ಬೆಂಗಳೂರು: ನಾನು ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ, ಯಾವುದೇ ಕಾರಣಕ್ಕೂ ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ಸಕ್ರಿಯ ರಾಜಕಾರಣವನ್ನು ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ನನಗೆ ಎರಡು ಬಾರಿ ಮುಖ್ಯಮಂತ್ರಿ ಸ್ಥಾನ ಕೊಟ್ಟಿದೆ. ವಿರೋಧ ಪಕ್ಷ ನಾಯಕ ಸ್ಥಾನವನ್ನೂ ಕೊಟ್ಟಿದೆ, ಇದಕ್ಕಾಗಿ ನನ್ನ ಮೇಲೆ ನಂಬಿಕೆಯಿಟ್ಟ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಅಭಿನಂದನೆ ಹೇಳುತ್ತೇನೆ. ನಾನು ಕೊನೆಯ ಉಸಿರು ಇರೋವರೆಗೂ ರಾಜಕಾರಣದಲ್ಲಿ ಸಕ್ರಿಯ ಆಗಿರುತ್ತೇನೆ. ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡುತ್ತೇನೆ. ಸಮಾನತೆ ವಿಚಾರದಲ್ಲಿ ಧ್ವನಿ ಎತ್ತುತ್ತೇನೆ. ಮತದಾರರರೇ ನನ್ನ ಪ್ರಭುಗಳು, ಅವರು ಕೊಟ್ಟ ಅಧಿಕಾರ ಎಂದಿಗೂ ಮೋಸ ಮಾಡಿಲ್ಲ. ಹಣ ಮಾಡಬೇಕು ಎಂದು ರಾಜಕಾರಣಕ್ಕೆ ಬಂದಿಲ್ಲ. 50 ವರ್ಷಗಳ ರಾಜಕೀಯ ಜೀವನದಲ್ಲಿ ಎಂದಿಗೂ ಕೋಮ ಶಕ್ತಿಗಳ ಜತೆಗೆ ರಾಜೀ ಮಾಡಿಕೊಂಡಿಲ್ಲ ಎಂದರು.
ರಾಜ್ಯಪಾಲರ ಕಚೇರಿಯಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಸಂವಿಧಾನ ಪ್ರಕಾರ ಅಂಗೀಕರಿಸಿ ಮುಂದಿನ ಸಿಎಂ ಅಧಿಕಾರಕ್ಕೇರಲು ರಾಜ್ಯಪಾಲರು ಅವಕಾಶ ಮಾಡಿಕೊಡಬೇಕು. ನನಗೆ ಸಂವಿಧಾನವೇ ದೇವರು, ಅದರಿಂದಾಗಿಯೇ ಮುಖ್ಯಮಂತ್ರಿ, ಶಾಸಕ ಎಲ್ಲವೂ ಆಗುವಂತಾಯಿತು. ಇಲ್ಲದಿದ್ದರೆ ಆಗುತ್ತಿರಲಿಲ್ಲ. ನನಗೆ ಮತದಾರರು ಮತ್ತು ಸಂವಿಧಾನ ದೇವರು ಎಂದರು.
What do you feel about this post?
Like
Love
Happy
Haha
Sad
