ಸ್ಕ್ಯಾನಿಂಗ್ ಸೆಂಟರ್‌ಗಳ ಸಮಗ್ರ ಪರಿಶೀಲನೆ ಕಡ್ಡಾಯ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ (ಪಿಸಿಪಿಎನ್‌ಡಿಟಿ) ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನೋಂದಾಯಿತ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ನಿಯಮಿತವಾಗಿ ಹಾಗೂ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ (ಪಿಸಿಪಿಎನ್‌ಡಿಟಿ) ಸಕ್ಷಮ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ 82 ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಂದು ಕೇಂದ್ರಕ್ಕೂ […]

Continue Reading

ನಕಲಿ ವೈದ್ಯರಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಖಡಕ್ ಎಚ್ಚರಿಕೆ: ಅಕ್ರಮ ಕ್ಲಿನಿಕ್‌ಗಳ ವಿರುದ್ಧ ಕ್ರಮಕ್ಕೆ ಆದೇಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ಧ ಯಾವುದೇ ರಾಜಿ ಇಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಕಲಿ ವೈದ್ಯರ ವಿರುದ್ಧ ಬರುವ ದೂರುಗಳನ್ನು ಸಮಗ್ರವಾಗಿ ಪರಿಶೀಲಿಸಿ, ಕಾನೂನಿನ ಅನ್ವಯ ತ್ವರಿತ ಕ್ರಮ ಕೈಗೊಳ್ಳುವಂತೆ […]

Continue Reading

ಆಹಾರ ಸುರಕ್ಷತಾ ತಪಾಸಣೆ: ಬೀದಿ ಬದಿ ಆಹಾರ ಮಳಿಗೆಗಳಿಂದ ಅಜಿನೊಮೊಟೊ ಜಪ್ತಿ

ಮಂಗಳೂರು: ಆಹಾರ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆಯ ನಿಟ್ಟಿನಲ್ಲಿ, ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿಗಳ ತಂಡವು ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಬೀದಿ ಬದಿ ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿದೆ. ಈ ತಪಾಸಣೆ ವೇಳೆ, ನಿಯಮ ಬಾಹಿರವಾಗಿ ಬಳಸಲಾಗುತ್ತಿದ್ದ ಆರೋಗ್ಯಕ್ಕೆ ಹಾನಿಕರವಾದ ಅಜಿನೊಮೊಟೊ ಪದಾರ್ಥವನ್ನು ಅಧಿಕಾರಿಗಳು ಪತ್ತೆ ಹಚ್ಚಿ, ಜಪ್ತಿ ಮಾಡಿಕೊಂಡಿದ್ದಾರೆ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ನೈರ್ಮಲ್ಯ ಮತ್ತು ಸುರಕ್ಷತಾ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸುವವರ […]

Continue Reading

ಕೆಎಂಸಿ ಅತ್ತಾವರದಲ್ಲಿ ವಿಶೇಷ ‘ಸಂಜೆ ಕ್ಲಿನಿಕ್’ ಆರಂಭ, ಗುಣಮಟ್ಟದ ಆರೋಗ್ಯ ಸೇವೆಗೆ ಹೆಜ್ಜೆ

ಮಂಗಳೂರು: ಉದ್ಯೋಗಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಹಗಲಿನ ವೇಳೆ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದವರಿಗೆ ಅನುಕೂಲವಾಗುವಂತೆ ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ತಜ್ಞ ವೈದ್ಯರ ಸಮಾಲೋಚನೆಗಾಗಿ ವಿಶೇಷ ‘ಸಂಜೆ ಕ್ಲಿನಿಕ್’ ಆರಂಭಿಸಲಾಗಿದೆ. ಸಾಮಾನ್ಯ ಕೆಲಸದ ವೇಳೆಯ ನಂತರವೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ಹೊಸ ಸೇವೆ ಆರಂಭಿಸಲಾಗಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ. ಸಂಜೆ 5 ರಿಂದ 7 ಗಂಟೆಯವರೆಗೆ ಕಾರ್ಯನಿರ್ವಹಿಸುವ ಈ ಕ್ಲಿನಿಕ್‌ನಲ್ಲಿ ಹೃದ್ರೋಗ, ಸಾಮಾನ್ಯ ವೈದ್ಯಕೀಯ, ಹಸ್ತ ಶಸ್ತ್ರಚಿಕಿತ್ಸೆ, ಮೂತ್ರಪಿಂಡ, ಮೆದುಳಿನ […]

Continue Reading

ಅಪಘಾತ ಸಂತ್ರಸ್ತರಿಗೆ ಮೊದಲ 7 ದಿನ ರೂ 2.5 ಲಕ್ಷವರೆಗೆ ಉಚಿತ ಚಿಕಿತ್ಸೆಗೆ ಸರಕಾರದ ಚಿಂತನೆ: ಆರೋಗ್ಯ ಸಚಿವ ಖಾದರ್

