ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸೇರಿದಂತೆ ರಾಜ್ಯದಾದ್ಯಂತ ಪರಿವಾಹನ್’ ಮತ್ತು ‘ಸಾರಥಿ’ ಸರ್ವರ್‌ಗಳ ಪದೇ ಪದೇ ಡೌನ್ ಆಗುವುದರಿಂದ ಸಾರಿಗೆ ಇಲಾಖೆಗೆ ಸಂಬಂಧಿಸಿದ ಆರ್‌ಟಿಒ ಕೆಲಸಗಳು ಮತ್ತು ಚಾಲನಾ ಪರವಾನಗಿ ಕಾರ್ಯಗಳಿಗೆ ಸಾರ್ವಜನಿಕರು ಪರದಾಡುವಂತಾಗಿದೆ.
ಸಾರಿಗೆ ಇಲಾಖೆಯ ಸರ್ವರ್ ಡೌನ್ ಕಣ್ಣಾಮುಚ್ಚಾಲೆ ಕಳೆದ ಗುರುವಾರದಿಂದಲೇ ಶುರುವಾಗಿದೆ ಎಂಬ ಮಾಹಿತಿ ಇದೆ. ಗಂಟೆಗೊಮ್ಮೆ ಸರ್ವರ್ ಡೌನ್ ಆಗುತ್ತಿರುವುದರಿಂದ ಸಾರಿಗೆ ಇಲಾಖೆಯ ಕೆಲಸ ಕಾರ್ಯಗಳಿಗೆ ಬರುವ ಜನರು ಹಿಡಿಶಾಪ ಹಾಕಿ ವಾಪಸ್ ಆಗುವಂತಹ ಸ್ಥಿತಿ ನಿರ್ಮಾಣ ಆಗಿದೆ.
ರಾಷ್ಟ್ರಮಟ್ಟದ ಪರಿವಾಹನ್ (Parivahan Sewa) ವೆಬ್‌ಸೈಟ್‌ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಗಳಿಂದಾಗಿ ಕಲಿಕಾ ಚಾಲನಾ ಪರವಾನಗಿ ಪಡೆಯುವುದು ಸೇರಿದಂತೆ ಯಾವುದೇ ಕೆಸಲಗಳು ಆಗದೇ ಇರುವಂತಹ ಸ್ಥಿತಿ ಬಂದಿದೆ. ರಾಜ್ಯದ ಎಲ್ಲ ಕಡೆಯ ಸುಮಾರು 71 ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಗುರುವಾರದಿಂದ ಸೇವೆಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಬೆಳಿಗ್ಗೆ 10 ಗಂಟೆಗೆ ಸುಸ್ಥಿತಿಯಲ್ಲಿ ಇರುವ ಸಾರಿಗೆ ಸರ್ವರ್ ನಂತರ 1 ತಾಸಿನ ನಂತರ ಮತ್ತೆ ಮಾಯಾ ಆಗುತ್ತದೆ. ಆನ್ ಲೈನ್ ಸೇವಾ ಕೇಂದ್ರಗಳಲ್ಲಿ ಹಿಡಿ ಶಾಪ ಹಾಕುತ್ತಾರೆ. ವೆಬ್‌ಸೈಟ್ ನಲ್ಲಿ ತಾಂತ್ರಿಕ ದೋಷ ಇದೆ, ಪುನ್ ಮತ್ತೆ ವೆಬ್ ಸೈಟ್ ಕಾರ್ಯಾರಂಭಿಸಲಿದೆ ಎಂಬ ಸಂದೇಶಗಳು ಪ್ರಕಟ ಆಗುತ್ತಿವೆ. ಆದರೆ ಸಾರಿಗೆ ಕೆಲಸಗಳು ಮಾತ್ರ ಬಾಕಿ ಆಗಿಯೇ ಉಳಿಯುತ್ತಿವೆ.
ಆರ್‌ಟಿಒ ಕಚೇರಿಗಳು ಪ್ರಕಟಣೆ ನೀಡದಿರುವುದರಿಂದ ಮಾಹಿತಿ ಇಲ್ಲದೆ ನೂರಾರು ಜನರು ಸಾರಿಗೆ ಕಚೇರಿಗಳಿಗೆ ಬಂದು ಹೋಗುತ್ತಿದ್ದಾರೆ. ಈ ಸ್ಥಿತಿ ಗುರುವಾರವೂ ಮುಂದುವರೆಯು ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಅಡಿಯ ಪರಿವಾಹನ್ ಸೇವಾ ಮತ್ತು ಸಾರಥಿ ವೆಬ್‌ಸೈಟ್‌ಗಳ ಅಡಿಯಲ್ಲಿ ಸಾರಿಗೆ ಸೇವೆಗಳನ್ನು ತರಲಾಗಿದೆ. ಕೆಲ ಸೇವೆಗಳನ್ನು ಆನ್‌ಲೈನ್ ಮೂಲಕ ಮಾತ್ರ ಪಡೆದುಕೊಳ್ಳಬೇಕು. ಸೇವೆ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಪಡೆದರೂ ಶುಲ್ಕ ಪಾವತಿ ಮಾತ್ರ ವೆಬ್‌ಸೈಟ್ ಮೂಲಕ ಆಗಬೇಕು. ಸರ್ವರ್ ಇಲ್ಲದಿರುವುದರಿಂದ ಯಾವುದೇ ಸೇವೆ ಶೂನ್ಯ ಆಗುತ್ತಿವೆ.
