ಸುಳ್ಯ: 3 ವರ್ಷದ ಮರಿ ಆನೆ ತಿವಿದು ಕೊಂದ ಗಂಡಾನೆ, ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ಪರಿಶೀಲನೆ

ಶಿರಸಿ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ರಾಜ್ಯ

Spread the love

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆ ಎಂಬಲ್ಲಿ 3 ವರ್ಷದ ಮರಿ ಆನೆ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಗಂಡಾನೆಗಳ ದಾಳಿ ಈ ಘಟನೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಘಟನೆ ಸೋಮವಾರ ಸಂಭವಿಸಿದ್ದು, ಅರಂತೋಡು ಗ್ರಾಮದ ಬೆದ್ರುಪಣೆ ಅಶೋಕ್ ಎಂಬುವವರ ಖಾಸಗಿ ತೋಟದಲ್ಲಿ ಈ ಅವಘಡ ನಡೆದಿರುವುದು ತಿಳಿದು ಬಂದಿದೆ. ರಾತ್ರಿ ತೋಟಕ್ಕೆ ಆನೆಗಳು ದಾಳಿಯಿಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಂದು ಅವುಗಳನ್ನು ಅರಣ್ಯಕ್ಕೆ ಓಡಿಸುವ ಕೆಲಸ ಮಾಡುತ್ತಿದ್ದರು. ಬಳಿಕ ತಡರಾತ್ರಿ 3 ಗಂಟೆಯ ವೇಳೆಗೆ ಆನೆಗಳ ನಡುವೆ ಕಿತ್ತಾಟ ನಡೆದಿರುವ ಶಂಕಿ ವ್ಯಕ್ತವಾಗಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿ ಮಂಜುನಾಥ್ ಎನ್. ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದು, ಇನ್ನು ಮರಣೋತ್ತರ ಪರೀಕ್ಷೆ ಸಹಿತ ಇತರೆ ಪ್ರಕ್ರಿಯೆಗಳನ್ನು ನಡೆಸಲು ಚಿಂತಿಸಲಾಗಿದೆ.

ತಾಯಿ ಜತೆಗೆ ಇದ್ದ ಮೂರು ವರ್ಷದ ಆನೆ ಮರಿಯನ್ನು ಗಂಡಾನೆ ತಿವಿದು ಪರಿಣಾಮ ಮರಿ ಆನೆ ಸಾವನ್ನಪ್ಪಿದೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಎಲ್ಲ ಪ್ರಕ್ರಿಯೆಗಳನ್ನು ಮಾಡಲಾಗಿದೆ. ಸುಳ್ಯ ತಾಲ್ಲೂಕಿನ ಅರಂತೋಡು ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಡಿಎಫ್ ಒ ರವಿಶಂಕರ್ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *