಕಡಂದಲೆ ಗ್ರಾಮದಲ್ಲಿ 400 […]

Continue Reading

ಬಿಜೆಪಿ ಗೆಲುವು ಶಾಸಕ ವೇವದ್ಯಾಸ್ ಕಾಮತ್ ಹರ್ಷ

ಮಂಗಳೂರು: ಅಸ್ಸಾಂ, ಪುದುಚೇರಿ ಜತೆಗೆ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಚರಿತ್ರೆಯಲ್ಲಿ ದಾಖಲಾಗುವಂತಹ ಅದ್ಭುತ ಗೆಲುವು ಸಾಧಿಸಿದ್ದು ಟಿಎಂಸಿಯ ದುರಾಡಳಿತ ಕೊನೆಗೊಂಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ವರು ಹರ್ಷ ವ್ಯಕ್ತಪಡಿಸಿದ್ದಾರೆ. ಟಿಎಂಸಿ ಹಾಗೂ ಕಮ್ಯುನಿಸ್ಟ್ ಎಂಬ ಒಂದೇ ನಾಣ್ಯದ ಎರಡು ಮುಖಗಳು ಬಂಗಾಳದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಮಾರಣಹೋಮ, ಮಿತಿ ಮೀರಿದ ಓಲೈಕೆ, ದೇಶದ ಭದ್ರತೆಗೆ ಸವಾಲು ಇವೆಲ್ಲವೂ ಬಿಜೆಪಿ ಗೆಲುವಿನಿಂದ ಅಂತ್ಯಗೊಂಡಿದೆ. ಭಾರತೀಯ ಜನಸಂಘದ ಸಂಸ್ಥಾಪಕರಾಗಿದ್ದ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ನಾಡಿನಲ್ಲಿ ಕಮಲ […]

Continue Reading

ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಡಾ. ಮೋಹನ್ ಆಳ್ವ ಸನ್ಮಾನ -ಆಳ್ವಾಸ್ ವಿದ್ಯಾರ್ಥಿಗಳು ಸಂಸ್ಥೆ ರಾಯಭಾರಿಗಳು

ಮೂಡುಬಿದಿರೆ: ದ್ವಿತೀಯ ಪಿಯು ಅಂತಿಮ ಪರೀಕ್ಷೆಯಲ್ಲಿ ರಾಜ್ಯದ ಅಗ್ರಗಣ್ಯ 10 ರ‍್ಯಾಂಕ್‌ ವೊಳಗೆ ಸ್ಥಾನ ಪಡೆದ ಆಳ್ವಾಸ್ ಪದವಿಪೂರ್ವ ಕಾಲೇಜಿನ 103 ವಿದ್ಯಾರ್ಥಿಗಳ ಜತೆಯಲ್ಲಿ ಎಸ್‌ಎಸ್‌ಎಲ್‌ಸಿ ಹಂತದಲ್ಲಿ ಶೇ 50 ಕ್ಕಿಂತ ಕಡಿಮೆ ಅಂಕಗಳಿಸಿ, ನಂತರ ಪದವಿಪೂರ್ವ ಶಿಕ್ಷಣಕ್ಕೆ ಆಳ್ವಾಸ್ ಸೇರಿದ ನಂತರ ಶೇ 95ಕ್ಕಿಂತಲೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸುವ ಕಾರ್ಯಕ್ರಮ ಮೂಡುಬಿದಿರೆ ನುಡಿಸಿರಿ ಸಭಾಂಗಣದಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು ಮಾತನಾಡಿ, ನೀವು […]

Continue Reading