ಮಂಗಳೂರಿನಲ್ಲಿ ಎರಡು ದಿನ ರಾಜ್ಯ ಮಟ್ಟದ ಗೇರು ಮೇಳ, ಸಾಧಕರಿಗೆ ಸನ್ಮಾನ, ರೈತರಿಗೆ ಉಚಿತ ಕಣ್ಣಿನ ತಪಾಸಣೆ: ಮಮತಾ ಗಟ್ಟಿ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಕೃಷಿ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ಇದೇ 17, 18,ರಂದು ಮಂಗಳೂರು ಕದ್ರಿ ಉದ್ಯಾನದಲ್ಲಿ ನಡೆಯಲಿರುವ ಎರಡು ದಿನಗಳ ಗೇರು ಮೇಳದ ಉದ್ಘಾಟನೆ ಮೇ17ರಂದು ಬೆಳಿಗ್ಗೆ 11ಗಂಟೆಗೆ ಸ್ಪೀಕರ್ ಯು. ಟಿ. ಖಾದರ್ ಫರೀದ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ಈಶ್ವರ್ ಬಿ. ಖಂಡ್ರೆ ಉದ್ಘಾಟಿಸಲಿದ್ದಾರೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

<

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿ ದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ , ಶಾಸಕರು,ವಿಧಾನ ಪರಿಷತ್ ಸದಸ್ಯರು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಹಾಗೂ ನಿಗಮ ಮಂಡಳಿಯ ಅಧ್ಯಕ್ಷ ರು ಮುಖ್ಯ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ.ಮಾಜಿ ಸಚಿವರು ಶಾಸಕರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೇ.17,18,ರಂದು ಗೋಡಂಬಿ ಕೃಷಿಯ ಬಗ್ಗೆ ತಾಂತ್ರಿಕ ಕಾರ್ಯಾಗಾರ:- ಗೋಡಂಬಿ ಕೃಷಿಯ ಬಗ್ಗೆತಾಂತ್ರಿಕ ಕಾರ್ಯಾಗಾರ ಮಂಗಳೂರು ಕದ್ರಿ ಉದ್ಯಾನವನದಲ್ಲಿ ನಡೆಯಲಿದೆ.ಡಾ. ಜೆ. ದಿನಕರ ಈಅಡಿಗ,ಐಸಿಎಆರ್ ನಿರ್ದೇಶಕ – ಡಿಸಿಆರ್ ಪುತ್ತೂರುಮತ್ತು ಪ್ರಧಾನ ವಿಜ್ಞಾನಿ (ತೋಟಗಾರಿಕೆ) ಅವರು ಆಧುನಿಕ ತಂತ್ರಜ್ಞಾನಗಳು ಗೋಡಂಬಿ ಕೃಷಿಯಲ್ಲಿ ಎಂಬ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

ಡಾ. ವೀಣಾ ಜಿ.ಎಲ್.ಗೌಡ ಹಿರಿಯ ವಿಜ್ಞಾನಿ (ತೋಟಗಾರಿಕೆ)ಐಸಿಎಆರ್ – ಡಿಸಿಆರ್ ಪುತ್ತೂರು ಇವರು ಗೋಡಂಬಿ ಸಂಸ್ಕರಣೆ ಮತ್ತು ಮೌಲ್ಯ ಸೇರ್ಪಡೆಯ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.ಪ್ರಗತಿಪರ ರೈತ ಸುಭಾಸ್ ರೈ ಗೋಡಂಬಿ ಕೃಷಿಯ ಬಗ್ಗೆ ವೈಯಕ್ತಿಕ ಅನುಭವ ಹಂಚಿಕೊಳ್ಳಲಿದ್ದಾರೆ. ವಿಶ್ವಕೇಶವ ಅವರ ರೈತ ಮತ್ತು ಗೋಡಂಬಿ ಸಂಸ್ಕರಣೆ ಗೋಡಂಬಿ ಮತ್ತು ಅಡಿಕೆ ಸಂಸ್ಕರಣೆ ಯತ್ತ ನನ್ನ ಪ್ರಯಾಣ ಎಂಬ ಬಗ್ಗೆ ಅನುಭವ ವಿನಿಮಯ ನಡೆಯಲಿದೆ ಎಂದರು.

ಮೇ 18 ರಂದು ತಾಂತ್ರಿಕ ಅಧಿವೇಶನದಲ್ಲಿ ಪ್ರಕಾಶ್ ಕಲ್ಭಾವಿ ಮಾಜಿ ಅಧ್ಯಕ್ಷರು, ಕೆಸಿಎಂಎ ಮತ್ತುಗೋಡಂಬಿ ಸಂಸ್ಕಾರಕ ಗೋಡಂಬಿ ಕೃಷಿ “ಆತ್ಮ ನಿರ್ಭರ್-2035” ವಿಷಯ ಮಂಡನೆ ಮಾಡಲಿದ್ದಾರೆ. ಡಾ. ವೆಂಕಟೇಶ್ ಎನ್. ಹುಬ್ಬಳ್ಳಿ ಮಾಜಿ ನಿರ್ದೇಶಕ, ಗೋಡಂಬಿ ಮತ್ತು ಕೋಕೊ ನಿರ್ದೇಶನಾಲಯ ಅಭಿವೃದ್ಧಿ. ಕೊಚ್ಚಿ ಭಾರತೀಯ ಗೋಡಂಬಿ ವಲಯ ಮತ್ತು ಡಾ. ಸಿ. ಸುನಿಲ್ ಸಂಯೋಜಕ ಗೋಡಂಬಿ ತಂತ್ರಜ್ಞಾನ ಕೇಂದ್ರ ಶಿವಮೊಗ್ಗ ಇವರು
ಶಿವಮೊಗ್ಗ ವಿಶ್ವವಿದ್ಯಾಲಯದ ಗೋಡಂಬಿ ಕುರಿತು ಕೊಡುಗೆಗಳ ಕುರಿತು ಮಾಹಿತಿ ನೀಡಲಿದ್ದಾರೆ ಎಂದರು.

ದಾದಾಸಾಹೇಬ್ ದೇಸಾಯಿ ಉಪ ನಿರ್ದೇಶಕರು,ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ. ಕೊಚ್ಚಿ ಇವರು ಭಾರತ ಸರ್ಕಾರದಿಂದ ಗೋಡಂಬಿ ಬೆಳೆಗೆ ಸಂಬಂಧಿಸಿದಂತೆ ಉಪಕ್ರಮಗಳು, ಯೋಜನೆಗಳು, ನರ್ಸರಿಗಳ ಮಾನ್ಯತೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ,ಚಿತ್ರಕಲಾ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಗೇರು ಮೇಳದಲ್ಲಿ ನಿಗಮದ ವ್ಯಾಪ್ತಿಯಲ್ಲಿ ಗೇರು ಬೆಳೆಯ ಮೂಲಕ ಮಾಡಿದ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಗೇರು ಮೇಳದ ವಿಶೇಷ ಆಕರ್ಷಣೆಯಾಗಿ ಮೇ.17 ರಂದು ಸಂಜೆ 7ಗಂಟೆಗೆ ದೇವದಾಸ್ ಕಾಪಿಕಾಡ್ ತಂಡದವರಿಂದ ತುಳು ನಾಟಕ ಮನಸ್ಕಾರ ಮಾಸ್ಟ್ರೇ ಪ್ರದರ್ಶನ ಗೊಳ್ಳಲಿದೆ ಹಾಗೂ ಇಂಚರ ಮೆಲೋಡೀಸ್ ತಂಡದಿಂದ ಮೇ‌18ರಂದು 2 ಗಂಟೆಗೆ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.ರಾಜ್ಯ ಮಟ್ಟದ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ರೈತರಿಗೆ ಉಚಿತ ಕಣ್ಣಿನ ತಪಾಸಣೆ ಕೂಡಾ ನಡೆಯಲಿದೆ. ಸಾರ್ವಜನಿಕರು ಮೇಳದ ಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಗೇರು ಉತ್ಪನ್ನ ಗಳ ಮೌಲ್ಯ ವರ್ಧನೆ ತಜ್ಞ ರಿಂದ ಮಾಹಿತಿ ಕಾರ್ಯಾಗಾರ ,ಗೇರು ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ , ರೈತರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಅವಕಾಶ 70 ಕ್ಕೂ ಹೆಚ್ಚು ಮಾರಾಟ ಮಳಿಗೆಗಳು (ಉಚಿತ ಪ್ರವೇಶ ),ಸಾಂಸ್ಕೃತಿಕ ಕಾರ್ಯಕ್ರಮಗಳು ಚಿತ್ರಕಲಾ, ರಂಗೋಲಿ ಹಾಗೂ ಆನ್ ಲೈನ್ ಭಾಷಣ ಸ್ಪರ್ಧೆ ,ಕಾರ್ಯಕ್ರಮ ದಲ್ಲಿ ಭಾಗವಹಿಸಿದವರಿಗೆ ಗೇರು ಹಣ್ಣಿನ ಜ್ಯೂಸ್ (ಉಚಿತ), ಮನೆಗೊಂದು ಗೇರು ಕಾರ್ಯಕ್ರಮ ಗೇರು ಕೃಷಿ ಸಾಧಕರಿಗೆ ಸನ್ಮಾನ ನಡೆಯಲಿದ್ದು ಉಚಿತ ಪ್ರವೇಶ ಇದೆ ಎಂದರು.

ಗೇರು ಕೃಷಿ ಸಾಧಕರಿಗೆ ಸನ್ಮಾನ

ಗೇರು ಕೃಷಿಯಲ್ಲಿ ಸಾಧನೆ ಮಾಡಿದ ಪ್ರಶಸ್ತಿ ವಿಜೇತ ರೈತರು ಕಡಮಜಲು ಸುಭಾಷ್ ರೈ,ವಿಶ್ವ ಕೇಶವ,ಶ್ರೀಕಾಂತ್ ಪೂಜಾರಿ, ಈಶ್ವರ್ ನಾಯ್ಕ್,ಅನಂತ ಸೀತಾರಾಮ್ ಭಂಡಾರಿ,ಅಪ್ಸಲಿ ಸುರತ್ಕಲ್,ಪ್ರಕಾಶ್ ಬಂಟ್ವಾಳ್,ಸುಜಾತ ರೈ,ಶ್ರೀಮತಿ ವಿಲ್ಮಾ ಉಳ್ಳಾಲ,ಪ್ರಜ್ಞಾ ಕುಮಾರ್ ಕಡಬ,ದಯಾನಂದ ಭಟ್,ವೇಲೆ ರೀಯನ್ ಡಿ ಸೋಜಾ ಬೆಳುವಾಯಿ,ಹಾಗೂ ಕ್ಯಾನಟ್ ಅವರನ್ಬು ಸನ್ಮಾನಿಸಲಾಗುವುದು ಎಂದು ಮಮತಾ ಗಟ್ಟಿ ತಿಳಿಸಿದರು.

Leave a Reply

Your email address will not be published. Required fields are marked *