ಸಿಇಟಿ ಫಲಿತಾಂಶದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜು ಮೇಲುಗೈ, 15 ರ‍್ಯಾಂಕ್‌; ಹೊಸ ದಾಖಲೆ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮೆರೆದಿದ್ದಾರೆ. ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಪರೀಕ್ಷೆಯ ಆರು ವಿಭಾಗಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಟಾಪ್-10 ಪಟ್ಟಿಯಲ್ಲಿ ಒಟ್ಟು 15 ರ‍್ಯಾಂಕ್‌ಗಳನ್ನು ಪಡೆದು ಹೊಸ ಇತಿಹಾಸ ನಿರ್ಮಿಸಿದ್ದಾರೆ.

<

ಟಾಪ್-10 ರ‍್ಯಾಂಕ್‌ಗಳಲ್ಲಿ ಮೂವರು ವಿದ್ಯಾರ್ಥಿಗಳು 3ನೇ ರ‍್ಯಾಂಕ್, ಮೂವರು 4ನೇ ರ‍್ಯಾಂಕ್, ಒಬ್ಬ ವಿದ್ಯಾರ್ಥಿ 6ನೇ ರ‍್ಯಾಂಕ್ , ಮೂವರು 7ನೇ ರ‍್ಯಾಂಕ್ ಹಾಗೂ ಐವರು 8ನೇ ರ‍್ಯಾಂಕ್ ಗಳಿಸಿರುವುದು ಸಂಸ್ಥೆಯ ಸಾಧನೆಗೆ ಮತ್ತಷ್ಟು ಮೆರುಗು ತಂದಿದೆ.

ಸಮಯ್ ಎ.ಎಸ್. ಅವರು ಕೃಷಿ, ಫುಡ್ ಸೈನ್ಸ್ ಹಾಗೂ ಸೆರಿಕಲ್ಚರ್ ವಿಭಾಗಗಳಲ್ಲಿ 3ನೇ ರ‍್ಯಾಂಕ್ ಗಳಿಸಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ 23ನೇ ರ‍್ಯಾಂಕ್ ಪಡೆದಿದ್ದಾರೆ. ರಿಶಿಕಾ ಕೆ.ಎಸ್. ಅವರು ಕೃಷಿ, ಫುಡ್ ಸೈನ್ಸ್ ಹಾಗೂ ಸೆರಿಕಲ್ಚರ್ ವಿಭಾಗಗಳಲ್ಲಿ 4ನೇ ರ‍್ಯಾಂಕ್, ಎಂಜಿನಿಯರಿಂಗ್‌ನಲ್ಲಿ 20ನೇ, ನರ್ಸಿಂಗ್ ಹಾಗೂ ಪಶುವೈದ್ಯಕೀಯ ವಿಭಾಗಗಳಲ್ಲಿ 26ನೇ ರ‍್ಯಾಂಕ್ ಪಡೆದಿದ್ದಾರೆ.

ಅಂಕಿತ್ ಅಶೋಕ್ ದೊಡವಾಳ ಕೃಷಿಯಲ್ಲಿ 6ನೇ ರ‍್ಯಾಂಕ್ ಗಳಿಸಿದ್ದು, ಪಶುವೈದ್ಯಕೀಯ, ನರ್ಸಿಂಗ್ ಹಾಗೂ ಬಿ-ಫಾರ್ಮಾದಲ್ಲಿ 11ನೇ ಮತ್ತು ಎಂಜಿನಿಯರಿಂಗ್‌ನಲ್ಲಿ 43ನೇ ರ‍್ಯಾಂಕ್ ಪಡೆದಿದ್ದಾರೆ. ದೀಕ್ಷಾ ಶೆಣೈ ಬಿಎನ್‌ವೈಎಸ್‌ನಲ್ಲಿ 6ನೇ ರ‍್ಯಾಂಕ್, ಪಶುವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 14ನೇ, ಬಿ-ಫಾರ್ಮಾ ಹಾಗೂ ಡಿ-ಫಾರ್ಮಾದಲ್ಲಿ 30ನೇ ರ‍್ಯಾಂಕ್ ಗಳಿಸಿದ್ದಾರೆ.

ಅರಳೆ ವಿರೂಪಾಕ್ಷಿ ಕೃಷಿ, ಫುಡ್ ಸೈನ್ಸ್ ಹಾಗೂ ಸೆರಿಕಲ್ಚರ್‌ನಲ್ಲಿ 7ನೇ ರ‍್ಯಾಂಕ್ ಪಡೆದಿದ್ದು, ಪಶುವೈದ್ಯಕೀಯ ಮತ್ತು ನರ್ಸಿಂಗ್‌ನಲ್ಲಿ 33ನೇ ಹಾಗೂ ಎಂಜಿನಿಯರಿಂಗ್‌ನಲ್ಲಿ 36ನೇ ರ‍್ಯಾಂಕ್ ಗಳಿಸಿದ್ದಾರೆ. ಕೃತಿಕಾ ಮಲ್ಲಿಕಾರ್ಜುನ ಕೃಷಿ, ಫುಡ್ ಸೈನ್ಸ್ ಹಾಗೂ ಸೆರಿಕಲ್ಚರ್ ವಿಭಾಗಗಳಲ್ಲಿ 8ನೇ ರ‍್ಯಾಂಕ್ ಹಾಗೂ ಎಂಜಿನಿಯರಿಂಗ್‌ನಲ್ಲಿ 40ನೇ ರ‍್ಯಾಂಕ್ ಪಡೆದಿದ್ದಾರೆ. ರಿಷಬ್ ಎಂ. ಶೆಟ್ಟಿ ನರ್ಸಿಂಗ್ ಮತ್ತು ಪಶುವೈದ್ಯಕೀಯ ವಿಭಾಗಗಳಲ್ಲಿ 8ನೇ ಹಾಗೂ ಬಿ-ಫಾರ್ಮಾ ಮತ್ತು ಫಾರ್ಮಾ-ಡಿಯಲ್ಲಿ 15ನೇ ರ‍್ಯಾಂಕ್ ಗಳಿಸಿ ಗಮನ ಸೆಳೆದಿದ್ದಾರೆ.

ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಗುಣಮಟ್ಟದ ಬೋಧನೆ ಮತ್ತು ಸಮರ್ಪಕ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಬಿಎಸ್ಸಿ ಕೃಷಿ ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ ಐದು ರ‍್ಯಾಂಕ್‌ಗಳನ್ನು ಎಕ್ಸ್ಪರ್ಟ್ ವಿದ್ಯಾರ್ಥಿಗಳು ಪಡೆದುಕೊಂಡಿರುವುದು ವಿಶೇಷ. ಈಗಾಗಲೇ ಬೋರ್ಡ್ ಪರೀಕ್ಷೆ ಹಾಗೂ ಜೆಇಇ ಮೇನ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ನೀಟ್ ಫಲಿತಾಂಶದಲ್ಲಿಯೂ ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇದೆ. ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

What do you feel about this post?

0%
like

Like

17%
love

Love

33%
happy

Happy

0%
haha

Haha

0%
sad

Sad

50%
angry

Angry

Leave a Reply

Your email address will not be published. Required fields are marked *