ವಿಶ್ವ ಹೃದಯ ದಿನ, ಇಂಡಿಯಾನಾ ಆಸ್ಪತ್ರೆಯಲ್ಲಿ 1,499ಕ್ಕೆ ಹೃದಯ ತಪಾಸಣೆ, ಸೆ.30 ರವರೆಗೆ ವಿಶೇಷ ಕೊಡುಗೆ: ಶಿವಪ್ರಸಾದ್ ಶೆಟ್ಟಿ

ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಕಾರವಾರ:ವಿಶ್ವ ಹೃದಯ ದಿನದ ಅಂಗವಾಗಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್ ಸಾರ್ವಜನಿಕರಿಗಾಗಿ ವಿಶೇಷ ಹೃದಯ ತಪಾಸಣಾ ಪ್ಯಾಕೇಜ್ ಘೋಷಿಸಿದೆ. ಸಾಮಾನ್ಯವಾಗಿ ₹3,000 ವೆಚ್ಚವಾಗುವ ತಪಾಸಣೆಯನ್ನು ₹1,499ಕ್ಕೆ ನೀಡಲಾಗುತ್ತಿದ್ದು, ಈ ಸೌಲಭ್ಯ ಸೆಪ್ಟೆಂಬರ್ 30ರವರೆಗೆ ಲಭ್ಯವಿರಲಿದೆ ಎಂದು ಸಂಸ್ಥೆಯ ಪ್ರತಿನಿಧಿ ಶಿವಪ್ರಸಾದ್ ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

<

ರಿಯಾಯಿತಿ ದರದ ಪ್ಯಾಕೇಜ್‌ನಲ್ಲಿ ಇಸಿಜಿ, ಎಕೋ ಅಥವಾ ಟಿಎಂಟಿ, ಲಿಪಿಡ್ ಪ್ರೊಫೈಲ್, ಕ್ರಿಯೇಟಿನೈನ್, ರಕ್ತದಲ್ಲಿನ ಸಕ್ಕರೆ ಪ್ರಮಾಣದ ಪರೀಕ್ಷೆ ಸೇರಿದಂತೆ ಸಂಪೂರ್ಣ ರಕ್ತ ಮತ್ತು ಹೃದಯ ತಪಾಸಣೆಗಳನ್ನು ಒಳಗೊಂಡಿದೆ ಎಂದರು.

ಇದರ ಜತೆಗೆ ಹೃದ್ರೋಗ ತಜ್ಞರ ನೇರ ಸಮಾಲೋಚನೆ ಹಾಗೂ ಸೂಕ್ತ ಆಹಾರ ಪದ್ಧತಿ ಕುರಿತು ವೈದ್ಯಕೀಯ ಮಾರ್ಗದರ್ಶನವೂ ದೊರೆಯಲಿದೆ.ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ರಕ್ತದಲ್ಲಿ ಅಧಿಕ ಕೊಲೆಸ್ಟ್ರಾಲ್ ಇರುವವರು ಹಾಗೂ ಕುಟುಂಬದಲ್ಲಿ ಹೃದ್ರೋಗದ ಇತಿಹಾಸ ಹೊಂದಿರುವವರು ನಿಯಮಿತವಾಗಿ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದರು.

ತೀವ್ರ ಮಾನಸಿಕ ಒತ್ತಡ, ಧೂಮಪಾನ, ಮದ್ಯಪಾನ, ಅತಿಯಾದ ಜಂಕ್ ಫುಡ್ ಸೇವನೆ ಹಾಗೂ ದೈಹಿಕ ಚಟುವಟಿಕೆಯ ಕೊರತೆಯ ಜಡ ಜೀವನಶೈಲಿ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಉಂಟಾಗುವ ನಿದ್ರಾಹೀನತೆ ಹಾಗೂ ಹವಾನಿಯಂತ್ರಿತ ಕೊಠಡಿಗಳಲ್ಲಿ ದೀರ್ಘಕಾಲ ಇರುವುದರಿಂದ ಉಂಟಾಗಬಹುದಾದ ನಿರ್ಜಲೀಕರಣದ ಬಗ್ಗೆಯೂ ಎಚ್ಚರ ವಹಿಸಬೇಕು ಎಂದರು.

ಹೃದ್ರೋಗ ಸಂಬಂಧಿತ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರನ್ನು ಪ್ರೇರೇಪಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಮಂಗಳೂರಿನ ಪಂಪ್‌ವೆಲ್ ಮಹಾವೀರ ಸರ್ಕಲ್ ಬಳಿಯ ಆಸ್ಪತ್ರೆಯಲ್ಲಿ ತಪಾಸಣೆ ಪಡೆಯಲು ಇಚ್ಛಿಸುವವರು 72590 –16560 ಸಂಖ್ಯೆಗೆ ಕರೆ ಮಾಡಿ ಮುಂಗಡ ಕಾಯ್ದಿರಿಸಿಕೊಳ್ಳಬಹುದು. ತುರ್ತು ವೈದ್ಯಕೀಯ ಸೇವೆಗಾಗಿ 0824-2224444 ಸಂಖ್ಯೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh

Leave a Reply