ಕುಮಟಾ: ರಾಜ್ಯದಲ್ಲಿ ಅಪಘಾತಕ್ಕೊಳಗಾಗುವ ಯಾವುದೇ ವ್ಯಕ್ತಿಗೆ, ಅವರು ರಾಜ್ಯದವರಾಗಲಿ, ದೇಶದ ಇತರ ಭಾಗದವರಾಗಲಿ ಅಥವಾ ವಿದೇಶಿಯರಾಗಲಿ ಆಸ್ಪತ್ರೆಗೆ ದಾಖಲಾದ ಮೊದಲ ಏಳು ದಿನಗಳವರೆಗೆ 2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ನಿರ್ಮಿಸಲಾದ ಟ್ರಾಮಾ ಕೇರ್ ಸೆಂಟರ್ ಮತ್ತು ತುರ್ತು ಚಿಕಿತ್ಸಾ […]

Continue Reading

ಎನ್‌ಎಂಸಿ ಅನುಮತಿ: ಆಳ್ವಾಸ್ ವೈದ್ಯಕೀಯ ಕಾಲೇಜಿನಲ್ಲಿ 150 ಎಂಬಿಬಿಎಸ್ ಸೀಟುಗಳಿಗೆ ಹಸಿರು ನಿಶಾನೆ, ಕರಾವಳಿಯ ವೈದ್ಯಕೀಯ ಶಿಕ್ಷಣಕ್ಕೆ ಹೊಸ ಮೈಲುಗಲ್ಲು: ಡಾ. ಆಳ್ವ

ಮೂಡುಬಿದಿರೆ: ಕರಾವಳಿ ಭಾಗದ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ಬೆಳವಣಿಗೆಯಾಗಿ, ಮೂಡುಬಿದಿರೆಯ ಮಿಜಾರಿನಲ್ಲಿರುವ ಆಳ್ವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರಕ್ಕೆ 2026–27ನೇ ಶೈಕ್ಷಣಿಕ ವರ್ಷದಿಂದ 150 ಎಂಬಿಬಿಎಸ್ ವಿದ್ಯಾರ್ಥಿಗಳ ಪ್ರವೇಶಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅಧಿಕೃತ ಅನುಮೋದನೆ ನೀಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ತಿಳಿಸಿದ್ದಾರೆ. ಈ ಅನುಮೋದನೆಯೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಹುಕಾಲದ ಮಹತ್ವಾಕಾಂಕ್ಷೆಯ ವೈದ್ಯಕೀಯ ಕಾಲೇಜು ಕಾರ್ಯರೂಪಕ್ಕೆ ಬರುತ್ತಿದ್ದು, ಮೊದಲ ವರ್ಷದಲ್ಲೇ 150 […]

Continue Reading

ದ.ಕ ಜಿಲ್ಲೆಯಲ್ಲಿ 45 ಮಂದಿಗೆ ಪಿಎಂ ರಾಹತ್ ಚಿಕಿತ್ಸೆ, ರಸ್ತೆ ಅಪಘಾತದ ವ್ಯಕ್ತಿಗೆ ಸಿಗಲಿದೆ 1.50 ಲಕ್ಷ ಮೊತ್ತದ ಉಚಿತ ಸೌಲಭ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಆರೋಗ್ಯ ಸೇವಾ ಯೋಜನೆಗಳಲ್ಲಿ ಒಂದಾಗಿರುವ ಪಿಎಂ ರಾಹತ್ (ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲಾತಿ ಮತ್ತು ಖಚಿತ ಚಿಕಿತ್ಸೆ) ಯೋಜನೆಯ ಲಾಭವನ್ನು 45 ಮಂದಿ ಪಡೆದುಕೊಂಡಿದ್ದಾರೆ. ಪ್ರಧಾನ ಮಂತ್ರಿ ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲಾತಿ ಮತ್ತು ಖಚಿತ ಚಿಕಿತ್ಸೆ ಆರೋಗ್ಯ ಸೇವಾ ಯೋಜನೆಯು ಜಿಲ್ಲೆಯಲ್ಲಿ ನಿಧಾನವಾಗಿ ವೇಗ ಪಡೆದುಕೊಳ್ಳುತ್ತಿದೆ. ರಸ್ತೆ ಅಪಘಾತಕ್ಕೆ ಒಳಗಾಗುವವರಿಗೆ ಪಿಎಂ ರಾಹತ್ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಅಪಘಾತಕ್ಕೆ ಒಳಗಾದ ವ್ಯಕ್ತಿ ಬಿಪಿಎಲ್ […]