ಎಲ್‌ಎಲ್‌ಆರ್, ಡಿಎಲ್, ವಾಹನಗಳ ನೋಂದಣಿ, ಮರು ನೋಂದಣಿ, ಪ್ರಮಾಣ ಪತ್ರಗಳು ಸೇರಿದಂತೆ ವಿವಿಧ ವಿವಿಧ ಸೇವೆಗಳಿಗಾಗಿ ಪ್ರತಿದಿನ ನೂರಾರು ಅರ್ಜಿಗಳು ಆರ್‌ಟಿಒ ಕಚೇರಿಗಳಿಗೆ ಸಲ್ಲಿಕೆ ಆಗುತ್ತದೆ. ಜಿಲ್ಲಾ ಕೇಂದ್ರಗಳ ಕಚೇರಿಗಳಲ್ಲಿ ಪ್ರತಿದಿನವೂ ನೂರಾರು ಅರ್ಜಿಗಳು ಸಲ್ಲಿಕೆ ಆಗುತ್ತವೆ, ಡಿಎಲ್ ಸೇರಿದಂತೆ ಇನ್ನಿತರ ಕೆಲಸಗಳಿಗೆ ಬರುವ ಜನರಿಗೆ ಆನ್ ಲೈನ್ ಕೇಂದ್ರಗಲ್ಲಿ ಸರ್ವರ್ ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ. ಈಗ ಬರುತ್ತೇ, ತಾಸು ಬಿಟ್ಟು ಬರುತ್ತೇ ಎಂದು ಹೇಳುವ ಸಬೂಬು ಸಾಮಾನ್ಯ ಆಗಿದೆ.
ಕಳೆದ ಮೂರು ದಿನಗಳಿಂದ ಸರ್ವರ್ ಸಮಸ್ಯೆಯಿಂದಾಗಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಡಿಎಲ್ ಸೇರಿದಂತೆ ಯಾವುದೇ ಕೆಲಸಗಳು ಆಗಬೇಕಾದರೇ ಆನ್ ಲೈನ್ ಮೂಲಕವೇ ಆಗಬೇಕು, ಆದರೆ ಸರ್ವರ್ ಸಮಸ್ಯೆಯಿಂದಾಗಿ ತುರ್ತಾಗಿ ಆಗಬೇಕಿರುವ ಯಾವುದೇ ಕೆಲಸಗಳನ್ನುಮಾಡುವುದು ಕಷ್ಟ ಆಗುತ್ತಿದೆ. ನಾವೂ ಕೂಡ ಯಾವಾಗ ಸರ್ವರ್ ಬರುತ್ತೇ ಎಂದು ಕಾಯುತ್ತಾ ಕುಳಿತೀದ್ದೇವೆ ಎಂದು ಆನ್ ಲೈನ್ ಸೇವಾ ಕೇಂದ್ರಗಳ ಸಿಬ್ಬಂದಿ ಅಳಲು ತೋಡಿಕೊಂಡರು.
ಜನರಿಗೆ ಸಮಸ್ಯೆ ಆಗಿಲ್ಲ: ಆರ್ ಟಿಒ
ಸಾರಿಗೆ ಇಲಾಖೆಯ ಸರ್ವರ್ ಸಮಸ್ಯೆ ತಾತ್ಕಾಲಿಕವಾಗಿ ಕೆಲವೊಮ್ಮೆ ಡೌನ್ ಆಗುತ್ತೆ, ಹಾಗೆಯೇ ಮತ್ತೇ ಕಾರ್ಯಾರಂಭ ಆಗುತ್ತೆ, ಸರ್ವರ್ ಕೆಲ ಸಂದರ್ಭಗಳಲ್ಲಿ ಡೌನ್ ಆಗಿದ್ದಾಗ ಮತ್ತೇ ಸರಿ ಆಗುತ್ತೆ, ಅಂತಹ ಯಾವುದೇ ಸಮಸ್ಯೆಗಳು ಆಗಿಲ್ಲ, ಮೂರು ದಿನಗಳಿಂದ ಆಗಾಗ್ಗೆ ಕೈಕೊಡುತ್ತಿರುವ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದ್ದು, ಬುಧವಾರ ಎಲ್ಲವೂ ಸರಿ ಆಗುವ ನಿರೀಕ್ಷೆ ಇದೆ ಎಂದು ಮಂಗಳೂರು ಸಾರಿಗೆ ಪ್ರಾದೇಶಿಕ ಕಚೇರಿಯ ಆರ್ ಟಿಒ ಮುರುಗೇಂದ್ರ ಶಿರೋಳ್ಕರ್ ತಿಳಿಸಿದರು.
What do you feel about this post?
Like
Love
Happy
Haha
Sad
