ಮಂಗಳೂರು: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಹೃದಯ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಹಾಗೂ ಸಾರ್ವಜನಿಕರಿಗೆ ಹೃದಯ ತಪಾಸಣೆ ಸೌಲಭ್ಯ ಒದಗಿಸುವ ಉದ್ದೇಶದಿಂದ ನಗರದ ಒಮೇಗ ಆಸ್ಪತ್ರೆಯಲ್ಲಿ ಇದೇ 29ರಂದು ಹೃದಯ ಆರೋಗ್ಯ ಜಾಗೃತಿ ಶಿಬಿರ ಆಯೋಜಿಸಲಾಗಿದೆ.
ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ನಡೆಯಲಿರುವ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಸೇರಿದಂತೆ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ತಪಾಸಣೆಗಳನ್ನು ನಡೆಸಲಾಗುತ್ತದೆ. ರಕ್ತದೊತ್ತಡ ಪರೀಕ್ಷೆ, ರಕ್ತದಲ್ಲಿನ ಸಕ್ಕರೆ ಪ್ರಮಾಣದ ಪರೀಕ್ಷೆ, ಇಸಿಜಿ ಹಾಗೂ ಹೃದಯದ ಸ್ಕ್ಯಾನಿಂಗ್ (ಎಕೋ) ಸೇರಿದಂತೆ ತಪಾಸಣೆ ನಡೆಯಲಿದ್ದು, ಹೃದ್ರೋಗ ತಜ್ಞರಿಂದ ವೈದ್ಯಕೀಯ ಸಲಹೆಯನ್ನೂ ಪಡೆಯಬಹುದಾಗಿದೆ.
ಒಮೇಗ ಆಸ್ಪತ್ರೆಯ ನಿರ್ದೇಶಕ ಹಾಗೂ ಮುಖ್ಯ ಹೃದ್ರೋಗ ತಜ್ಞ ಡಾ. ಕೆ. ಮುಕುಂದ್ ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಹೃದ್ರೋಗ ತಜ್ಞ ಹಾಗೂ ಹೃದಯದ ವಿದ್ಯುತ್ ಚಟುವಟಿಕೆ ತಜ್ಞ ಡಾ. ಯಾಜ್ಞಿಕ್ ಮುಕುಂದ್, ಅರಿವಳಿಕೆ ತಜ್ಞೆ ಹಾಗೂ ತೀವ್ರ ನಿಗಾ ಚಿಕಿತ್ಸಾ ವಿಭಾಗದ ತಜ್ಞೆ ಡಾ. ಮೇಘನ ಮುಕುಂದ್, ಕ್ಲಿನಿಕಲ್ ಹೃದ್ರೋಗ ತಜ್ಞರಾದ ಡಾ. ವಿನಾಯಕ್ ಹಾಗೂ ಡಾ. ಅಭಿಜಿತ್ ಪಾಟೀಲ್ ಅವರು ಶಿಬಿರಾರ್ಥಿಗಳ ತಪಾಸಣೆ ನಡೆಸಲಿದ್ದಾರೆ.
ಹೃದಯ ಸಂಬಂಧಿತ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಹಾಗೂ ಹೃದಯದ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವಂತೆ ಆಯೋಜಕರು ತಿಳಿಸಿದ್ದಾರೆ.
ನೋಂದಣಿಗೆ:ನಾಗರಾಜ್ ಟಿ. – 90355 39262, ಇಬ್ರಾಹಿಂ ಪಿ.ಕೆ. – 98442 43313.
What do you feel about this post?
Like
Love
Happy
Haha
Sad







