ಮಂಗಳೂರು: ಕೋಣಾಜೆಯ ಪಿ.ಎ. ಪ್ರಥಮ ದರ್ಜೆ ಕಾಲೇಜು ವತಿಯಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಓರಿಯಂಟೇಶನ್ ಕಾರ್ಯಕ್ರಮ ಪೇಸ್ ನಾಲೆಡ್ಜ್ ಸಿಟಿಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಿ.ಎ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ರಮೀಝ್ ಎಂ.ಕೆ. ಮಾತನಾಡಿ, ಕಾಲೇಜು ಜೀವನವು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಹಂತವಾಗಿದ್ದು, ಲಭ್ಯವಿರುವ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ವ್ಯಕ್ತಿತ್ವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫ್ರಾಜ್ ಜೆ. ಹಾಸಿಂ ವಹಿಸಿದ್ದರು.
ಅಂತರರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಐಎಸ್‌ಡಿಸಿ), ಕೇರಳದ ಸಂಸ್ಥಾ ಸಹಭಾಗಿತ್ವ ವಿಭಾಗದ ಮುಖ್ಯಸ್ಥ ಶರತ್ ವೇಣುಗೋಪಾಲ್ ಹಾಗೂ ಐಎಸ್‌ಡಿಸಿ ಯುಕೆ ಪ್ರಾದೇಶಿಕ ವ್ಯವಸ್ಥಾಪಕಿ ನಂದಾದೇವಿ ಕೆ.ವಿ. ಗೌರವ ಅತಿಥಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯ, ಜಾಗತಿಕ ಅವಕಾಶಗಳು ಹಾಗೂ ಉದ್ಯೋಗಾಭಿಮುಖ ಶಿಕ್ಷಣದ ಕುರಿತು ಮಾಹಿತಿ ನೀಡಿದರು.
ಡಾ. ಸಲೀಮುಲ್ಲಾ ಖಾನ್, ಡಾ. ಅಫೀಫಾ ಸಲೀಮ್, ಡಾ. ಸಯ್ಯಿದ್ ಅಮೀನ್ ಅಹ್ಮದ್, ಮುಹಮ್ಮದ್ ಫೈಝಲ್ ಎನ್., ಡಾ. ಇಕ್ಬಾಲ್, ಪ್ರೊ. ಇಸ್ಮಾಈಲ್ ಖಾನ್, ಶರಫುದ್ದೀನ್ ಪಿ.ಕೆ., ಹಾರೀಸ್ ಟಿ.ಡಿ. ಹಾಗೂ ಶಫಿನಾಝ್ ಸಯ್ಯಿದ್ ಇಸ್ಮಾಯಿಲ್ ಇದ್ದರು.
ಉಪಪ್ರಾಂಶುಪಾಲ ಡಾ. ಜಿ. ಹರಿಕೃಷ್ಣನ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕಿ ಮುನೀರಾ ಎ. ವಂದಿಸಿದರು. ಖೈರುನ್ನೀಸಾ, ಅಲೀಮಾ ನಬೀಲಾ ಹಾಗೂ ನಜ್ಲಾ ಮರಿಯಮ್ ಕಾರ್ಯಕ್ರಮ ನಿರೂಪಿಸಿದರು.
What do you feel about this post?
Like
Love
Happy
Haha
Sad







