ಉ.ಕ ಜಿಲ್ಲೆಯಾದ್ಯಂತ 7.46 ಲಕ್ಷ ಮನೆ ಮನೆ ಗಣತಿ ನಮೂನೆ ವಿತರಣೆ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ–2026 ರ ಕಾರ್ಯ ಚುರುಕಿನಿಂದ ಸಾಗುತ್ತಿದ್ದು, ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

<

ಜಿಲ್ಲೆಯಲ್ಲಿ ಇದೂವರೆಗೆ 11,58,776 ಮತದಾರರ ವಿವರಗಳ ಹೊಂದಾಣಿಕೆ ಪೂರ್ಣಗೊಂಡಿದ್ದು, ಮನೆಮನೆಗೆ ಭೇಟಿ ನೀಡಿ 7,46,938 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಅಲ್ಲದೆ, 8,331 ನಮೂನೆಗಳ ಮಾಹಿತಿಯನ್ನು ಗಣಕೀಕರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮನೆಮನೆ ಭೇಟಿ ವೇಳೆ ಮತದಾರರ ವಿವರಗಳ ಪರಿಶೀಲನೆ ನಡೆಸಿದಾಗ ಒಟ್ಟು 187 ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 27 ಶಾಶ್ವತವಾಗಿ ಸ್ಥಳಾಂತರಗೊಂಡವರು, 153 ಮರಣ ಹೊಂದಿದವರು ಸೇರಿದಂತೆ ದ್ವಿಪ್ರತಿ ಮತದಾರರ ಪ್ರಕರಣಗಳೂ ಗುರುತಿಸಲಾಗಿದ್ದು, ಅವುಗಳ ಪರಿಶೀಲನೆ ಹಾಗೂ ಅಗತ್ಯ ಕ್ರಮ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *