ಮಾಣಿಲ ಶ್ರೀಧಾಮದಲ್ಲಿ 48 ದಿನಗಳ ವರಮಹಾಲಕ್ಷ್ಮೀ ವ್ರತಾಚರಣೆಗೆ ಸಿದ್ಧತೆ: ಮೋಹನದಾಸ ಪರಮಹಂಸ ಸ್ವಾಮೀಜಿ

ಜಿಲ್ಲಾ ಸುದ್ದಿ ಪುತ್ತೂರು ಮಹಾನಗರ
<

Spread the love

ಮಂಗಳೂರು: ಮಾಣಿಲ ಶ್ರೀಧಾಮ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯಲಿರುವ 27ನೇ ವರ್ಷದ 48 ದಿನಗಳ ವರಮಹಾಲಕ್ಷ್ಮೀ ವ್ರತಾಚರಣೆಯ ಪೂರ್ವಭಾವಿ ಸಭೆ ಭಾನುವಾರ ನಡೆಯಿತು.

<

ಈ ಸಂದರ್ಭದಲ್ಲಿ ಅನುಗ್ರಹ ಸಂದೇಶ ನೀಡಿದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಆರಾಧನೆ ಮತ್ತು ಆಧ್ಯಾತ್ಮಿಕ ಚಿಂತನೆಯ ಮೂಲಕ ಆತ್ಮೋನ್ನತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇಂದಿನ ಸಮಾಜದಲ್ಲಿ ಮಾದಕ ವಸ್ತುಗಳ ಸೇವನೆಯ ಹೊರತಾಗಿಯೂ ಜನರು ದಾರಿ ತಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆಧ್ಯಾತ್ಮವೇ ಇದಕ್ಕೆ ಶಾಶ್ವತ ಪರಿಹಾರವಾಗಿದ್ದು, ಭಜನೆ, ಧ್ಯಾನ, ಯಾಗ, ಯಜ್ಞ ಹಾಗೂ ಸಂಕೀರ್ತನೆಗಳಿಂದ ಮನಸ್ಸಿಗೆ ನೆಮ್ಮದಿ ಮತ್ತು ಜೀವನಕ್ಕೆ ಸಕಾರಾತ್ಮಕ ದಿಕ್ಕು ದೊರೆಯುತ್ತದೆ ಎಂದು ತಿಳಿಸಿದರು.

ದೇವಾಲಯದ ಚಟುವಟಿಕೆಗಳು ಮತ್ತು ಮಾನವನ ಬದುಕಿನ ನಡುವಿನ ಹೊಂದಾಣಿಕೆ ಅಗತ್ಯವಾಗಿದ್ದು, ಭಕ್ತರ ಹೃದಯದಲ್ಲಿ ನೆಲೆಸಿರುವ ಮಹಾಲಕ್ಷ್ಮಿಯ ಆರಾಧನೆಯಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಎಂದು ಅವರು ಹೇಳಿದರು.

48 ದಿನಗಳ ವ್ರತಾಚರಣೆ ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ಸಮಿತಿ ರಚಿಸಲಾಯಿತು.

ಸಭೆಯಲ್ಲಿ ಕೆಯ್ಯೂರು ನಾರಾಯಣ ಭಟ್, ಶ್ರೀಧರ ಬಾಳೆಕಲ್ಲು, ದೇವಪ್ಪ ಕುಲಾಲ್, ವನಿತಾ ಶೆಟ್ಟಿ, ರೇವತಿ ಪೆರ್ನೆ, ಕಲ್ಲಟೆ ವೆಂಕಟ್ರಮಣ ಭಟ್, ಹರೀಶ್ ಬೊಟ್ಟಾಡಿ, ಮುರಳೀ ಮಧೂರು, ನವೀನ್ ಪುತ್ತಿಗೆ, ರಮ್ಯಾ ಎಸ್., ಹೇಮಲತಾ ಶರ್ಮ, ಮಚ್ಚೇಂದ್ರ ಸಾಲ್ಯಾನ್, ಸತೀಶ್ ಪುಣ್ಚಿತ್ತಾಯ ಪೆರ್ಲ, ರಮೇಶ್, ಬಾಲಕೃಷ್ಣ ಶೆಟ್ಟಿ, ವೇಣುಗೋಪಾಲ ಶೇಣಿ, ನವೀನ್ ಕುಲಾಲ್ ಹಾಗೂ ಸುರೇಶ್ ಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದರು.

ಶ್ರೇಯಾ ಮತ್ತು ಶಾರ್ವಿ ಪ್ರಾರ್ಥನಾ ಗೀತೆ ಹಾಡಿದರು. ಟ್ರಸ್ಟಿ ದೇವಪ್ಪ ಕುಲಾಲ್ ಸ್ವಾಗತಿಸಿದರು. ಮಚ್ಚೇಂದ್ರ ಸಾಲ್ಯಾನ್ ವಂದಿಸಿದರು. ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *