ಕಾರು ತೆರವು ವಿಚಾರ: ವಿಧಾನಸೌಧದಲ್ಲಿ ಡಿಸಿಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಜಿಲ್ಲಾ ಸುದ್ದಿ ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಬೆಂಗಳೂರು: ವಿಧಾನಸಭೆ ಕಲಾಪ ಮುಗಿಸಿ ಹೊರಬಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನು ವಿಧಾನಸೌಧದ ಪಶ್ಚಿಮ ದ್ವಾರದಿಂದ ಪಾರ್ಕಿಂಗ್ ಸ್ಥಳಕ್ಕೆ ಸ್ಥಳಾಂತರಿಸಿದ್ದ ವಿಚಾರ ಸೋಮವಾರ ಕೆಲಕಾಲ ಬಿಗುವಿನ ವಾತಾವರಣಕ್ಕೆ ಕಾರಣವಾಯಿತು. ಕಾರು ಕಾಣದೆ ಕಾಯಬೇಕಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ, ವಿಧಾನಸೌಧದ ಭದ್ರತಾ ಉಸ್ತುವಾರಿ ಡಿಸಿಪಿ ಯೋಗೇಶ್ ಅವರನ್ನು ಸ್ಥಳದಲ್ಲೇ ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.

<

ವಿಧಾನಸಭೆ ಕಲಾಪ ಮುಗಿದ ಬಳಿಕ ಸಿದ್ದರಾಮಯ್ಯ ಅವರು ಕೆಂಗಲ್ ಹನುಮಂತಯ್ಯ ಗೇಟ್ ಎಂದೇ ಕರೆಯಲಾಗುವ ವಿಧಾನಸೌಧದ ಪಶ್ಚಿಮ ದ್ವಾರದ ಮೆಟ್ಟಿಲುಗಳ ಮೂಲಕ ಹೊರಬಂದರು. ಆದರೆ ಅವರು ತೆರಳಬೇಕಿದ್ದ ಕಾರು ಸ್ಥಳದಲ್ಲಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಡಿಸಿಪಿ ಯೋಗೇಶ್ ಅವರ ಸೂಚನೆಯ ಮೇರೆಗೆ ಕಾರನ್ನು ಪಾರ್ಕಿಂಗ್ ಸ್ಥಳಕ್ಕೆ ಕಳುಹಿಸಲಾಗಿದೆ ಎಂಬುದು ತಿಳಿದುಬಂದಿತು.

ಕಾರಿಗಾಗಿ ಕೆಲಕಾಲ ಕಾಯಬೇಕಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಚಾಲಕನನ್ನು ಕರೆದು ಕಾರು ಬರಲು ವಿಳಂಬವಾಗಿದ್ದೇಕೆ ಎಂದು ಪ್ರಶ್ನಿಸಿದರು. ಪಾರ್ಕಿಂಗ್ ಸ್ಥಳಕ್ಕೆ ಕಾರನ್ನು ಕಳುಹಿಸಿರುವುದಕ್ಕೆ ಭದ್ರತಾ ಅಧಿಕಾರಿಗಳ ಸೂಚನೆಯೇ ಕಾರಣ ಎಂದು ಚಾಲಕ ತಿಳಿಸಿದ ಬಳಿಕ, ಅಲ್ಲೇ ಇದ್ದ ಡಿಸಿಪಿ ಯೋಗೇಶ್ ಅವರನ್ನು ಸಿದ್ದರಾಮಯ್ಯ ಹತ್ತಿರ ಕರೆದರು.

‘ನನ್ನ ಕಾರನ್ನು ಯಾಕೆ ತೆಗೆಸಿದೆ?’

ಸಿಬ್ಬಂದಿಯ ಸಮ್ಮುಖದಲ್ಲೇ ಡಿಸಿಪಿ ಯೋಗೇಶ್ ಅವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ,‘ನನ್ನ ಕಾರನ್ನು ಇಲ್ಲಿಂದ ಯಾಕೆ ತೆಗೆಸಿದೆ?’ ಎಂದು ಕೇಳಿದರು. ಜನಪ್ರತಿನಿಧಿಗಳ ವಾಹನಗಳ ನಿರ್ವಹಣೆ ಹಾಗೂ ಅಧಿಕಾರಿಗಳ ನಡವಳಿಕೆ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧಕ್ಕೆ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಶಾಸಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ದೂರುಗಳು ಬಂದಿವೆ ಎಂದು ಸಿದ್ದರಾಮಯ್ಯ ಹೇಳಿದರು.‘ನಿನ್ನ ಮೇಲೆ ಆರೋಪಗಳಿವೆ. ಜನಪ್ರತಿನಿಧಿಗಳ ಜೊತೆ ನಡೆದುಕೊಳ್ಳುವ ರೀತಿ ಇದಲ್ಲ. ಇನ್ನು ಮುಂದೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು’ಎಂದು ಅವರು ಡಿಸಿಪಿಗೆ ಸೂಚಿಸಿದರು.

ಈ ವೇಳೆ ಕೆಲಕಾಲ ಪಶ್ಚಿಮ ದ್ವಾರದ ಬಳಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಮಾಯಿಸಿದ್ದರು. ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ನಂತರ ಪಾರ್ಕಿಂಗ್ ಸ್ಥಳದಿಂದ ಕಾರು ಪಶ್ಚಿಮ ದ್ವಾರಕ್ಕೆ ಆಗಮಿಸಿದ ಬಳಿಕ ಸಿದ್ದರಾಮಯ್ಯ ಅವರು ಕಾರಿನಲ್ಲಿ ತಮ್ಮ ಕಾವೇರಿ ನಿವಾಸದತ್ತ ತೆರಳಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh

Leave a Reply

Your email address will not be published. Required fields are marked *