ಮಂಗಳೂರು: ಜಾಗತಿಕ ಮಟ್ಟದಲ್ಲಿ ವಸತಿ ಹಾಗೂ ಪ್ರವಾಸೋದ್ಯಮ ಸೇವೆಗಳನ್ನು ಒದಗಿಸುವ ಪ್ರಮುಖ ಜಾಲತಾಣವಾದ ಏರ್‌ಬಿಎನ್‌ಬಿ, ಪ್ರವಾಸಿಗರ ಪ್ರಯಾಣವನ್ನು ಅತ್ಯಂತ ಸುಗಮ ಹಾಗೂ ಆರಾಮದಾಯಕವಾಗಿಸಲು ಹಲವಾರು ವಿಶೇಷ ವಿನೂತನ ಸೇವೆಗಳನ್ನು ಘೋಷಿಸಿದೆ. ಇನ್ಮುಂದೆ ಗ್ರಾಹಕರು ಕೇವಲ ಉಳಿದುಕೊಳ್ಳುವ ರೂಮ್ ಗಳನ್ನು ಮಾತ್ರವಲ್ಲದೆ ಕಾರ್ ಬಾಡಿಗೆ, ದಿನಸಿ ವಿತರಣೆ, ಏರ್ ಪೋರ್ಟ್ ಪಿಕ್ ಅಪ್ ಮತ್ತು ಪ್ರತಿಷ್ಠಿತ ಬೊಟಿಕ್ ಹೋಟೆಲ್ ಗಳ ಬುಕ್ಕಿಂಗ್ ಸೌಲಭ್ಯವನ್ನೂ ಒಂದೇ ಸೂರಿನಡಿ ಪಡೆಯಬಹುದು ಏರ್‌ಬಿಎನ್‌ಬಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಬ್ರಿಯಾನ್ ಚೆಸ್ಕಿ ಹೇಳಿದರು.
ಕ್ರೀಡಾಭಿಮಾನಿಗಳಿಗಾಗಿ ಕಂಪನಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು, ಫಿಫಾ ವಿಶ್ವಕಪ್ 2026ರ ಪಂದ್ಯಾವಳಿಗಳ ವಿಶೇಷ ವೀಕ್ಷಣೆ ಹಾಗೂ ಆತಿಥ್ಯದ ಮುಕ್ತ ಪ್ರವೇಶದ ಸೌಲಭ್ಯವನ್ನು ಕಲ್ಪಿಸುತ್ತಿದೆ. ಲಾಸ್ ಏಂಜಲೀಸ್ ನಲ್ಲಿ ವಿಶ್ವಕಪ್ ಚಾಂಪಿಯನ್ಸ್ ಆದ ಅಬ್ಬಿ ವಾಂಬಾಚ್ ಅವರೊಂದಿಗೆ ಪಂದ್ಯ ವೀಕ್ಷಿಸುವ ಅಥವಾ ಅರ್ಜೆಂಟಿನಾದ ಫುಟ್ ಬಾಲ್ ದಿಗ್ಗಜ ಜೇವಿಯರ್ ಮ್ಯಾಷೆರಾನೊ ಅವರೊಂದಿಗೆ ಖುದ್ದಾಗಿ ಮೈದಾನಕ್ಕಿಳಿದು ತರಬೇತಿ ಪಡೆಯುವ ಅಪರೂಪದ ಅವಕಾಶಗಳನ್ನು ಇದು ಒಳಗೊಂಡಿದೆ ಎಂದರು.
ಪ್ರಯಾಣ ಎನ್ನುವುದು ಕೇವಲ ಆರಾಮದಾಯಕವಾಗಿದ್ದರೆ ಸಾಲದು, ಅದು ಅರ್ಥಪೂರ್ಣವಾಗಿರಬೇಕು. ಅತ್ಯುತ್ತಮ ಪ್ರವಾಸಗಳು ನಿಮಗೆ ಹೊಸ ವಿಷಯಗಳನ್ನು ಅನ್ವೇಷಿಸಲು ಮತ್ತು ಸಮೃದ್ಧ ವ್ಯಕ್ತಿತ್ವದೊಂದಿಗೆ ಮರಳಿ ಬರಲು ಸಹಾಯ ಮಾಡುತ್ತವೆ. ಏರ್‌ಬಿಎನ್‌ಬಿಯಲ್ಲಿ ನಾವು ಅಂತಹ ವ್ಯವಸ್ಥೆಯನ್ನೇ ನಿರ್ಮಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಪ್ರಯಾಣ ಸುಲಭಗೊಳಿಸುವ ಪ್ರಮುಖ ಸೇವೆಗಳು:
ದಿನಸಿ ಹಾಗೂ ಲಗೇಜ್ ಸೌಲಭ್ಯ: ಗ್ರಾಹಕರು ತಂಗುದಾಣ ತಲುಪುವ ಮುನ್ನವೇ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಬಹುದು. ಆಯ್ದ ನಗರಗಳಲ್ಲಿ ಆತಿಥೇಯರೇ ಇದನ್ನು ಜೋಡಿಸಿಡಲಿದ್ದಾರೆ. ಹಾಗೆಯೇ ಬೌನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಚೆಕ್-ಇನ್ ಮುನ್ನ ಅಥವಾ ಚೆಕ್‌ಔಟ್ ನಂತರ ಬ್ಯಾಗ್‌ಗಳನ್ನು ಸುರಕ್ಷಿತವಾಗಿ ಇಡಲು ಶೇ. 15 ರಷ್ಟು ರಿಯಾಯಿತಿ ಸಿಗಲಿದೆ.
ಕಾರ್ ಬಾಡಿಗೆ ಮತ್ತು ಪಿಕ್ ಅಪ್: ವೆಲ್ ಕಮ್ ಪಿಕ್‌ಅಪ್ಸ್ ಮೂಲಕ ಖಾಸಗಿ ಕಾರು ಸೇವೆ ಲಭ್ಯವಿದ್ದು, ಗ್ರಾಹಕರಿಗೆ ಶೇ. 20ರಷ್ಟು ರಿಯಾಯಿತಿ ಸಿಗಲಿದೆ. ಇದಲ್ಲದೆ ನೇರವಾಗಿ ಆ್ಯಪ್‌ನಲ್ಲಿಯೇ ಬಾಡಿಗೆ ಕಾರುಗಳನ್ನು ಹುಡುಕುವ ಅವಕಾಶ ನೀಡಲಾಗಿದ್ದು, ಮೊದಲ ಬುಕ್ಕಿಂಗ್ ಮೇಲೆ ಶೇ. 20 ರಷ್ಟು ಕ್ರೆಡಿಟ್ ಬ್ಯಾಕ್ ಸಿಗಲಿದೆ.
ವಿಶಿಷ್ಟ ಸ್ಥಳೀಯ ಅನುಭವಗಳು: ತಾಜ್ ಮಹಲ್, ಲಂಡನ್ ಟವರ್ ಸೇರಿದಂತೆ ಜಗತ್ತಿನ ಪ್ರಸಿದ್ಧ ಸ್ಥಳಗಳನ್ನು ಸ್ಥಳೀಯ ತಜ್ಞರೊಂದಿಗೆ ವೀಕ್ಷಿಸಲು 3,000ಕ್ಕೂ ಹೆಚ್ಚು ಪ್ಯಾಕೇಜ್ ಗಳನ್ನು ಮತ್ತು 2,500ಕ್ಕೂ ಹೆಚ್ಚು ಆಹಾರ ಸಂಸ್ಕೃತಿಯ ಅನುಭವಗಳನ್ನು ಸೇರಿಸಲಾಗಿದೆ.
ಬೊಟಿಕ್ ಹೋಟೆಲ್‌ಗಳು ಮತ್ತು ಎಐ ತಂತ್ರಜ್ಞಾನ:
ಈ ಬೇಸಿಗೆಯಲ್ಲಿ ನ್ಯೂಯಾರ್ಕ್, ಪ್ಯಾರಿಸ್, ಲಂಡನ್ ಸೇರಿದಂತೆ ವಿಶ್ವದ 20 ಪ್ರಮುಖ ನಗರಗಳಲ್ಲಿನ ಸಾವಿರಾರು ಸ್ವತಂತ್ರ ಬೊಟಿಕ್ ಹೋಟೆಲ್‌ಗಳನ್ನು ಏರ್‌ಬಿಎನ್‌ಬಿ ವ್ಯಾಪ್ತಿಗೆ ತರಲಾಗುತ್ತಿದೆ. ಇಲ್ಲಿ ಕಡಿಮೆ ದರದ ಭರವಸೆಯೊಂದಿಗೆ ಶೇ. 15 ರವರೆಗೆ ರಿಯಾಯಿತಿ ಕ್ರೆಡಿಟ್ ಕೂಡ ಸಿಗಲಿದೆ.
ತನ್ನ ಆ್ಯಪ್ ಅನ್ನು ಎಐ ತಂತ್ರಜ್ಞಾನದೊಂದಿಗೆ ಮೇಲ್ದರ್ಜೆಗೆ ಏರಿಸಲಾಗಿದ್ದು, ಇದು ನೂರು ಕೋಟಿಗೂ ಹೆಚ್ಚು ಗ್ರಾಹಕರ ರಿವ್ಯೂಗಳನ್ನು ಸಂಶ್ಲೇಷಿಸಿ ಮುಖ್ಯ ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಪ್ರಸ್ತುತಪಡಿಸಲಿದೆ. ಎಐ ಆಧಾರಿತ ಕಂಪಾರಿಷನ್ ವ್ಯೂ ಹಾಗೂ 11 ಭಾಷೆಗಳಲ್ಲಿ ಲಭ್ಯವಿರುವ ಎಐ ಗ್ರಾಹಕ ಸೇವೆ ಪ್ರವಾಸಿಗರಿಗೆ ಡಿಜಿಟಲ್ ಸಹಾಯ ನೀಡಲಿವೆ. ಈ ಹೊಸ ಸೇವೆಗಳು ಇಂದಿನಿಂದಲೇ ಜಗತ್ತಿನ ಆಯ್ದ ದೇಶಗಳಲ್ಲಿ ಲಭ್ಯವಿದ್ದು, ಕಾರ್ ಬಾಡಿಗೆ ಹಾಗೂ ಹೆಚ್ಚುವರಿ ಆ್ಯಪ್ ವೈಶಿಷ್ಟ್ಯಗಳು ಈ ಬೇಸಿಗೆಯ ಕೊನೆಯಲ್ಲಿ ಹಂತಹಂತವಾಗಿ ಬಿಡುಗಡೆಯಾಗಲಿವೆ.
What do you feel about this post?
Like
Love
Happy
Haha
Sad