Continue Reading

ವೈದ್ಯರ ದಿನ, ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಿಗೆ ಸನ್ಮಾನ, ಸೇವೆ ಸ್ಮರಿಸಿದ ಡಾ. ದುರ್ಗಾಪ್ರಸಾದ್

ಮಂಗಳೂರು: ವೈದ್ಯರ ದಿನಾಚರಣೆಯ ಅಂಗವಾಗಿ ನಗರದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಕಳೆದ ಏಳು ದಶಕಗಳಿಂದ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ ಎರಡೂ ಸಂಸ್ಥೆಗಳ ವೈದ್ಯರ ಸೇವೆಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು. ಹಿರಿಯ ವೈದ್ಯರಾದ ಡಾ. ಆರ್.ಎಲ್. ಕಾಮತ್, ಡಾ. ಎಸ್.ಆರ್. ನಾಯಕ್, ಡಾ. ಅಶ್ಫಾಕ್, ಡಾ. ಸುರೇಶ್ ಶೆಟ್ಟಿ, ಡಾ. ಶ್ರದ್ಧಾ ಶೆಟ್ಟಿ, ಡಾ. ಪ್ರಿಯಾ […]

Continue Reading

ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ಕಾಲೇಜ್ ಜತೆ ತುಂಬೆ ಗ್ರೂಪ್ ಮಹತ್ವದ ಒಪ್ಪಂದ, ಯುಎಇಯಲ್ಲಿ ಮೊದಲ ಬಾರಿಗೆ ದೀರ್ಘಾಯುಷ್ಯ ವೈದ್ಯಕೀಯ ಶಿಕ್ಷಣ

ಮಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ (ಯುಎಇ) ಮೊದಲ ಬಾರಿಗೆ ದೀರ್ಘಾಯುಷ್ಯ ವೈದ್ಯಕೀಯ (ಲಾಂಗ್‌ಜೆವಿಟಿ ಮೆಡಿಸಿನ್) ಕ್ಷೇತ್ರದಲ್ಲಿ ವ್ಯವಸ್ಥಿತ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ತುಂಬೇ ಗ್ರೂಪ್ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್‌ಜೆವಿಟಿ ಸಾಯಿನ್ಸ್ (ಜಿಸಿಎಲ್‌ಎಸ್) ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ. ಈ ಒಪ್ಪಂದದಡಿ ಗಲ್ಫ್ ಮೆಡಿಕಲ್ ವಿಶ್ವವಿದ್ಯಾಲಯದ ಅಡಿಯಲ್ಲಿ ‘ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಲಾಂಗ್‌ಜೆವಿಟಿ ಮೆಡಿಸಿನ್’ಸ್ಥಾಪನೆ ಆಗಲಿದ್ದು, ದೀರ್ಘಾಯುಷ್ಯ ವೈದ್ಯಕೀಯ, ಆರೋಗ್ಯಕರ ವಯೋವೃದ್ಧತೆ, ತಡೆಗಟ್ಟುವ ಆರೋಗ್ಯ ಸೇವೆ ಹಾಗೂ ನಿಖರ ಆರೋಗ್ಯ ಕ್ಷೇತ್ರಗಳಲ್ಲಿ […]

Continue Reading

ಕುದ್ರೋಳಿ, ಅಳಕೆ, ಡೊಂಗರಕೇರಿಯಲ್ಲಿ ಕಾಮಾಲೆ, ಡೆಂಗೆ ಪ್ರಕರಣ ಪತ್ತೆ, ಆತಂಕ ಬೇಡ: ಡಿಎಚ್ ಒ ಡಾ. ತಿಮ್ಮಯ್ಯ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಮಾಲೆ (ಜಾಂಡಿಸ್) ಹಾಗೂ ಡೆಂಗೆ ಪ್ರಕರಣಗಳು ನಿಧಾನವಾಗಿ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ಪಡುವ ಬದಲು ವೈಯಕ್ತಿಕ ಸ್ವಚ್ಛತೆ, ಸುರಕ್ಷಿತ ಕುಡಿವ ನೀರಿನ ಬಳಕೆ ಹಾಗೂ ಸೊಳ್ಳೆ ನಿಯಂತ್ರಣ ಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಡಿಎಚ್ ಒ ಡಾ. ಎಚ್.ಆರ್. ತಿಮ್ಮಯ್ಯ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಂಗಳೂರಿನ ಕುದ್ರೋಳಿ, ಅಳಕೆ ಹಾಗೂ ಡೊಂಗರಕೇರಿ ಪ್ರದೇಶಗಳಲ್ಲಿ ಜೂನ್ 23 ರಿಂದ ಇದೂವರೆಗೆ 19 ಕಾಮಾಲೆ ರೋಗದ ಪ್ರಕರಣಗಳು […]

Continue Reading