ಕದ್ರಿ ಉದ್ಯಾನದಲ್ಲಿ ತರಹೇವಾರಿ ಮಾವು, ಮೇಳಕ್ಕೆ ಚಾಲನೆ, ಗ್ರಾಹಕರಿಗೆ ಸಿಗಲಿದೆ ತಾಜಾ ಹಣ್ಣು

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ

Spread the love

ಮಂಗಳೂರು: ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘದ ವತಿಯಿಂದ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಮಾಡುವ ಉದ್ದೇಶದಿಂದ ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಮಾವು ಮೇಳವನ್ನು ಗುರುವಾರ ಉದ್ಘಾಟನೆ ಮಾಡಲಾಯಿತು.

ಮೇಳವು ಮೇ 31ರವರೆಗೆ ನಡೆಯಲಿದ್ದು, ಗ್ರಾಹಕರು ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣಗಳ ರುಚಿಯನ್ನು ಸವಿಯುವುದಕ್ಕೆ ಮಾವು ಮೇಳವು ಸಹಕಾರಿ ಆಗಿದೆ. ತರಹೇವಾರಿ ಮಾವಿನ ಹಣ್ಣುಗಳ ಘಮಲು ಮೇಳದ ಕಳೆ ಕಟ್ಟಿದೆ.

ಮೇಳವನ್ನು ಕದ್ರಿ ಉದ್ಯಾನ ಸಮಿತಿಯ ಸದಸ್ಯ ಬಿ. ಜಗನ್ನಾಥ ಗಾಂಭೀರ್ ಅವರು ಉದ್ಘಾಟನೆ ಮಾಡಿದರು.

ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರವೀಣ್ ಕೆ. ಅವರು ಮಾತನಾಡಿ, ಮೇಳದ ಮೂಲಕ ಮಂಗಳೂರಿನ ಜನತೆಗೆ ನೈಸರ್ಗಿಕವಾಗಿ ಮಾಗಿಸಿದ ಗುಣಮಟ್ಟದ ಹಣ್ಣುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸುವ ಉದ್ದೇಶ ಹೊಂದಲಾಗಿದೆ. ಮೇಳದಲ್ಲಿ 25 ಕ್ಕೂ ಅಧಿಕ ಬೆಳೆಗಾರರಿಗೆ ಮಾವು ಮಾರಾಟಕ್ಕೆ ನೇರ ಅವಕಾಶ ಕಲ್ಪಿಸಲಾಗಿದೆ ಎಂದರು.

ಮೇಳದಲ್ಲಿ ಆಲ್ಫಾನ್ಸೊ, ಬಾದಮಿ, ಮಲ್ಲಿಕ, ರಸಪುರಿ, ಮಲಗೋವಾ, ಸಿಂಧೂರ, ಕಾಲಪಾಡಿ, ತೋತಾಪುರಿ, ಬೆಂಗನ್‌ಪಲ್ಲಿ, ಶುಗರ್ ಬೇಬಿ ಸೇರಿದಂತೆ ಹಲವು ತಳಿಗಳ ಮಾವುಗಳು ಲಭ್ಯವಿದೆ ಮಾರಾಟಕ್ಕೆ ಮೇಳದಲ್ಲಿ ಇಡಲಾಗಿದೆ ಎಂದರು.

ಪ್ರಗತಿಪರ ಮಾವು ಬೆಳೆಗಾರರಾದ ವಾಸು, ಸಿದ್ದರಾಜು ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *