ಮಂಗಳೂರು: ಇಲ್ಲಿನ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ಪೆಥಾಲಜಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ವಿಶ್ವಪ್ರಿಯಾ ಗೋದ್ಖಿಂಡಿ ಅವರು ಯುರೋಪಿಯನ್ ಸೊಸೈಟಿ ಆಫ್ ಪೆಥಾಲಜಿ ಅಕಾಡೆಮಿ–2026 ರ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಎಂಐಒ ಆಸ್ಪತ್ರೆಯ ನಿರ್ದೇಶಕ ಡಾ. ಸುರೇಶ್ ರಾವ್ ಅವರು ತಿಳಿಸಿದ್ದಾರೆ.
ಪೆಥಾಲಜಿ ಕ್ಷೇತ್ರದಲ್ಲಿ ಅವರ ಶೈಕ್ಷಣಿಕ ಹಾಗೂ ವೃತ್ತಿಪರ ಸಾಧನೆ ಗುರುತಿಸಿ ಈ ಗೌರವ ಲಭಿಸಿದೆ. 2026ನೇ ಸಾಲಿನಲ್ಲಿ ಯೂರೋಪಿಯನ್ ಸೊಸೈಟಿ ಆಫ್ ಪಥಾಲಜಿ ವತಿಯಿಂದ ಆಯ್ಕೆಯಾದ ಏಕೈಕ ಭಾರತೀಯ ಪ್ರಶಸ್ತಿ ಪುರಸ್ಕೃತರು ಎಂಬ ಹೆಗ್ಗಳಿಕೆ ಅವರದು. ಈ ಪ್ರತಿಷ್ಠಿತ ಅಂತರ ರಾಷ್ಟ್ರೀಯ ಮಾನ್ಯತೆಗೆ ಆಯ್ಕೆಯಾಗಿರುವ ಡಾ. ವಿಶ್ವಪ್ರಿಯಾ ಗೋದ್ಖಿಂಡಿ ಅವರನ್ನು ಎಂಐಒ ಆಡಳಿತ ಮಂಡಳಿ, ವೈದ್ಯರು ಹಾಗೂ ಸಿಬ್ಬಂದಿ ಅಭಿನಂದಿಸಲಿದ್ದಾರೆ ಎಂದರು.
ಈ ಸಾಧನೆ ಎಂಐಒ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ ಮತ್ತು ಉತ್ತಮ ಕ್ಯಾನ್ಸರ್ ನಿರ್ಣಯ ಹಾಗೂ ಚಿಕಿತ್ಸೆಯತ್ತ ಇರುವ ಬದ್ಧತೆ ಪ್ರತಿಬಿಂಬಿಸುತ್ತದೆ. ಅವರ ಮುಂದಿನ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಗಳಿಗೆ ಆಸ್ಪತ್ರೆಯ ವತಿಯಿಂದ ಶುಭ ಹಾರೈಕೆ ಇದೆ ಎಂದು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad
