ವೇಟ್‌ಲಿಫ್ಟಿಂಗ್‌ನಲ್ಲಿ ಆಳ್ವಾಸ್‌ಗೆ ಅವಳಿ ಸಮಗ್ರ ಪ್ರಶಸ್ತಿ, ಹುಡುಗರ ವಿಭಾಗದಲ್ಲಿ 5 ಚಿನ್ನ; ಹುಡುಗಿಯರ ವಿಭಾಗದಲ್ಲಿ 5 ಚಿನ್ನ, ಬೆಳ್ಳಿ–ಕಂಚಿನ ಪದಕಗಳ ಸಾಧನೆ

ಕ್ರೀಡೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಮಂಗಳೂರಿನ ಬದ್ರಿಯಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ಹುಡುಗರ ಹಾಗೂ ಹುಡುಗಿಯರ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಗೆದ್ದು ಅವಳಿ ಗೌರವಕ್ಕೆ ಪಾತ್ರವಾಗಿದೆ.

<

ಹುಡುಗರ ವಿಭಾಗದಲ್ಲಿ ಆಳ್ವಾಸ್ ತಂಡದ ಕ್ರೀಡಾಪಟುಗಳು ಐದು ವಿಭಾಗಗಳಲ್ಲೂ ಪ್ರಥಮ ಸ್ಥಾನ ಪಡೆದು ಐದು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. 60 ಕೆ.ಜಿ. ವಿಭಾಗದಲ್ಲಿ ಸಂತೋಷ್, 71 ಕೆ.ಜಿ.ಯಲ್ಲಿ ಪ್ರಫುಲ್, 79 ಕೆ.ಜಿ.ಯಲ್ಲಿ ಪ್ರಜ್ವಲ್, 88 ಕೆ.ಜಿ.ಯಲ್ಲಿ ಶ್ರೇಯಸ್ ಹಾಗೂ 110 ಕೆ.ಜಿ. ವಿಭಾಗದಲ್ಲಿ ಜೇಷ್ಠ ಪ್ರಥಮ ಸ್ಥಾನ ಗಳಿಸಿದರು.

ಹುಡುಗಿಯರ ವಿಭಾಗದಲ್ಲಿಯೂ ಆಳ್ವಾಸ್ ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದರು. 48 ಕೆ.ಜಿ. ವಿಭಾಗದಲ್ಲಿ ಸಂಜನಾ, 53 ಕೆ.ಜಿ.ಯಲ್ಲಿ ಸೌಮ್ಯ, 58 ಕೆ.ಜಿ.ಯಲ್ಲಿ ಮೈತ್ರಿ, 63 ಕೆ.ಜಿ.ಯಲ್ಲಿ ಅಪೂರ್ವ ಹಾಗೂ 77 ಕೆ.ಜಿ.ಯಲ್ಲಿ ಪಾವನಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗೆದ್ದರು.

69 ಕೆ.ಜಿ. ವಿಭಾಗದಲ್ಲಿ ಲಹರಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ, 86 ಕೆ.ಜಿ. ವಿಭಾಗದಲ್ಲಿ ಅಶ್ವಿನಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಹಾಗೂ 86 ಕೆ.ಜಿ. ಮೇಲ್ಪಟ್ಟ ವಿಭಾಗದಲ್ಲಿ ಸಾಧನ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದರು.

ಈ ಮೂಲಕ ಹುಡುಗಿಯರ ವಿಭಾಗದಲ್ಲಿ ಐದು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚು ಸೇರಿದಂತೆ ಒಟ್ಟು ಏಳು ಪದಕಗಳನ್ನು ಗೆದ್ದ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಎರಡೂ ವಿಭಾಗಗಳಲ್ಲೂ ಸಮಗ್ರ ಪ್ರಶಸ್ತಿ ಗೆಲ್ಲುವ ಮೂಲಕ ಆಳ್ವಾಸ್ ಕ್ರೀಡಾಪಟುಗಳು ಅವಳಿ ಪ್ರಶಸ್ತಿಯ ಸಾಧನೆ ಮಾಡಿದರು.

ವಿಜೇತ ಕ್ರೀಡಾಪಟುಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *