ಕೆಸಿಇಟಿ ಫಲಿತಾಂಶ, ಶಕ್ತಿ ಕಾಲೇಜಿನ ಬಿಪಿಒ ವಿಭಾಗದಲ್ಲಿ ಲಿಖಿತ್ ಗೌಡಗೆ 221ನೇ ರ‍್ಯಾಂಕ್

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೆಸಿಇಟಿ-2026 ಪರೀಕ್ಷೆಯಲ್ಲಿ ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿ ಲಿಖಿತ್ ಗೌಡ ಎಸ್.ಡಿ. ಅವರು ಬಿಪಿಒ ವಿಭಾಗದಲ್ಲಿ 221ನೇ ರ‍್ಯಾಂಕ್ ಗಳಿಸಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ 2367ನೇ ರ‍್ಯಾಂಕ್ ಪಡೆದಿದ್ದಾರೆ.

ಪವನ್ ಮಲಗಿ ನರ್ಸಿಂಗ್ ವಿಭಾಗದಲ್ಲಿ 1428ನೇ ಹಾಗೂ ವೆಟರಿನರಿ ಸೈನ್ಸ್ ವಿಭಾಗದಲ್ಲಿ 1424ನೇ ರ‍್ಯಾಂಕ್ ಗಳಿಸಿದ್ದಾರೆ. ಸುಹಾಸ್ ಅವರು ನರ್ಸಿಂಗ್‌ನಲ್ಲಿ 1661ನೇ, ನ್ಯಾಚುರೋಪತಿ ಮತ್ತು ಯೋಗ ವಿಭಾಗದಲ್ಲಿ 1153ನೇ ಹಾಗೂ ವೆಟರಿನರಿ ಸೈನ್ಸ್‌ನಲ್ಲಿ 165ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಚಿಂತನ ಪಿ.ಆರ್. ಅವರು ಬಿಪಿಟಿಯಲ್ಲಿ 1586ನೇ, ಬಿಪಿಒದಲ್ಲಿ 1087ನೇ, ಡಿ-ಫಾರ್ಮಾ ಹಾಗೂ ಬಿ.ಎಸ್‌ಸಿ-ಎಹೆಚ್‌ಎಸ್ ವಿಭಾಗಗಳಲ್ಲಿ 1586ನೇ ರ‍್ಯಾಂಕ್ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸ್ಥಾಪಕ ಹಾಗೂ ಆಡಳಿತಾಧಿಕಾರಿ ಡಾ. ಕೆ.ಸಿ. ನಾಯಕ್ ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಯಶಸ್ಸಿಗೆ ಶ್ರಮಿಸಿದ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗಕ್ಕೂ ಶುಭ ಕೋರಿದ್ದಾರೆ.

ಈ ಸಂದರ್ಭದಲ್ಲಿ ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ಸುರೇಖಾ ಆರ್. ಭಟ್ ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *